ಜೀವಕ್ಕೆ ಕುತ್ತು ತಂದ ಗಾಳಿಪಟ, ಬೈಕ್‌ ಚಲಾಯಿಸುತ್ತಿದ್ದ ವೇಳೆ ಕುತ್ತಿಗೆಗೆ ಗಾಳಿಪಟ ದಾರ ಸಿಲುಕಿ ಪ್ರಾಣ ಕಳೆದುಕೊಂಡ ವ್ಯಕ್ತಿ

ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಸಾವು ನೋವುಗಳು ಸಂಭವಿಸಿದ ಅದೆಷ್ಟೋ ಘಟನೆಗಳು ಈ ಹಿಂದೆಯೂ ನಡೆದಿವೆ. ಇದೀಗ ಇಲ್ಲೊಂದು ಇಂತಹದ್ದೇ ದುರಾದೃಷ್ಟಕರ ಘಟನೆ ನಡೆದಿದ್ದು, ಗಾಳಿಪಟ ದರ ಕುತ್ತಿಗೆಗೆ ಸಿಲುಕಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಗಾಳಿಪಟ ದಾರ ಕುತ್ತಿಗೆಗೆ ಸಿಲುಕಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಈ ಆಘಾತಕಾರಿ ಸುದ್ದಿ ಎಲ್ಲೆಡೆ ವೈರಲ್‌ ಆಗುತ್ತಿದೆ.

Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 03, 2024 | 6:29 PM

ಗಾಳಿಪಟ ಹಾರಿಸುವ ಸಂಭ್ರಮ, ಖುಷಿ ಎಷ್ಟೋ ಬಾರಿ ಇತರರ ಜೀವಕ್ಕೆ ಕುತ್ತು ತರುತ್ತವೆ. ಹೌದು ಗಾಳಿಪಟ ಹಾರಿಸುವ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಸಾವು ನೋವುಗಳು ಸಂಭವಿಸಿದ ಅದೆಷ್ಟೋ ಘಟನೆಗಳು ಈ ಹಿಂದೆಯೂ ನಡೆದಿವೆ. ಈ ದಾರ ಪಕ್ಷಿಗಳ ಜೀವವನ್ನು ಸಹ ಬಲಿ ತೆಗೆದುಕೊಂಡಿದೆ. ಇದೀಗ ಮತ್ತೊಂದು ಇಂತಹದ್ದೇ ಧಾರುಣ ಘಟನೆ ನಡೆದಿದ್ದು, ಗಾಳಿಪಟ ದರ ಕುತ್ತಿಗೆಗೆ ಸಿಲುಕಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಗಾಳಿಪಟ ದಾರ ಕುತ್ತಿಗೆಗೆ ಸಿಲುಕಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಈ ಆಘಾತಕಾರಿ ಸುದ್ದಿ ಎಲ್ಲೆಡೆ ವೈರಲ್‌ ಆಗುತ್ತಿದೆ.

ಗುಜರಾತ್‌ನ ಸೂರತ್‌ನಲ್ಲಿ ಈ ಧಾರುಣ ಘಟನೆ ನಡೆದಿದ್ದು, ಗಾಳಿಪಟದ ದಾರ 37 ವರ್ಷದ ವ್ಯಕ್ತಿಯೊಬ್ಬನ ಜೀವವನ್ನೇ ಬಲಿ ತೆಗೆದುಕೊಂಡಿದೆ. ಇಲ್ಲಿನ ಆಲ್ಪಾಡ್‌ ಕಿಮ್‌ ಗ್ರಾಮದ ಮೇಲ್ಸೇತುವೆಯ ಮೇಲೆ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಗಾಳಿಪಟದ ದಾರ ಈತನ ಕತ್ತನ್ನೇ ಸೀಳಿದೆ. ಗಂಭೀರ ಗಾಯಗಳಾದ ಪರಿಣಾಮ ತಕ್ಷಣ ಆ ವ್ಯಕ್ತಿಯನ್ನು ಸಾಧನಾ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ತದನಂತರ ಹೆಚ್ಚಿನ ಚಿಕಿತ್ಸೆಗಾಗಿ ಗಾಯಗೊಂಡ ವ್ಯಕ್ತಿಯನ್ನು ಸೂರತ್‌ ಸಿವಿಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆ ವ್ಯಕ್ತಿ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾನೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ