Fact Check: ಮರೆಯಾಗಿದ್ದ ಜಟಾಯು ರಣಹದ್ದು ಅಯೋಧ್ಯೆಯಲ್ಲಿ ಕಾಣಿಸಿಕೊಂಡಿದ್ದು ನಿಜವೇ?
ವಿಡಿಯೋಗೆ ಸಂಬಂಧಿಸಿದಂತೆ, ಈ ವಿಡಿಯೋ ಯಾವಾಗ ಮತ್ತು ಎಲ್ಲಿಂದ ಬಂದಿದೆ ಎಂಬುದನ್ನು ಟಿವಿ9 ಕನ್ನಡ ಸ್ವತಂತ್ರವಾಗಿ ಖಚಿತಪಡಿಸಲು ಸಾಧ್ಯವಾಗಲಿಲ್ಲ. ಆದರೆ ಈ ವಿಡಿಯೋಗೂ ಅಯೋಧ್ಯೆಗೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ರಸ್ತೆಯಲ್ಲಿ ರಣಹದ್ದುಗಳ ಗುಂಪಾಗಿರುವುದನ್ನು ಕಾಣಬಹುದು. ಕೆಲವು ಬಳಕೆದಾರರು ಈ ವಿಡಿಯೋವನ್ನು ಇತ್ತೀಚಿನದು ಎಂದು ಹಂಚಿಕೊಳ್ಳುತ್ತಿದ್ದಾರೆ. ಅಲ್ಲದೆ ಇದು ಅಯೋಧ್ಯೆಗೆ ಆಗಮಿಸುತ್ತಿರುವ ಜಟಾಯು ರಣಹದ್ದುವಿನ ವಿಡಿಯೋ ಎಂದು ಬರೆದುಕೊಂಡು ಪೋಸ್ಟ್ ಮಾಡುತ್ತಿದ್ದಾರೆ. ಹಾಗಾದರೆ ಅಯೋಧ್ಯೆಯನ್ನು ನಿಜಕ್ಕೂ ಜಟಾಯು ರಣಹದ್ದು ಕಾಣಿಸಿಕೊಂಡಿದೆಯೇ?.
ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ಡಿಸೆಂಬರ್ 1, 2024 ರಂದು ಈ ವೈರಲ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮತ್ತು ‘‘100 ವರ್ಷಗಳ ಹಿಂದೆ ಅಳಿದುಳಿದಿದ್ದ ಜಟಾಯು ರಣಹದ್ದು ಇಂದು ಅಯೋಧ್ಯೆ ಜನ್ಮಸ್ಥಳಕ್ಕೆ ಮರಳಿದೆ, ಹೃದಯದಿಂದ ಜೈ ಶ್ರೀರಾಮ್ ಎಂದು ಹೇಳಿ’’ ಎಂದು ವಿಡಿಯೋದ ಮೇಲೆ ಶೀರ್ಷಿಕೆಯಲ್ಲಿ ಬರೆಯಲಾಗಿದೆ.
View this post on Instagram
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ವೈರಲ್ ಹಕ್ಕು ತಪ್ಪುದಾರಿಗೆಳೆಯುವಂತಿದೆ ಎಂದು ಕಂಡುಬಂದಿದೆ. ವಾಸ್ತವವಾಗಿ ವೈರಲ್ ವಿಡಿಯೋ 2021 ರಿಂದ ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಾಗಿದೆ. ಆದರೆ, ಕೆಲ ಬಳಕೆದಾರರಿ ಇದನ್ನು ಇತ್ತೀಚಿನದ್ದು ಎಂದು ಹಂಚಿಕೊಳ್ಳುತ್ತಿದ್ದಾರೆ. ಈ ವಿಡಿಯೋಗೂ ಅಯೋಧ್ಯೆಗೂ ಯಾವುದೇ ಸಂಬಂಧವಿಲ್ಲ.
ವೈರಲ್ ವಿಡಿಯೋದ ನಿಜಾಂಶ ತಿಳಿಯಲು ನಾವು ವಿಡಿಯೋದ ಹಲವಾರು ಕೀಫ್ರೇಮ್‌ಗಳನ್ನು ಹೊರತೆಗೆದಿದ್ದೇವೆ ಮತ್ತು ಅವುಗಳನ್ನು ಗೂಗಲ್ ರಿವರ್ಸ್ ಇಮೇಜ್ ಸಹಾಯದಿಂದ ಹುಡುಕಿದೆವು. ಆಗ @Putrieffendi ಹೆಸರಿನ ಯೂಟ್ಯೂಬ್ ಚಾನಲ್‌ನಲ್ಲಿ ಎರಡು ವರ್ಷಗಳ ಹಿಂದೆಯೇ ಈ ವಿಡಿಯೋವನ್ನು ಅಪ್‌ಲೋಡ್ ಮಾಡಿರುವುದನ್ನು ನಾವು ಕಂಡುಕೊಂಡಿದ್ದೇವೆ. ಇದರಿಂದ ಈ ವಿಡಿಯೋಗೂ ಸದ್ಯದ ಪರಿಸ್ಥಿತಿಗೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.
ಈ ಕುರಿತು ಇನ್ನಷ್ಟು ಹುಡುಕಾಟ ನಡೆಸಿ ನಾವು ಸಂಬಂಧಿತ ಕೀವರ್ಡ್‌ಗಳ ಸಹಾಯದಿಂದ ಗೂಗಲ್ನಲ್ಲಿ ಸರ್ಚ್ ಮಾಡಲು ಪ್ರಯತ್ನಿಸಿದ್ದೇವೆ. ಆದರೆ ಈ ವಿಡಿಯೋಕ್ಕೆ ಸಂಬಂಧಿಸಿದ ಯಾವುದೇ ಸುದ್ದಿ ನಮಗೆ ಸಿಕ್ಕಿಲ್ಲ. ಈ ಹಿಂದೆಯೂ ಇದೇ ಹೇಳಿಕೆಯೊಂದಿಗೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಎಂಬುದಷ್ಟೆ ತಿಳಿದುಬಂತು.
ಹುಡುಕಾಟದ ಸಮಯದಲ್ಲಿ ಖಾಸಗಿ ವಾಹಿನಿಯ ಪತ್ರಕರ್ತರೊಬ್ಬರು ಈ ವಿಡಿಯೋಗೆ ಸಂಬಂಧಿಸಿದಂತೆ ಮಾತನಾಡಿರುವುದು ನಮಗೆ ಸಿಕ್ಕಿತು. ವೈರಲ್ ಆಗಿರುವ ವಿಡಿಯೋ ಅಯೋಧ್ಯೆಯದ್ದಲ್ಲ ಎಂದು ಅವರು ಹೇಳಿದ್ದಾರೆ. ರಾಮ ಮಂದಿರದ ಬಳಿ ಅಂತಹ ಪಕ್ಷಿ ಕಾಣಿಸಲಿಲ್ಲ ಎಂದಿದ್ದಾರೆ.
ವಿಡಿಯೋಗೆ ಸಂಬಂಧಿಸಿದಂತೆ, ಈ ವಿಡಿಯೋ ಯಾವಾಗ ಮತ್ತು ಎಲ್ಲಿಂದ ಬಂದಿದೆ ಎಂಬುದನ್ನು ಟಿವಿ9 ಕನ್ನಡ ಸ್ವತಂತ್ರವಾಗಿ ಖಚಿತಪಡಿಸಲು ಸಾಧ್ಯವಾಗಲಿಲ್ಲ. ಆದರೆ ಈ ವಿಡಿಯೋಗೂ ಅಯೋಧ್ಯೆಗೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ಮೂಲಕ ಅಯೋಧ್ಯೆಗೆ ಜಟಾಯು ಆಗಮನ ಎಂದು ಹೇಳುವ ವೈರಲ್ ವಿಡಿಯೋವು 2021 ರಿಂದ ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಾಗಿದೆ ಎಂದು ಟಿವಿ9 ಕನ್ನಡ ತನ್ನ ತನಿಖೆಯಿಂದ ಕಂಡುಹಿಡಿದಿದೆ. ಸದ್ಯದ ಪರಿಸ್ಥಿತಿಗೂ ಈ ವಿಡಿಯೋಗೂ ಯಾವುದೇ ಸಂಬಂಧವಿಲ್ಲ.
ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:57 pm, Tue, 3 December 24