AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು 2025ರಲ್ಲಿ ಶಾಶ್ವತವಾಗಿ ಭಾರತ ಬಿಟ್ಟು ಸಿಂಗಾಪುರಕ್ಕೆ ಹೋಗಲಿದ್ದೇನೆ ಎಂದ ಗೋವಾ ಮೂಲದ ವ್ಯಕ್ತಿ, ಈ ನಿರ್ಧಾರಕ್ಕೆ ಕಾರಣ ಏನ್‌ ಗೊತ್ತಾ?

ತಾಯ್ನಾಡನ್ನು ಬಿಟ್ಟು ಹೋಗಲು ಯಾರು ಕೂಡಾ ಬಯಸಲ್ಲ. ಆದ್ರೆ ಇಲ್ಲೊಬ್ಬ ಭಾರತೀಯ ವ್ಯಕ್ತಿ ಪುಣ್ಯ ಭೂಮಿ ಭಾರತವನ್ನು ಶಾಶ್ವತವಾಗಿ ಬಿಟ್ಟು ಹೋಗುವಂತಹ ನಿರ್ಧಾರವನ್ನು ಮಾಡಿದ್ದಾರೆ. ಹೌದು ನಾನು 2025 ರಲ್ಲಿ ಶಾಶ್ವತವಾಗಿ ಭಾರತ ಬಿಟ್ಟು ಸಿಂಗಾಪುರಕ್ಕೆ ಶಿಫ್ಟ್‌ ಆಗ್ತಿದ್ದೇನೆ. ನೀವೇನಾದರೂ ಹಣವಂತರಾಗಿದ್ದರೆ ದಯವಿಟ್ಟು ನೀವು ಕೂಡಾ ಈ ದೇಶವನ್ನು ಬಿಟ್ಟು ಹೋಗಿ ಎಂದು ಸಲಹೆ ನೀಡಿದ್ದಾರೆ. ಈ ಕುರಿತ ಪೋಸ್ಟ್‌ ಒಂದು ಸಖತ್‌ ವೈರಲ್‌ ಆಗಿದ್ದು, ಗೋವಾ ಮೂಲದ ಈ ವ್ಯಕ್ತಿಯ ಈ ನಿರ್ಧಾರದ ಹಿಂದಿನ ಕಾರಣವನ್ನು ಕೇಳಿದ್ರೆ ಶಾಕ್‌ ಆಗೋದಂತೂ ಗ್ಯಾರಂಟಿ.

ನಾನು 2025ರಲ್ಲಿ ಶಾಶ್ವತವಾಗಿ ಭಾರತ ಬಿಟ್ಟು ಸಿಂಗಾಪುರಕ್ಕೆ ಹೋಗಲಿದ್ದೇನೆ ಎಂದ ಗೋವಾ ಮೂಲದ ವ್ಯಕ್ತಿ, ಈ ನಿರ್ಧಾರಕ್ಕೆ ಕಾರಣ ಏನ್‌ ಗೊತ್ತಾ?
ವೈರಲ್​ ಪೋಸ್ಟ್​​
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Dec 04, 2024 | 11:50 AM

Share

ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ವಾಯು ಮಾಲಿನ್ಯದ ಜೊತೆಜೊತೆಗೆ ತೆರಿಗೆ ಹಣ ಕೂಡಾ ಹೆಚ್ಚಳವಾಗಿದ್ದು, ಈ ಎರಡೂ ಸಮಸ್ಯೆಗಳ ಜೊತೆಜೊತೆಗೆ ರಾಜಕಾರಣಿಗಳ ಅವಸ್ಥೆಗಳು ಕೂಡ ಜನಸಾಮಾನ್ಯರಿಗೆ ತಲೆ ಬಿಸಿಯಾಗಿ ಪರಿಣಾಮಿಸಿದೆ. ವಿಶೇಷವಾಗಿ ಈ ಮಾಲಿನ್ಯದ ಕಾರಣದಿಂದಾಗಿ ಜನ ಉತ್ತಮ ಗುಣಮಟ್ಟದ ಜೀವನಕ್ಕಾಗಿ ಪರದಾಟ ನಡೆಸುತ್ತಿದ್ದಾರೆ. ನನಗೆ ಇದ್ಯಾವ ಸಮಸ್ಯೆಗಳ ತಲೆ ಬಿಸಿಯೂ ಬೇಡವೆಂದು ಇಲ್ಲೊಬ್ರು ವ್ಯಕ್ತಿ ಶಾಶ್ವತವಾಗಿ ಪುಣ್ಯ ಭೂಮಿ ಭಾರತವನ್ನೇ ಬಿಟ್ಟು ಹೋಗುವ ನಿರ್ಧಾರವನ್ನು ಮಾಡಿದ್ದಾರೆ. ಹೌದು ನಾನು 2025 ರಲ್ಲಿ ಶಾಶ್ವತವಾಗಿ ಭಾರತ ಬಿಟ್ಟು ಸಿಂಗಾಪುರಕ್ಕೆ ಶಿಫ್ಟ್‌ ಆಗ್ತಿದ್ದೇನೆ. ನೀವೇನಾದರೂ ಹಣವಂತರಾಗಿದ್ದರೆ ದಯವಿಟ್ಟು ನೀವು ಕೂಡಾ ಈ ದೇಶವನ್ನು ಬಿಟ್ಟು ಹೋಗಿ ಎಂದು ಸಲಹೆ ನೀಡಿದ್ದಾರೆ. ಈ ಕುರಿತ ಪೋಸ್ಟ್‌ ಒಂದು ಸಖತ್‌ ವೈರಲ್‌ ಆಗುತ್ತಿದೆ.

ಹೆಚ್ಚುತ್ತಿರುವ ಮಾಲಿನ್ಯ, ತೆರಿಗೆ ಹಣದ ಹೆಚ್ಚಳ, ರಾಜಕಾರಣಿಗಳ ಅವಸ್ಥೆ ಇವೆಲ್ಲದರಿಂದ ಹತಾಶರಾದ ಗೋವಾ ಮೂಲದ ವ್ಯಕ್ತಿ ಸಿದ್ಧಾರ್ಥ್‌ ಸಿಂಗ್‌ ಗೌತಮ್‌ 2025ರಲ್ಲಿ ಭಾರತವನ್ನು ಬಿಟ್ಟು ಶಾಶ್ವತವಾಗಿ ಸಿಂಗಾಪುರಕ್ಕೆ ಶಿಪ್ಟ್‌ ಆಗಲು ನಿರ್ಧರಿಸಿದ್ದಾರೆ. ಜೊತೆಗೆ ಹಣವಂತರಾಗಿದ್ದರೆ ನೀವು ಕೂಡಾ ಈ ದೇಶವನ್ನು ಬಿಟ್ಟು ಹೋಗಿ ಎಂಬ ಸಲಹೆಯನ್ನು ಕೂಡಾ ನೀಡಿದ್ದಾರೆ.

ವೈರಲ್​​​​ ಪೋಸ್ಟ್​​​ ಇಲ್ಲಿದೆ ನೋಡಿ:

ಸಿದ್ಧಾರ್ಥ್‌ ಸಿಂಗ್‌ (sidacap_100) ಈ ಕುರಿತ ಪೋಸ್ಟ್‌ ಒಂದನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ನಾನು 2025 ರಲ್ಲಿ ಭಾರತವನ್ನು ತೊರೆದು ಶಾಶ್ವತವಾಗಿ ಸಿಂಗಾಪುರಕ್ಕೆ ಶಿಫ್ಟ್‌ ಆಗಲಿದ್ದೇನೆ. ಇದರ ಎಲ್ಲಾ ಪ್ರಕ್ರಿಯೆಗಳು ನಡೆಯುತ್ತಿದೆ. ರಾಜಕಾರಣಿಗಳ ಅವಸ್ಥೆ, 40% ತೆರಿಗೆ, ಕಲುಷಿತ ಗಾಳಿ ಇವೆಲ್ಲದರಿಂದ ಬೇಸತ್ತು ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ನನ್ನ ಸಲಹೆ ಏನೆಂದರೆ ನೀವೇನಾದ್ರು ಹಣವಂತರಾಗಿದ್ದರೆ ನೀವು ಕೂಡಾ ಈ ದೇಶವನ್ನು ಬಿಟ್ಟು ಹೋಗಿ” ಎಂಬ ಸುದೀರ್ಘ ಬರಹವನ್ನು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಆಕಾಶದಿಂದ ಹೊಲಕ್ಕೆ ಬಿದ್ದ ನಿಗೂಢ ಸಾಧನ, ಅದರೊಳಗೆ ಏನಿತ್ತು ಗೊತ್ತಾ?

ಡಿಸೆಂಬರ್‌ 1 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 1.9 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನೀವು ಏನೇ ಹೇಳಿ ನಾನು ಯಾವುದೇ ಕಾರಣಕ್ಕೂ ನನ್ನ ತಾಯ್ನಾಡನ್ನು ಬಿಟ್ಟು ಹೋಗಲಾರೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಪ್ರತಿಯೊಬ್ಬರೂ ಕೂಡಾ ಉತ್ತಮ ಗುಣಮಟ್ಟದ ಜೀವನಕ್ಕೆ ಅರ್ಹರು. ನೀವು ಶುದ್ಧ ಗಾಳಿಗಾಗಿ ಬೇರೆಡೆ ಸ್ಥಳಾಂತರಗೊಳ್ಳುತ್ತೇನೆ ಎಂದು ಹೇಳಿದ್ದರಲ್ಲಿ ಯಾವುದೇ ತಪಿಲ್ಲʼ ಎಂದು ಕಾಮೆಂಟ್‌ ಮಾಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..