ನ್ಯಾಯ ಕೇಳಲು ಬಂದ ವ್ಯಕ್ತಿಗೆ ವಿಚಾರಣೆಗೆಗೂ ಮೊದಲೇ ಮನಬಂದಂತೆ ಥಳಿಸಿದ ಪೊಲೀಸ್
ಉತ್ತರ ಪ್ರದೇಶದ ಝಾನ್ಸಿ ಪೊಲೀಸ್ ಠಾಣೆಯಲ್ಲಿ ನ್ಯಾಯ ಕೇಳಲು ಬಂದ ವ್ಯಕ್ತಿಯನ್ನು ಪೊಲೀಸ್ ಅಧಿಕಾರಿಯೊಬ್ಬರು ಥಳಿಸಿದ ಘಟನೆ ವೈರಲ್ ಆಗಿದೆ. ಸುಧಾಕರ್ ಕಶ್ಯಪ್ ಎಂಬ ವ್ಯಕ್ತಿಯನ್ನು 41 ಸೆಕೆಂಡುಗಳಲ್ಲಿ 31 ಬಾರಿ ಹೊಡೆದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ, ಆ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ಉತ್ತರ ಪ್ರದೇಶ: ನ್ಯಾಯ ಕೇಳಲು ಬಂದ ವ್ಯಕ್ತಿಗೆ ವಿಚಾರಿಸುವ ಮೊದಲೇ ಪೊಲೀಸ್ ಅಧಿಕಾರಿಯೊಬ್ಬರು ಮನಬಂದಂತೆ ಥಳಿಸಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ನ್ಯಾಯ ಕೇಳಲು ಬಂದ ವ್ಯಕ್ತಿಯನ್ನು ಸುಧಾಕರ್ ಕಶ್ಯಪ್ ಎಂದು ಗುರುತಿಸಲಾಗಿದೆ. ಪೊಲೀಸ್ ಅಧಿಕಾರಿ ಸುಧಾಕರ್ ಅವರಿಗೆ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳಮೋಕ್ಷ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಪೊಲೀಸ್ ಠಾಣೆಗೆ ಭೇಟಿ ನೀಡಿದ ಹಿಂದಿನ ಕಾರಣವನ್ನು ಸಹ ಕೇಳದೆ ನಿರಂತರವಾಗಿ ಕಪಾಳಮೋಕ್ಷ ಮಾಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ” ಆಪ್ ಹುಮೇ ಮಾರ್ ಕಾಹೆ ರಹೇ ಹೈ? (ನೀವು ನನ್ನನ್ನು ಏಕೆ ಹೊಡೆಯುತ್ತಿದ್ದೀರಿ)” ಎಂದು ಸುಧಾಕರ್ ಕೇಳುತ್ತಲೇ ಇರುವುದನ್ನು ವಿಡಿಯೋದಲ್ಲಿ ಕಾಣಬಹುದು.
41 सेकंड में 31 थप्पड़!#झांसी के एक थाने में न्याय मांगने आए फरियादी को थानेदार सुधाकर कश्यप ने ताबड़तोड़ थप्पड़ों की बरसात कर दी
शिकायत के बाद थानेदार सस्पेंड हुए है
वीडियो देखिए👇 pic.twitter.com/ZCn1NJGVMI
— Narendra Pratap (@hindipatrakar) December 19, 2024
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಕಪಾಳಮೋಕ್ಷ ಮಾಡಿರುವ ಝಾನ್ಸಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ನ್ಯಾಯ ಕೋರಿ ಠಾಣೆಗೆ ಬಂದ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ್ದಕ್ಕಾಗಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ.
थाना मऊरानीपुर पर तैनात अतिरिक्त निरीक्षक का सोशल मीडिया के माध्यम से प्रकाश में आए वीडियो का तत्काल संज्ञान लेते हुए संबंधित निरीक्षक को निलंबित कर दिया गया है तथा विभागीय कार्यवाही प्रचलित है। इस संबंध में पुलिस अधीक्षक ग्रामीण की वीडियो बाइट- pic.twitter.com/98Zi3MYiqE
— Jhansi Police (@jhansipolice) December 18, 2024
ಮತ್ತಷ್ಟು ಓದಿ: ಮದುವೆ ಮಂಟಪದಿಂದ ಹತ್ತಾರು ಬಾರಿ ಎದ್ದು ಹೋಗ್ತಿದ್ದ ವರ, ಅನುಮಾನ ಬಂದು ಹಿಂದೆ ಹೋದಾಗ ಕಂಡಿದ್ದೇನು?
@jhansipolice ಎಂಬ ಟ್ವಿಟರ್ ಖಾತೆಯಲ್ಲಿ ಪೊಲೀಸನ್ನು ಅಮಾನತು ಮಾಡಿರುವ ಕುರಿತಾದ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:43 am, Fri, 20 December 24