ಪ್ರಿನ್ಸಿಪಾಲ್ಗೆ ಅಡುಗೆ ಮಾಡಿಕೊಡಲು 8ನೇ ಕ್ಲಾಸ್ ಹುಡುಗನಿಗೆ ಒತ್ತಾಯ; ಎಣ್ಣೆ ಚೆಲ್ಲಿ ಬೆಂದುಹೋಯ್ತು ಕಾಲು!
ಆಘಾತಕಾರಿ ಘಟನೆಯೊಂದರಲ್ಲಿ ತೆಲಂಗಾಣದ ಭುವನಗಿರಿಯಲ್ಲಿ 8ನೇ ತರಗತಿಯ ವಿದ್ಯಾರ್ಥಿ ತನ್ನ ಕಾಲಿನ ಮೇಲೆ ಎಣ್ಣೆ ಸುರಿದ ಹಿನ್ನೆಲೆಯಲ್ಲಿ ಗಂಭೀರವಾದ ಸುಟ್ಟ ಗಾಯವನ್ನು ಅನುಭವಿಸಿದ್ದಾನೆ. ಈ ಘಟನೆ ನಡೆದಾಗ ವಿದ್ಯಾರ್ಥಿ ತಾನು ಓದಿದ ಶಾಲೆಯ ಪ್ರಾಂಶುಪಾಲರಿಗೆ ಅಡುಗೆ ಮಾಡುತ್ತಿದ್ದ ಎನ್ನಲಾಗಿದೆ. ನಾರಾಯಣಪುರಂ ಮಂಡಲದ ಸರ್ವೆಲ್ ಗುರುಕುಲ ಶಾಲೆಯಲ್ಲಿ ಈ ಘಟನೆ ನಡೆದಿದೆ.
ಹೈದರಾಬಾದ್: ತೆಲಂಗಾಣದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಶಾಲೆಯಲ್ಲಿ ಓದುತ್ತಿದ್ದ 8ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕರು ಪ್ರಿನ್ಸಿಪಾಲ್ಗೆ ನೀನೇ ಅಡುಗೆ ಮಾಡಿಕೊಡಬೇಕು ಎಂದು ಹೇಳಿ ಶಾಲೆಯ ಬಿಸಿಯೂಟದ ಅಡುಗೆಮನೆಗೆ ಕಳುಹಿಸಿದ್ದಾರೆ. ಆದರೆ, ಆತನಿಗೆ ಅಡುಗೆ ಮಾಡಲು ಬಾರದ ಕಾರಣದಿಂದ ಏನೋ ಮಾಡಲು ಹೋಗಿ ಬಿಸಿ ಎಣ್ಣೆ ಮೈಮೇಲೆಲ್ಲ ಚೆಲ್ಲಿ ಕಾಲು ಸುಟ್ಟು ಹೋಗಿದೆ. ಆತನ ಮೈಮೇಲೆ ಗಂಭೀರವಾದ ಸುಟ್ಟ ಗಾಯಗಳಾಗಿವೆ. ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ ನಿರ್ಲಕ್ಷ್ಯ ಮತ್ತು ಶಿಕ್ಷಕರ ಅತಿರೇಕದ ವರ್ತನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ತೆಲಂಗಾಣದ ನಾರಾಯಣಪುರಂ ಮಂಡಲದ ಸರ್ವೆಲ್ ಗುರುಕುಲ ಶಾಲೆಯಲ್ಲಿ ಈ ಘಟನೆ ನಡೆದಿದೆ. ಮೂಗಳ ಪ್ರಕಾರ, ಅಡುಗೆ ಮಾಡುವಾಗ ಎಣ್ಣೆ ವಿದ್ಯಾರ್ಥಿಯ ಮೇಲೆ ಚೆಲ್ಲಿದೆ. ಇದರಿಂದ ಆತನಿಗೆ ಸುಟ್ಟ ಗಾಯಗಳಾಗಿವೆ. ಈ ಘಟನೆಯ ಆಘಾತಕಾರಿ ವಿಡಿಯೋ ಕೂಡ ಬೆಳಕಿಗೆ ಬಂದಿದ್ದು, ಇದರಲ್ಲಿ ವಿದ್ಯಾರ್ಥಿಗಳ ಎರಡೂ ಕಾಲುಗಳಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಇದರಿಂದ ಶಾಲೆಯ ವಿದ್ಯಾರ್ಥಿಗಳ ಪೋಷಕರು ಪ್ರತಿಭಟನೆ ನಡೆಸಿದ್ದು, ಪ್ರಾಂಶುಪಾಲರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ