Viral: ಡಚ್ ಸೊಸೆಗೆ ಫಿಲ್ಟರ್ ಕಾಫಿ ಕುಡಿಯುವುದು ಹೇಗೆಂದು ಹೇಳಿಕೊಡುತ್ತಿರುವ ಭಾರತೀಯ ಅತ್ತೆ, ವಿಡಿಯೋ ವೈರಲ್

ಭಾರತೀಯರು ಟೀ ಕಾಫಿ ಪ್ರಿಯರು. ಹೀಗಾಗಿ ಹೆಚ್ಚಿನವರು ಈ ಟೀ ಕಾಫಿಗೆ ಅಡಿಕ್ಟ್ ಆಗಿಬಿಟ್ಟಿದ್ದಾರೆ. ಊಟ ತಿಂಡಿಯನ್ನಾದರೂ ಬಿಟ್ಟರೂ, ಆದರೆ ಟೀ ಕಾಫಿಯನ್ನು ಮಾತ್ರ ಮಿಸ್ ಮಾಡುವುದೇ ಇಲ್ಲ. ಅದರಲ್ಲಿಯೂ ಈ ಇಲ್ಲಿನ ಜನರು ಫಿಲ್ಟರ್ ಕಾಫಿ ಸವಿಯುವ ಸ್ಟೈಲ್ ಬೇರೇನೇ ಬಿಡಿ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಡಚ್ ಸೊಸೆಗೆ ಭಾರತೀಯ ಅತ್ತೆಯೊಬ್ಬರು ಫಿಲ್ಟರ್ ಕಾಫಿಯನ್ನು ಕುಡಿಯುವುದು ಹೇಗೆ ಎಂದು ಹೇಳಿಕೊಡುತ್ತಿದ್ದಾರೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಫಿದಾ ಆಗಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 21, 2024 | 11:45 AM

ಎಷ್ಟೇ ಟೆನ್ಶನ್ ಇದ್ದರೂ ಒಂದು ಲೋಟ ಕಾಫಿ ಕುಡಿದ್ರೆ ಸಾಕು ಮೂಡ್ ಫ್ರೆಶ್ ಆಗುತ್ತೆ. ಈ ಫಿಲ್ಟರ್ ಕಾಫಿ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಸ್ಟ್ರಾಂಗ್ ಡಿಕಾಶನ್ ಗೆ ಚೆನ್ನಾಗಿ ಕುದಿಸಿದ ಹಾಲನ್ನು ಲೋಟದಲ್ಲಿ ಹಾಕಿ ಬೆರೆಸಿ ಕುಡಿದರೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ. ಹೌದು, ಈ ಫಿಲ್ಟರ್ ಕಾಫಿಯೂ ಯಾವ ಪಾನೀಯಕ್ಕೂ ಸರಿಸಾಟಿಯಾಗಲ್ಲ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಡಚ್ ಸೊಸೆಗೆ ದಕ್ಷಿಣ ಭಾರತದ ಅತ್ತೆಯೊಬ್ಬರು ಫಿಲ್ಟರ್ ಕಾಫಿಯನ್ನು ಕುಡಿಯುವುದು ಹೇಗೆ ಎಂದು ಹೇಳಿಕೊಡುತ್ತಿದ್ದಾರೆ.

ಈ ವಿಡಿಯೋವನ್ನು ಪ್ರಭುವಿಶ ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ‘ದಕ್ಷಿಣ ಭಾರತೀಯರು ಹಾಗೂ ಫಿಲ್ಟರ್ ಕಾಫಿ ಈ ಎರಡನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ’ ಎಂದು ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋದಲ್ಲಿ ದಕ್ಷಿಣ ಭಾರತದ ಕುಟುಂಬವೊಂದು ಹೋಟೆಲ್ ಗೆ ಹೋದ ಸಂದರ್ಭದಲ್ಲಿ ಫಿಲ್ಟರ್ ಕಾಫಿಯನ್ನು ಆರ್ಡರ್ ಮಾಡಿರುವುದನ್ನು ನೋಡಬಹುದು.

ದಕ್ಷಿಣ ಭಾರತದ ಫಿಲ್ಟರ್ ಕಾಫಿಯನ್ನು ಹೇಗೆ ಕುಡಿಯಬೇಕೆಂದು ಡಚ್ಚಿಗರಿಗೆ ಕಲಿಸೋಣ” ಎಂದು ಹಾಸ್ಯಮಯ ಶೀರ್ಷಿಕೆಯನ್ನು ಬರೆಯಲಾಗಿದೆ. ಪ್ರಭುವಿಶ ಎನ್ನುವ ವ್ಯಕ್ತಿಯ ಪತ್ನಿಯೂ ಮೂಲತಃ ನೆದರ್‌ಲ್ಯಾಂಡ್‌ನವರು, ಅವರು ಈಗಾಗಲೇ ದಕ್ಷಿಣ ಭಾರತದ ಕಾಫಿ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಈ ವ್ಯಕ್ತಿಯ ಅತ್ತೆಯೂ ಬ್ಲಾಕ್ ಕಾಫಿಯನ್ನು ಆರ್ಡರ್ ಮಾಡಿರುವುದನ್ನು ಕಾಣಬಹುದು.

ಇದನ್ನೂ ಓದಿ: ಎರಡು ಮಕ್ಕಳ ತಂದೆಯ ಪ್ರೀತಿಯ ಬಲೆಯಲ್ಲಿ ಬಿದ್ದ ಮೂರು ಮಕ್ಕಳ ತಾಯಿ; ಪ್ರೇಮಿಯೊಂದಿಗೆ ಹೆಂಡತಿಯ ಮದುವೆ ಮಾಡಿಸಿದ ಗಂಡ

ಅದಲ್ಲದೇ, ಈ ಭಾರತೀಯ ಅತ್ತೆಯೂ ಡಚ್ ಸೊಸೆ ಹಾಗೂ ಸೊಸೆಯ ತಾಯಿಗೆ ಫಿಲ್ಟರ್ ಕಾಫಿ ಕುಡಿಯುವ ವಿಧಾನವನ್ನು ಕಲಿಸಿಕೊಡುತ್ತಿದ್ದಾರೆ. ಡಚ್ ಮಹಿಳೆಯರಿಬ್ಬರೂ ಕಾಫಿಯನ್ನು ಕುಡಿಯುವ ವಿಧಾನವನ್ನು ಕಲಿಯುತ್ತಾ ಆ ಕ್ಷಣವನ್ನು ಆನಂದಿಸುವುದನ್ನು ನೋಡಬಹುದು. ಈ ವಿಡಿಯೋ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಬಳಕೆದಾರರೊಬ್ಬರು, ‘ಕಾಫಿಯೊಂದಿಗೆ ನಗು’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ನಾನು ಚೆನ್ನೈಗೆ ಭೇಟಿಕೊಟ್ಟಾಗ ಫಿಲ್ಟರ್ ಕಾಫಿಯನ್ನು ಇಷ್ಟ ಪಟ್ಟು ಸವಿಯುತ್ತೇನೆ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
ಬಿಗ್​ಬಾಸ್ ಮನೆಯಲ್ಲಿ ರಾಜಿ ಸಂಧಾನ, ದೂರಾದವರು ಒಂದಾದರೇ?
ಬಿಗ್​ಬಾಸ್ ಮನೆಯಲ್ಲಿ ರಾಜಿ ಸಂಧಾನ, ದೂರಾದವರು ಒಂದಾದರೇ?
ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು
ಮಡಿದವರು ಶಿಗ್ಗಾವಿ ಕ್ಷೇತ್ರದ ಸವಣೂರು ತಾಲ್ಲೂಕಿನ ತರಕಾರಿ ವ್ಯಾಪಾರಸ್ಥರು
ಬಾಗಲಕೋಟೆಯಲ್ಲಿ ಎದೆ ಝಲ್​ ಎನಿಸುವ ಟ್ಯ್ರಾಕ್ಟರ್​ ರೇಸ್​: ವಿಡಿಯೋ ನೋಡಿ
ಬಾಗಲಕೋಟೆಯಲ್ಲಿ ಎದೆ ಝಲ್​ ಎನಿಸುವ ಟ್ಯ್ರಾಕ್ಟರ್​ ರೇಸ್​: ವಿಡಿಯೋ ನೋಡಿ
ಬೇರೆ ಪಕ್ಷಗಳ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿಲ್ಲ: ಜಿಟಿ ದೇವೇಗೌಡ
ಬೇರೆ ಪಕ್ಷಗಳ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿಲ್ಲ: ಜಿಟಿ ದೇವೇಗೌಡ
ಶಿಲೆಸಿಕ್ಕ ಜಮೀನಲ್ಲಿ ಭವ್ಯ ರಾಮಮಂದಿರ ನಿರ್ಮಿಸಲು ಸ್ಥಳೀಯರ ಆಗ್ರಹ
ಶಿಲೆಸಿಕ್ಕ ಜಮೀನಲ್ಲಿ ಭವ್ಯ ರಾಮಮಂದಿರ ನಿರ್ಮಿಸಲು ಸ್ಥಳೀಯರ ಆಗ್ರಹ
ಮೇಲ್ಸೇತುವೆಯಲ್ಲಿ ಚಲಿಸುತ್ತಿದ್ದಾಗ ರೈಲಿನಿಂದ ಕೆಳಗೆ ಜಿಗಿದ ವ್ಯಕ್ತಿ
ಮೇಲ್ಸೇತುವೆಯಲ್ಲಿ ಚಲಿಸುತ್ತಿದ್ದಾಗ ರೈಲಿನಿಂದ ಕೆಳಗೆ ಜಿಗಿದ ವ್ಯಕ್ತಿ
ಮೈಕ್ರೋ ಫೈನಾನ್ಸ್​ಗಳ ಅಟ್ಟಹಾಸಕ್ಕೆ ಕಡಿವಾಣ ಹಾಕುತ್ತೇವೆ: ಪರಮೇಶ್ವರ್
ಮೈಕ್ರೋ ಫೈನಾನ್ಸ್​ಗಳ ಅಟ್ಟಹಾಸಕ್ಕೆ ಕಡಿವಾಣ ಹಾಕುತ್ತೇವೆ: ಪರಮೇಶ್ವರ್
ಕಳೆದ ತಿಂಗಳು ಕೂಡ ಆಚರಿಸಲಾಗಿತ್ತು ಕಲಬುರಗಿ ಬಂದ್
ಕಳೆದ ತಿಂಗಳು ಕೂಡ ಆಚರಿಸಲಾಗಿತ್ತು ಕಲಬುರಗಿ ಬಂದ್