Viral: ಬೆಂಗಳೂರಿನ ವಿದ್ಯಾರ್ಥಿ ಭವನದಲ್ಲಿ ಕೈಗೆ ಸಿಕ್ಕ ಪ್ರಾತ್ರೆಗಳಲ್ಲಿ ಅದ್ಭುತವಾಗಿ ಡ್ರಮ್ಸ್‌ ನುಡಿಸಿ ಶಿವಮಣಿ

ಪ್ರಖ್ಯಾತ ತಾಳವಾದ್ಯ ವಾದಕ ಶಿವಮಣಿ ಅವರು ಡ್ರಮ್ಸ್‌ ನುಡಿಸುವಂತಹ ವಿಡಿಯೋವೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕೆಲ ತಿಂಗಳುಗಳ ಹಿಂದೆ ಇವರು ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಅಲ್ಲಿದ್ದ ಕೆಲವೊಂದು ಪರಿಕರಗಳನ್ನು ಬಳಸಿ ಸಖತ್‌ ಆಗಿ ಸಂಗೀತ ನಾದ ಮೊಳಗಿಸಿದ್ದರು. ಇದೀಗ ಇವರು ಬೆಂಗಳೂರಿನ ವಿದ್ಯಾರ್ಥಿ ಭವನದ ಪಾಕಶಾಲೆಯಲ್ಲಿ ಪಾತ್ರೆಗಳನ್ನು ಬಳಸಿ ಅದ್ಭುತವಾಗಿ ತಾಳವಾದ್ಯ ನುಡಿಸಿದ್ದು, ಈ ದೃಶ್ಯ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Dec 03, 2024 | 5:12 PM

ಬೆಂಗಳೂರಿನ ವಿದ್ಯಾರ್ಥಿ ಭವನ ಸಖತ್‌ ಫೇಮಸ್.‌ ಇಲ್ಲಿನ ಮಸಾಲೆ ದೋಸೆ, ಇಡ್ಲಿ, ಖಾರಾ ಬಾತ್‌, ಕೇಸರಿ ಬಾತ್‌, ಪೂರಿ ಸಾಗು, ರವೆ ವಡೆ ಇತ್ಯಾದಿ ಬಾಯಲ್ಲಿ ನೀರೂರಿಸುವ ಕಾಫಿ ಕುಡಿಯಲು ಸಾಮಾನ್ಯ ಜನರಿಂದ ಹಿಡಿದು ರಾಜಕಾರಣಿಗಳು, ಸೆಲೆಬ್ರಿಟಿಗಳ ವರೆಗೆ ಇಲ್ಲಿಗೆ ಬರ್ತಾರೆ. ಇತ್ತೀಚಿಗೆ ಫೇಮಸ್‌ ತಾಳವಾದ್ಯ ವಾದಕ ಡ್ರಮ್ಸ್‌ ಶಿವಮಣಿ ಅವರು ಕೂಡಾ ಉಪಹಾರ ಸವಿಯಲು ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಪಾಕಶಾಲೆಗೆ ನುಗ್ಗಿ ಅವರು ಕೈಗೆ ಸಿಕ್ಕ ಪಾತ್ರೆಗಳನ್ನು ಬಳಸಿ ದೋಸೆ ಕಾವಲಿಯಲ್ಲಿ ಬಹಳ ಅದ್ಭುತವಾಗಿ ತಾಳವಾದ್ಯ ನುಡಿಸಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ತಾಳವಾದ್ಯ ವಾದಕರಾದ ಶಿವಮಣಿ ಅವರು ಡ್ರಮ್ಸ್‌ ನುಡಿಸುವುದರಲ್ಲಿ ಸಖತ್‌ ಫೇಮಸ್.‌ ಇದೀಗ ಅವರು ವಿದ್ಯಾರ್ಥಿ ಭವನ ಹೋಟೆಲ್‌ನಲ್ಲಿ ದೋಸೆ ಕಾವಲಿಯ ಮೇಲೆ ಅದ್ಭುತವಾಗಿ ತಾಳವಾದ್ಯ ನುಡಿಸಿದಂತಹ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಕುರಿತ ವಿಡಿಯೋವನ್ನು ವಿದ್ಯಾರ್ಥಿ ಭವನ (VidyarthiBhavan) ಎಕ್ಸ್‌ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದ್ದು, “ಲೆಜೆಂಡರಿ ಡ್ರಮ್ಮರ್‌ ಶಿವಮ್‌ ಅವರು ನಮ್ಮ ಅಡುಗೆ ಮನೆಯನ್ನು ವೇದಿಕೆಯಾಗಿ ಪರಿವರ್ತಿಸಿದರು. ಅವರು ತಮ್ಮ ಅಸಾಧಾರಣ ಕಲೆಯಿಂದಲೇ ನಮ್ಮನ್ನು ಮಂತ್ರಮುಗ್ಧಗೊಳಿಸಿದರು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ವಿದ್ಯಾರ್ಥಿ ಭವನದ ಪಾಕಶಾಲೆಯಲ್ಲಿ ಡ್ರಮ್ಸ್‌ ಶಿವಮ್‌ ಅವರು ಕೈಯಲ್ಲೆರಡು ಸ್ಟೀಲ್‌ ಬೌಲ್‌ ಹಿಡಿದುಕೊಂಡು ದೋಸೆ ಕಾವಲಿಯಲ್ಲಿ ಅದ್ಭುತವಾಗಿ ತಾಳವಾದ್ಯ ನುಡಿಸುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಬಸ್‌ ನಿಲ್ದಾಣದಲ್ಲಿ ಕುಳಿತಿದ್ದ ಯುವಕನ ಮೇಲೆಯೇ ನುಗ್ಗಿದ ಬಸ್; ಸಿಸಿ ಟಿವಿಯಲ್ಲಿ ಸೆರೆಯಾಯ್ತು ಅಪಘಾತದ ಭಯಾನಕ ದೃಶ್ಯ

ಇಂದು ಬೆಳಗ್ಗೆ ಹಂಚಿಕೊಳ್ಳಲಾದ ಈ ವಿಡಿಯೋ 19 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼವಾವ್ಹ್‌ ಇವರ ಸಂಗೀತ ಮೋಡಿಗೆ ನಾನು ಕಳೆದು ಹೋದೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಅದ್ಭುತವಾಗಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 5:10 pm, Tue, 3 December 24

ಬೆನ್ನಿಗೆ ವ್ಯಾಯಾಮ ನೀಡುವ ಯೋಗಾಸನ ಕಲಿಸಿದ ಶಿಲ್ಪಾ ಶೆಟ್ಟಿ; ವಿಡಿಯೋ ನೋಡಿ..
ಬೆನ್ನಿಗೆ ವ್ಯಾಯಾಮ ನೀಡುವ ಯೋಗಾಸನ ಕಲಿಸಿದ ಶಿಲ್ಪಾ ಶೆಟ್ಟಿ; ವಿಡಿಯೋ ನೋಡಿ..
ಜಗದಾಂಬಿಕಾ ಪಾಲ್​​ ಭೇಟಿಯಾದ ಯತ್ನಾಳ್​​ ಟೀಂ: ಏನೆಲ್ಲಾ ಚರ್ಚೆ ಆಯ್ತು?
ಜಗದಾಂಬಿಕಾ ಪಾಲ್​​ ಭೇಟಿಯಾದ ಯತ್ನಾಳ್​​ ಟೀಂ: ಏನೆಲ್ಲಾ ಚರ್ಚೆ ಆಯ್ತು?
ಮುಂಬೈನ ಬಾಂದ್ರಾದಲ್ಲಿ ಪೈಪ್‌ಲೈನ್ ಒಡೆದು 50 ಅಡಿ ಎತ್ತರಕ್ಕೆ ಹಾರಿದ ನೀರು
ಮುಂಬೈನ ಬಾಂದ್ರಾದಲ್ಲಿ ಪೈಪ್‌ಲೈನ್ ಒಡೆದು 50 ಅಡಿ ಎತ್ತರಕ್ಕೆ ಹಾರಿದ ನೀರು
ಎಟಿಎಂನಿಂದ ಹಣ ದೋಚಿದವ ಹೆಂಡತಿಗಾಗಿ ಎರಡು ಚಿನ್ನದ ಸರಗಳನ್ನು ಖರೀದಿಸಿದ
ಎಟಿಎಂನಿಂದ ಹಣ ದೋಚಿದವ ಹೆಂಡತಿಗಾಗಿ ಎರಡು ಚಿನ್ನದ ಸರಗಳನ್ನು ಖರೀದಿಸಿದ
ಧನರಾಜ್ ಮಿಮಿಕ್ರಿ ಕಲೆಗೆ ಭೇಷ್ ಎನ್ನಬೇಕು; ಬಿಗ್ ಬಾಸ್ ಮನೆಯ ಫನ್ನಿ ವಿಡಿಯೋ
ಧನರಾಜ್ ಮಿಮಿಕ್ರಿ ಕಲೆಗೆ ಭೇಷ್ ಎನ್ನಬೇಕು; ಬಿಗ್ ಬಾಸ್ ಮನೆಯ ಫನ್ನಿ ವಿಡಿಯೋ
ಮಂಗಳೂರಿನ ತಲಪಾಡಿಯಲ್ಲಿ ತಡೆಗೋಡೆ ಕುಸಿತ; ಸ್ಪೀಕರ್ ಯುಟಿ ಖಾದರ್ ಭೇಟಿ
ಮಂಗಳೂರಿನ ತಲಪಾಡಿಯಲ್ಲಿ ತಡೆಗೋಡೆ ಕುಸಿತ; ಸ್ಪೀಕರ್ ಯುಟಿ ಖಾದರ್ ಭೇಟಿ
ಆದಾಯಕ್ಕೆ ಮೀರಿದ ಆಸ್ತಿ ಪ್ರಕರಣದಲ್ಲಿ ಜಮೀರ್​ಗೆ ಸಮನ್ಸ್ ಜಾರಿಯಾಗಿತ್ತು
ಆದಾಯಕ್ಕೆ ಮೀರಿದ ಆಸ್ತಿ ಪ್ರಕರಣದಲ್ಲಿ ಜಮೀರ್​ಗೆ ಸಮನ್ಸ್ ಜಾರಿಯಾಗಿತ್ತು
ಕೆಪಿಸಿಸಿ ಅಧ್ಯಕ್ಷನಾದವನಿಗೆ ಮತಸೆಳೆಯುವ ಸಾಮರ್ಥ್ಯವಿರಬೇಕು: ಜಾರಕಿಹೊಳಿ
ಕೆಪಿಸಿಸಿ ಅಧ್ಯಕ್ಷನಾದವನಿಗೆ ಮತಸೆಳೆಯುವ ಸಾಮರ್ಥ್ಯವಿರಬೇಕು: ಜಾರಕಿಹೊಳಿ
ಭಾರತಕ್ಕೆ ಅವಮಾನಿಸಿದರಾ ಬಿಲ್ ಗೇಟ್ಸ್?
ಭಾರತಕ್ಕೆ ಅವಮಾನಿಸಿದರಾ ಬಿಲ್ ಗೇಟ್ಸ್?
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗಿನ ಬಗ್ಗೆ ತನಗೇನೂ ಗೊತ್ತಿಲ್ಲವೆಂದ ಸಚಿವೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗಿನ ಬಗ್ಗೆ ತನಗೇನೂ ಗೊತ್ತಿಲ್ಲವೆಂದ ಸಚಿವೆ