AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೈಗೆ ಬಂದ ತುತ್ತು ಬಾಯಿಗೆ ಬರ್ಲಿಲ್ಲ, ಕೇವಲ ಐದು ತಾಸು 87 ಕೋಟಿಯ ಒಡೆಯನಾಗಿದ್ದ 9ನೇ ತರಗತಿ ಬಾಲಕ

ಬಾಲಕನೊಬ್ಬ ಐದು ಗಂಟೆಗಳ ಕಾಲ ಕೋಡ್ಯಧಿಪತಿಯಾಗಿದ್ದ ಘಟನೆ ಬಿಹಾರದಲ್ಲಿ ನಡೆದಿದೆ. ಖಾತೆಯಲ್ಲಿ ಸರಿಯಾಗಿ ಸಾವಿರಗಳನ್ನೇ ನೋಡದ ಬಾಲಕ 87 ಕೋಟಿ ರೂ. ಹಣ ನೋಡಿ ಬೆಚ್ಚಿಬಿದ್ದಿದ್ದಾನೆ. ಬಳಿಕ ತಾಯಿಗೆ ಮಾಹಿತಿ ನೀಡಿ ಬ್ಯಾಂಕ್​ಗೆ ಹೋಗುವಷ್ಟರಲ್ಲಿ ಖಾತೆಯಲ್ಲಿ ಹಣವಿರಲಿಲ್ಲ. ಸೈಬರ್​ಗೆ ಬಂದು ಸುಮ್ಮನೆ ಖಾತೆಯಲ್ಲಿ ಎಷ್ಟು ಹಣವಿದೆ ನೋಡೋಣವೆಂದು ಪರಿಶೀಲಿಸಿದಾಗ  ಅವನ ಬ್ಯಾಂಕ್ ಖಾತೆಯಲ್ಲಿ 87 ಕೋಟಿ ರೂ. ಇರುವುದನ್ನು ಕಂಡು ಒಮ್ಮೆಲೆ ಬೆಚ್ಚಿ ಬಿದ್ದಿದ್ದ.

ಕೈಗೆ ಬಂದ ತುತ್ತು ಬಾಯಿಗೆ ಬರ್ಲಿಲ್ಲ, ಕೇವಲ ಐದು ತಾಸು 87 ಕೋಟಿಯ ಒಡೆಯನಾಗಿದ್ದ 9ನೇ ತರಗತಿ ಬಾಲಕ
ಹಣ
Follow us
ನಯನಾ ರಾಜೀವ್
|

Updated on:Dec 20, 2024 | 10:13 AM

9ನೇ ತರಗತಿ ಬಾಲಕನೊಬ್ಬ ಕೇವಲ ಐದು ಗಂಟೆಗಳ ಕಾಲ 87 ಕೋಟಿ ರೂ. ಒಡೆಯನಾಗಿದ್ದ ವಿಚಿತ್ರ ಘಟನೆ ಬಿಹಾರದ ಮುಜಾಫರ್​ಪುರದಲ್ಲಿ ನಡೆದಿದೆ. ಬಾಲಕ ಕೇವಲ 5 ಗಂಟೆಗಳ ಕಾಲ ಕೋಟ್ಯಧಿಪತಿಯಾಗಿದ್ದ, ಅಂದು ಬಾಲಕ ಎಟಿಎಂನಿಂದ 500 ರೂ. ವಿತ್​ ಡ್ರಾ ಮಾಡಿದ್ದ, ಸೈಬರ್​ಗೆ ಬಂದು ಸುಮ್ಮನೆ ಖಾತೆಯಲ್ಲಿ ಎಷ್ಟು ಹಣವಿದೆ ನೋಡೋಣವೆಂದು ಪರಿಶೀಲಿಸಿದಾಗ  ಅವನ ಬ್ಯಾಂಕ್ ಖಾತೆಯಲ್ಲಿ 87 ಕೋಟಿ ರೂ. ಇರುವುದನ್ನು ಕಂಡು ಒಮ್ಮೆಲೆ ಬೆಚ್ಚಿ ಬಿದ್ದಿದ್ದ.

ಇಷ್ಟು ಬ್ಯಾಲೆನ್ಸ್ ನೋಡಿ ಸೈಬರ್ ಕೆಫೆ ಮಾಲೀಕರು ಹಾಗೂ ವಿದ್ಯಾರ್ಥಿಗಳು ಬೆಚ್ಚಿಬಿದ್ದಿದ್ದಾರೆ. ಇದಾದ ನಂತರ ಸೈಫ್ ಅಲಿ ಮನೆಗೆ ಬಂದು ತಾಯಿಗೆ ವಿಷಯ ತಿಳಿಸಿದ್ದಾನೆ. 9ನೇ ತರಗತಿಯ ವಿದ್ಯಾರ್ಥಿ ಸೈಫ್‌ಗೆ ಈ ಘಟನೆ ಅರ್ಥವಾಗದೇ ಇದ್ದಾಗ ಆತನ ತಾಯಿ ಗ್ರಾಮದ ವ್ಯಕ್ತಿಯೊಬ್ಬರಿಗೆ ಈ ವಿಷಯ ತಿಳಿಸಿದ್ದಾಳೆ.

ಬ್ಯಾಂಕ್ ಸ್ಟೇಟ್‌ಮೆಂಟ್‌ಗಾಗಿ ಸೈಫ್ ಸಿಎಸ್‌ಪಿ (ಕಸ್ಟಮರ್ ಸರ್ವಿಸ್ ಪಾಯಿಂಟ್) ಗೆ ಹೋದಾಗ, ಖಾತೆಯಿಂದ 87 ಕೋಟಿ 65 ಲಕ್ಷ ರೂಪಾಯಿ ಹಿಂಪಡೆಯಲಾಗಿದೆ ಮತ್ತು ಖಾತೆಯಲ್ಲಿ ಕೇವಲ 532 ರೂ. ಈ ಬಗ್ಗೆ ಸೈಫ್ ಬ್ಯಾಂಕ್ ಗೆ ತೆರಳಿ ಮಾಹಿತಿ ನೀಡಿದಾಗ 5 ಗಂಟೆಯೊಳಗೆ ಖಾತೆಯಿಂದ 87 ಕೋಟಿ 65 ಲಕ್ಷ ರೂ.ಗಳನ್ನು ತೆಗೆದು ಹಾಕಿರುವುದು ದೃಢಪಟ್ಟಿದೆ.

ಮತ್ತಷ್ಟು ಓದಿ: ಮಾಜಿ ಸಚಿವರ ಬ್ಯಾಂಕ್​ ಎಂದುಕೊಂಡು ಹಣ ಇಟ್ಟವರಿಗೆ ಪಂಗನಾಮ; ಠೇವಣಿದಾರರಿಗೆ ನ್ಯಾಯ ಒದಗಿಸಲು ಸಕ್ಷಮ ಪ್ರಾಧಿಕಾರ ರಚನೆ 

ಸೈಫ್ ಅವರ ಕುಟುಂಬವು ಈ ವಿಷಯದಲ್ಲಿ ಯಾವುದೇ ಅಧಿಕೃತ ದೂರು ನೀಡಿಲ್ಲ. ಆದರೆ ಹಣವನ್ನು ಯಾರು ಕಳುಹಿಸಿದ್ದಾರೆ ಮತ್ತು ಎಲ್ಲಿಂದ ಕಳುಹಿಸಿದ್ದಾರೆ ಎಂಬುದು ತಿಳಿದಿಲ್ಲ. ನಾರ್ತ್ ಬಿಹಾರ ಗ್ರಾಮೀಣ ಬ್ಯಾಂಕ್ ವಿದ್ಯಾರ್ಥಿಯೊಬ್ಬನ ಖಾತೆಗೆ ಇಷ್ಟೊಂದು ಮೊತ್ತ ಹೇಗೆ ಬಂತು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದು, ಕೆಲವೇ ಗಂಟೆಗಳಲ್ಲಿ ಈ ಮೊತ್ತ ಹಿಂಪಡೆದಿದ್ದು, ಆತನ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:13 am, Fri, 20 December 24