Bhopal: ಎಂಆರ್​ಐ ಕೇಂದ್ರದ ಬಟ್ಟೆ ಬದಲಾಯಿಸುವ ಕೋಣೆಯಲ್ಲಿ ಕ್ಯಾಮರಾ ಪತ್ತೆ, ಸಿಬ್ಬಂದಿ ಬಂಧನ

ಭೋಪಾಲ್‌ನ ಮಾಳವೀಯಾ ನಗರದಲ್ಲಿರುವ ಎಂಆರ್‌ಐ ಸೆಂಟರ್‌ನ ಮೆಡಿ ಸ್ಕ್ಯಾನ್‌ನ ಚೇಂಜ್ ರೂಮ್‌ನಲ್ಲಿ ಮಹಿಳೆಯರು ಬಟ್ಟೆ ಬದಲಾಯಿಸುವುದನ್ನು ವಿಡಿಯೋ ಮಾಡುತ್ತಿದ್ದ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇಂದ್ರದ ವಾರ್ಡ್ ಬಾಯ್ ಬಟ್ಟೆ ಬದಲಾಯಿಸುವ ಕೊಠಡಿಯ ಸೀಲಿಂಗ್ ನಲ್ಲಿ ಮೊಬೈಲ್ ಬಚ್ಚಿಟ್ಟು ವಿಡಿಯೋ ರೆಕಾರ್ಡಿಂಗ್ ಮಾಡುತ್ತಿದ್ದ. ಎಂಆರ್‌ಐ ಪರೀಕ್ಷೆಗೆಂದು ಕೇಂದ್ರಕ್ಕೆ ಬಂದಿದ್ದ ಮಹಿಳೆಯರು ಪರೀಕ್ಷೆಗೂ ಮುನ್ನ ಗೌನ್‌ ಧರಿಸುವಾಗ ವಿಡಿಯೋ ಮಾಡಿಕೊಂಡಿದ್ದ.

Bhopal: ಎಂಆರ್​ಐ ಕೇಂದ್ರದ ಬಟ್ಟೆ ಬದಲಾಯಿಸುವ ಕೋಣೆಯಲ್ಲಿ ಕ್ಯಾಮರಾ ಪತ್ತೆ, ಸಿಬ್ಬಂದಿ ಬಂಧನ
ಬಂಧನ
Follow us
ನಯನಾ ರಾಜೀವ್
|

Updated on: Dec 20, 2024 | 9:12 AM

ಎಂಆರ್​ಐ ಕೇಂದ್ರದ ಬಟ್ಟೆ ಬದಲಾಯಿಸುವ ಕೋಣೆಯಲ್ಲಿ ಕ್ಯಾಮರಾ ಪತ್ತೆಯಾಗಿ ಆತಂಕ ಮೂಡಿಸಿದೆ. ಕೇಂದ್ರದಲ್ಲಿ ಎಂಆರ್‌ಐ ಪರೀಕ್ಷೆಗೆ ತಯಾರಿ ನಡೆಸಲು ಮಹಿಳೆ ಬಟ್ಟೆ ಬದಲಾಯಿಸುವ ಕೊಠಡಿಯೊಳಗೆ ಹೋದಾಗ ಈ ಘಟನೆ ನಡೆದಿದೆ. ಪೊಲೀಸ್ ಸಿಬ್ಬಂದಿ ಕೇಂದ್ರವನ್ನು ತಲುಪಿ ಉದ್ಯೋಗಿ ವಿಶಾಲ್ ಠಾಕೂರ್ ಮೊಬೈಲ್ ಅದು ಎಂಬುದು ತಿಳಿದುಬಂದಿದೆ. ಫೋನ್ ವಶಪಡಿಸಿಕೊಳ್ಳಲಾಗಿದೆ ಮತ್ತು ಪ್ರಕರಣ ದಾಖಲಿಸಲಾಗಿದೆ.

ಆರೋಪಿಯು ಎಷ್ಟು ವಿಡಿಯೋಗಳನ್ನು ರೆಕಾರ್ಟ್​ ಮಾಡಿದ್ದಾನೆ ಮತ್ತು ಅಂತಹ ವೀಡಿಯೊಗಳನ್ನು ಅವನು ಏನು ಮಾಡಿದ್ದಾನೆ ಎಂಬುದನ್ನು ಕಂಡುಹಿಡಿಯಲು ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನು ದಂಪತಿ ಆಡಳಿತ ಮಂಡಳಿ ಗಮನಕ್ಕೆ ತಂದಾಗ, ತಮ್ಮ ತಪ್ಪನ್ನು ಒಪ್ಪಿಕೊಂಡು ವಾರ್ಡ್ ಬಾಯ್‌ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಅವರು ಜಗಳವಾಡಲು ಶುರು ಮಾಡಿದರು. ನಂತರ ಇಬ್ಬರು ಅರೇರಾ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸರು ಬಟ್ಟೆ ಬದಲಾಯಿಸುವ ಕೋಣೆಗೆ ಸೀಲ್ ಹಾಕಿದ್ದಾರೆ. ಅಲ್ಲದೇ ಆರೋಪಿ ವಾರ್ಡ್ ಬಾಯ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ದಂಪತಿ ಮೆಡಿ ಸ್ಕ್ಯಾನ್ ಸೆಂಟರ್‌ಗೆ ಹೋಗಿದ್ದರು ಎಂದು ಪೊಲೀಸ್ ಠಾಣೆ ಪ್ರಭಾರಿ ಮನೋಜ್ ಪಟ್ವಾ ತಿಳಿಸಿದ್ದಾರೆ. ಇಲ್ಲಿ ಪತ್ನಿಯ ಎಂಆರ್ ಐ ಪರೀಕ್ಷೆ ನಡೆಯಬೇಕಿತ್ತು. ಹೆಂಡತಿ ಬಟ್ಟೆ ಬದಲಾಯಿಸುವ ಕೋಣೆಗೆ ಹೋಗಿ ಸ್ಕ್ಯಾನ್ ಗಾಗಿ ಗೌನ್ ಧರಿಸಿದ್ದಳು.

ಮತ್ತಷ್ಟು ಓದಿ: ಪ್ರಿನ್ಸಿಪಾಲ್​ಗೆ ಅಡುಗೆ ಮಾಡಿಕೊಡಲು 8ನೇ ಕ್ಲಾಸ್ ಹುಡುಗನಿಗೆ ಒತ್ತಾಯ; ಎಣ್ಣೆ ಚೆಲ್ಲಿ ಬೆಂದುಹೋಯ್ತು ಕಾಲು!

ಆದರೆ ವಾಪಸ್ ಹೋಗುವಾಗ ಬಟ್ಟೆ ಬದಲಾಯಿಸುವ ಕೊಠಡಿಯಲ್ಲಿ ಕೆಲ ವಸ್ತುಗಳನ್ನು ಮರೆತಿದ್ದಳು, ಬಳಿಕ ವಸ್ತುಗಳನ್ನು ತೆಗೆದುಕೊಂಡು ಹೋಗಲು ಪತಿ ಕೊಠಡಿಗೆ ಹೋದಾಗ ಆತನ ಕಣ್ಣು ಸೀಲಿಂಗ್‌ನಲ್ಲಿ ಅಡಗಿಸಿಟ್ಟಿದ್ದ ಮೊಬೈಲ್ ಮೇಲೆ ಬಿದ್ದಿತ್ತು, ಮೊಬೈಲ್ ತೆಗೆದು ನೋಡಿದಾಗ ವಿಡಿಯೋ ರೆಕಾರ್ಡಿಂಗ್ ಆನ್ ಆಗಿದ್ದು, 27 ನಿಮಿಷ ರೆಕಾರ್ಡ್ ಆಗಿತ್ತು.

ಮೆಡಿ ಸ್ಕ್ಯಾನ್‌ನಲ್ಲಿ ಕೆಲಸ ಮಾಡುತ್ತಿರುವ ವಾರ್ಡ್ ಬಾಯ್ ವಿಶಾಲ್ ಠಾಕೂರ್ ಮೂಲತಃ ಉತ್ತರ ಪ್ರದೇಶದ ಅಯೋಧ್ಯೆಯ ನಿವಾಸಿ ಎಂದು ಪೊಲೀಸ್ ಠಾಣೆ ಪ್ರಭಾರಿ ಮನೋಜ್ ಪಟ್ವಾ ತಿಳಿಸಿದ್ದಾರೆ. ಅವರು ಕಳೆದ ಮೂರು ವರ್ಷಗಳಿಂದ ಭೋಪಾಲ್‌ನ ಜಹಾಂಗೀರಾಬಾದ್ ಪ್ರದೇಶದಲ್ಲಿ ತಮ್ಮ ಸಹೋದರಿಯ ಮನೆಯಲ್ಲಿ ವಾಸಿಸುತ್ತಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ