ಮದುವೆ ಮಂಟಪದಿಂದ ಹತ್ತಾರು ಬಾರಿ ಎದ್ದು ಹೋಗ್ತಿದ್ದ ವರ, ಅನುಮಾನ ಬಂದು ಹಿಂದೆ ಹೋದಾಗ ಕಂಡಿದ್ದೇನು?

ದೆಹಲಿಯ ಸಾಹಿಬಾಬಾದ್​ನಲ್ಲಿ ಮದುವೆಯೊಂದು ನಿಶ್ಚಯವಾಗಿತ್ತು. ಶಾಸ್ತ್ರಗಳೆಲ್ಲಾ ನಡೆಯುತ್ತಿತ್ತು. ಆದರೆ ವರ ಪದೇ ಪದೇ ಮಂಟಪದಿಂದ ಎದ್ದು ಹೋಗುತ್ತಿದ್ದ. ವಧು ಏನೇ ಕೇಳಿದರೂ ಯಾವ ಉತ್ತರವನ್ನೂ ನೀಡುತ್ತಿರಲಿಲ್ಲ. ಆಗ ವಧು ತನ್ನ ಕಡೆಯವರನ್ನು ಆತನ ಹಿಂದೆ ಹೋಗುವಂತೆ ಹೇಳಿದಾಗ ಅಲ್ಲಿ ನಡೆಯುತ್ತಿರುವುದನ್ನು ಕಂಡು ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ.

ಮದುವೆ ಮಂಟಪದಿಂದ ಹತ್ತಾರು ಬಾರಿ ಎದ್ದು ಹೋಗ್ತಿದ್ದ ವರ, ಅನುಮಾನ ಬಂದು ಹಿಂದೆ ಹೋದಾಗ ಕಂಡಿದ್ದೇನು?
ಮದುವೆ
Follow us
ನಯನಾ ರಾಜೀವ್
|

Updated on: Dec 03, 2024 | 2:38 PM

ದೆಹಲಿಯ ಸಾಹಿಬಾಬಾದ್​ನಲ್ಲಿ ಮದುವೆಯೊಂದು ನಿಶ್ಚಯವಾಗಿತ್ತು. ಶಾಸ್ತ್ರಗಳೆಲ್ಲಾ ಸುಸೂತ್ರವಾಗಿ ನಡೆಯುತ್ತಿದ್ದವು. ಆದರೆ ವರ ಪದೇ ಪದೇ ಮಂಟಪದಿಂದ ಎದ್ದು ಹೋಗುತ್ತಿದ್ದ. ವಧು ಏನೇ ಕೇಳಿದರೂ ಯಾವ ಉತ್ತರವನ್ನೂ ನೀಡುತ್ತಿರಲಿಲ್ಲ. ಆಗ ವಧು ತನ್ನ ಕಡೆಯವರನ್ನು ಆತನ ಹಿಂದೆ ಹೋಗುವಂತೆ ಹೇಳಿದಾಗ ಅಲ್ಲಿ ನಡೆಯುತ್ತಿರುವುದನ್ನು ಕಂಡು ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ.

ಮೊದಲು ಮೊದಲು ವಾಶ್​ರೂಮ್​ಗೆ ಹೋಗುತ್ತಿರಬೇಕು ಎಂದುಕೊಂಡಿದ್ದರು. ಆದರೆ ಆತ ಸ್ನೇಹಿತರೊಂದಿಗೆ ಕುಳಿತುಕೊಂಡು ಮಾದಕದ್ರವ್ಯ ಸೇವಿಸುತ್ತಿರುವುದು ಕಂಡು ಎಲ್ಲರೂ ಗಾಬರಿಗೊಂಡರು. ಮದುವೆಯ ಈ ದಿನಕ್ಕಾಗಿ ತಿಂಗಳಾನುಗಟ್ಟಲೆ ಗಂಡು-ಹೆಣ್ಣಿಬ್ಬರೂ ತುಂಬಾ ತಯಾರಿ ನಡೆಸಿದ್ದರು.ಆದರೆ ಮದುವೆಯ ದಿನ ನಡೆದ ಘಟನೆ ಅನಿರೀಕ್ಷಿತ ತಿರುವು ಪಡೆದುಕೊಂಡಿತು.

ಆತ ಪದೇ ಪದೇ ಹೊರಗೆ ಹೋಗಿಬಂದಾಗಲೂ ವಿಚಿತ್ರವಾಗಿ ವರ್ತಿಸುತ್ತಿದ್ದ ಸರಿಯಾಗಿ ನಡೆಯಲು ಕೂಡ ಆತನಿಂದ ಸಾಧ್ಯವಾಗುತ್ತಿರಲಿಲ್ಲ.  ಸತ್ಯ ಬೆಳಕಿಗೆ ಬಂದಾಗ ಮದುವೆಮನೆ ಗೊಂದಲದ ಗೂಡಾಯಿತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಅಲ್ಲಿಗೆ ಕರೆಸಿದರು. ವರನ ಕುಟುಂಬದವರು 10 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಮತ್ತಷ್ಟು ಓದಿ: Viral: ಕನ್ನಡ Vs ಹಿಂದಿ; ಬೆಂಗಳೂರಿನ ಆಟೋ ಚಾಲಕರು ಹೆಚ್ಚು ಪ್ರಾಮುಖ್ಯತೆ ಕೊಟ್ಟಿದ್ದು ಯಾರಿಗೆ ನೋಡಿ…

ಮದುವೆಯ ದಿನ ವರ ತನ್ನ ಸ್ನೇಹಿತರೊಂದಿಗೆ ಮಾದಕದ್ರವ್ಯ ಸೇವಿಸಿದ್ದ, ಅದನ್ನು ನೋಡಿ ವಧು ಮದುವೆಯಾಗಲು ನಿರಾಕರಿಸಿ ಮದುವೆಯ ಮೆರವಣಿಗೆಯನ್ನು ಹಿಂದಿರುಗಿಸಿದ್ದಾಳೆ. ವರನ ಕಡೆಯವರು ಗಲಾಟೆ ಸೃಷ್ಟಿಸಿದಾಗ ಪೊಲೀಸರಿಗೆ ಕರೆ ಮಾಡಬೇಕಾಯಿತು.

ವರನ ಕಡೆಯವರ ವಿರುದ್ಧ ವಧುವಿನ ತಾಯಿ ಪ್ರಕರಣ ದಾಖಲಿಸಿದ್ದಾರೆ. ಶಹೀದ್‌ನಗರದ ನಿವಾಸಿಯಾಗಿರುವ ಮಹಿಳೆ, ದೆಹಲಿಯ ಗಾಂಧಿನಗರದ ನಿವಾಸಿ ಅವಿನಾಶ್‌ನೊಂದಿಗೆ ತನ್ನ ಮಗಳ ಮದುವೆಯನ್ನು ನಿಶ್ಚಯಿಸಲಾಗಿತ್ತು ಎಂದು ಹೇಳಿದ್ದಾರೆ. ನವೆಂಬರ್ 27 ರಂದು ತಿಲಾ ಮೋಡ್ ಪೊಲೀಸ್ ಠಾಣಾ ವ್ಯಾಪ್ತಿಯ ತೋಟದ ಮನೆಯಲ್ಲಿ ಮದುವೆಯ ವಿಧಿವಿಧಾನಗಳನ್ನು ಪ್ರಾರಂಭಿಸಲಾಯಿತು. ಜಯಮಾಲಾ ವೇಳೆ ವರ ತನ್ನ ಸ್ನೇಹಿತರೊಂದಿಗೆ ಕುಡಿದು ಬಂದಿದ್ದ ಎನ್ನಲಾಗಿದೆ.

ಇದಾದ ಮೇಲೆ ವಧು ವರನಿಗೆ ಮಾದಕ ವ್ಯಸನಿ ಎಂದು ಹೇಳಿ ಮದುವೆಯಾಗಲು ನಿರಾಕರಿಸಿದ್ದಾಳೆ. ಈ ವೇಳೆ ವರನ ಕಡೆಯವರು ಗಲಾಟೆ ಮಾಡಿ ಹೊಡೆದಾಡಿಕೊಂಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬೆನ್ನಿಗೆ ವ್ಯಾಯಾಮ ನೀಡುವ ಯೋಗಾಸನ ಕಲಿಸಿದ ಶಿಲ್ಪಾ ಶೆಟ್ಟಿ; ವಿಡಿಯೋ ನೋಡಿ..
ಬೆನ್ನಿಗೆ ವ್ಯಾಯಾಮ ನೀಡುವ ಯೋಗಾಸನ ಕಲಿಸಿದ ಶಿಲ್ಪಾ ಶೆಟ್ಟಿ; ವಿಡಿಯೋ ನೋಡಿ..
ಜಗದಾಂಬಿಕಾ ಪಾಲ್​​ ಭೇಟಿಯಾದ ಯತ್ನಾಳ್​​ ಟೀಂ: ಏನೆಲ್ಲಾ ಚರ್ಚೆ ಆಯ್ತು?
ಜಗದಾಂಬಿಕಾ ಪಾಲ್​​ ಭೇಟಿಯಾದ ಯತ್ನಾಳ್​​ ಟೀಂ: ಏನೆಲ್ಲಾ ಚರ್ಚೆ ಆಯ್ತು?
ಮುಂಬೈನ ಬಾಂದ್ರಾದಲ್ಲಿ ಪೈಪ್‌ಲೈನ್ ಒಡೆದು 50 ಅಡಿ ಎತ್ತರಕ್ಕೆ ಹಾರಿದ ನೀರು
ಮುಂಬೈನ ಬಾಂದ್ರಾದಲ್ಲಿ ಪೈಪ್‌ಲೈನ್ ಒಡೆದು 50 ಅಡಿ ಎತ್ತರಕ್ಕೆ ಹಾರಿದ ನೀರು
ಎಟಿಎಂನಿಂದ ಹಣ ದೋಚಿದವ ಹೆಂಡತಿಗಾಗಿ ಎರಡು ಚಿನ್ನದ ಸರಗಳನ್ನು ಖರೀದಿಸಿದ
ಎಟಿಎಂನಿಂದ ಹಣ ದೋಚಿದವ ಹೆಂಡತಿಗಾಗಿ ಎರಡು ಚಿನ್ನದ ಸರಗಳನ್ನು ಖರೀದಿಸಿದ
ಧನರಾಜ್ ಮಿಮಿಕ್ರಿ ಕಲೆಗೆ ಭೇಷ್ ಎನ್ನಬೇಕು; ಬಿಗ್ ಬಾಸ್ ಮನೆಯ ಫನ್ನಿ ವಿಡಿಯೋ
ಧನರಾಜ್ ಮಿಮಿಕ್ರಿ ಕಲೆಗೆ ಭೇಷ್ ಎನ್ನಬೇಕು; ಬಿಗ್ ಬಾಸ್ ಮನೆಯ ಫನ್ನಿ ವಿಡಿಯೋ
ಮಂಗಳೂರಿನ ತಲಪಾಡಿಯಲ್ಲಿ ತಡೆಗೋಡೆ ಕುಸಿತ; ಸ್ಪೀಕರ್ ಯುಟಿ ಖಾದರ್ ಭೇಟಿ
ಮಂಗಳೂರಿನ ತಲಪಾಡಿಯಲ್ಲಿ ತಡೆಗೋಡೆ ಕುಸಿತ; ಸ್ಪೀಕರ್ ಯುಟಿ ಖಾದರ್ ಭೇಟಿ
ಆದಾಯಕ್ಕೆ ಮೀರಿದ ಆಸ್ತಿ ಪ್ರಕರಣದಲ್ಲಿ ಜಮೀರ್​ಗೆ ಸಮನ್ಸ್ ಜಾರಿಯಾಗಿತ್ತು
ಆದಾಯಕ್ಕೆ ಮೀರಿದ ಆಸ್ತಿ ಪ್ರಕರಣದಲ್ಲಿ ಜಮೀರ್​ಗೆ ಸಮನ್ಸ್ ಜಾರಿಯಾಗಿತ್ತು
ಕೆಪಿಸಿಸಿ ಅಧ್ಯಕ್ಷನಾದವನಿಗೆ ಮತಸೆಳೆಯುವ ಸಾಮರ್ಥ್ಯವಿರಬೇಕು: ಜಾರಕಿಹೊಳಿ
ಕೆಪಿಸಿಸಿ ಅಧ್ಯಕ್ಷನಾದವನಿಗೆ ಮತಸೆಳೆಯುವ ಸಾಮರ್ಥ್ಯವಿರಬೇಕು: ಜಾರಕಿಹೊಳಿ
ಭಾರತಕ್ಕೆ ಅವಮಾನಿಸಿದರಾ ಬಿಲ್ ಗೇಟ್ಸ್?
ಭಾರತಕ್ಕೆ ಅವಮಾನಿಸಿದರಾ ಬಿಲ್ ಗೇಟ್ಸ್?
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗಿನ ಬಗ್ಗೆ ತನಗೇನೂ ಗೊತ್ತಿಲ್ಲವೆಂದ ಸಚಿವೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗಿನ ಬಗ್ಗೆ ತನಗೇನೂ ಗೊತ್ತಿಲ್ಲವೆಂದ ಸಚಿವೆ