ರಮೋಲಾಗೆ ಆಗಸದಲ್ಲಿ ಪ್ರಪೋಸ್ ಮಾಡಿ ಹಣೆಗೆ ಮುತ್ತಿಟ್ಟ ರಕ್ಷಕ್ ಬುಲೆಟ್
ರಕ್ಷಕ್ ಬುಲೆಟ್ ಅವರು ಬಿಗ್ ಬಾಸ್ನಲ್ಲಿ ಕೆಲವೇ ವಾರದಲ್ಲಿ ಔಟ್ ಆಗಿರಬಹುದು. ಆದರೆ, ಅವರಿಗೆ ಸಾಕಷ್ಟು ಬೇಡಿಕೆ ಸೃಷ್ಟಿ ಆಗಿದ್ದು, ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ. ಈ ವೇದಿಕೆ ಸಾಕಷ್ಟು ಸಹಕಾರಿ ಮಾಡಿದೆ. ರಮೋಲಾ ಜೊತೆ ಅವರು ಲವ್ ಕಹಾನಿ ಜೋರಾಗಿದೆ.
ರಮೋಲಾ ಹಾಗೂ ರಕ್ಷಕ್ ಬುಲೆಟ್ (Rakshak Bullet) ಅವರು ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ನಲ್ಲಿ ಒಟ್ಟಾಗಿ ಆಡುತ್ತಿದ್ದಾರೆ. ರಕ್ಷಕ್ಗೆ ರಮೋಲಾ ಮೆಂಟರ್. ಈ ವಾರ ಪ್ರಪೋಸಲ್ ರೌಂಡ್ ಇದೆ. ರಮೋಲಾಗೆ ನೆಲದಿಂದ ಕೆಲ ಅಡಿ ಮೇಲೆ ಸೋಫಾ ಹಾಕಿ ಅಲ್ಲಿ ಪ್ರಪೋಸ್ ಮಾಡಿದ್ದಾರೆ ರಕ್ಷಕ್. ಅಲ್ಲದೆ ರಮೋಲಾ ಹಣೆಗೆ ಮುತ್ತಿಟ್ಟಿದ್ದಾರೆ. ಈ ಸಂದರ್ಭದ ಪ್ರೋಮೋ ವೈರಲ್ ಆಗಿ ಗಮನ ಸೆಳೆದಿದೆ. ಉಳಿದ ಸ್ಪರ್ಧಿಗಳು ನಾನಾ ರೀತಿಯಲ್ಲಿ ಪ್ರಪೋಸ್ ಮಾಡಿದ್ದಾರೆ. ಅವುಗಳು ಕೂಡ ಗಮನ ಸೆಳೆದಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

