Viral: ಆಕಾಶದಿಂದ ಹೊಲಕ್ಕೆ ಬಿದ್ದ ನಿಗೂಢ ಸಾಧನ, ಅದರೊಳಗೆ ಏನಿತ್ತು ಗೊತ್ತಾ?

ಮಹಾರಾಷ್ಟ್ರದಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಮೋಡ ಕವಿದ ವಾತಾವರಣದ ನಡುವೆ ಆಕಾಶದಿಂದ ಬಲೂನ್‌ ತರಹದ ವಸ್ತುವೊಂದು ರೈತರೊಬ್ಬರ ಹೊಲಕ್ಕೆ ಬಂದು ಬಿದ್ದಿದೆ. ಕೊರಿಯನ್‌ ಭಾಷೆಯ ಬರಹಗಳಿದ್ದ ಈ ನಿಗೂಢ ಸಾಧನವನ್ನು ನೋಡಲು ಜನ ದೌಡಾಯಿಸಿದ್ದು, ಈ ಕುರಿತ ಸುದ್ದಿಯೊಂದು ಭಾರೀ ವೈರಲ್‌ ಆಗುತ್ತಿದೆ.

Viral: ಆಕಾಶದಿಂದ ಹೊಲಕ್ಕೆ ಬಿದ್ದ ನಿಗೂಢ ಸಾಧನ, ಅದರೊಳಗೆ ಏನಿತ್ತು ಗೊತ್ತಾ?
ವೈರಲ್​​ ಫೋಟೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 03, 2024 | 5:50 PM

ಯಾವುದಾದರೂ ವಿಚಿತ್ರ ಅಥವಾ ಅಹಸಜ ಎನ್ನುವಂತಹ ಘಟನೆಗಳು ಸಂಭವಿಸಿದಾಗ ಜನರಲ್ಲಿ ಏನೋ ಒಂದು ಭಯ ಆವರಿಸುತ್ತದೆ. ಕೆಲ ದಿನಗಳ ಹಿಂದೆ ಹೀಗೆ ಕಾರವಾರದಲ್ಲಿ ಕಾಲಲ್ಲಿ ಟ್ಯಾಗ್‌, ಬೆನ್ನಿನ ಭಾಗದಲ್ಲಿ ಟ್ರಾನ್ಸ್‌ಮೀಟರ್ ಇದ್ದ ರಣಹದ್ದು ಎಂಟ್ರಿ ಕೊಟ್ಟು ಅಲ್ಲಿನ ಜನರ ನಿದ್ದೆಗೆಡಿಸಿದ್ದಂತ ಸುದ್ದಿಯ ಬಗ್ಗೆ ಕೇಳಿದ್ದೀರಿ ಅಲ್ವಾ. ಇದೀಗ ಇಲ್ಲೊಂದು ಕಡೆ ಇಂತಹದ್ದೇ ವಿಚಿತ್ರವೆನಿಸುವಂತಹ ಘಟನೆ ನಡೆದಿದ್ದು, ಮೋಡ ಕವಿದ ವಾತಾವರಣದ ನಡುವೆ ಆಕಾಶದಿಂದ ಬಲೂನ್‌ ತರಹದ ವಸ್ತುವೊಂದು ರೈತರೊಬ್ಬರ ಹೊಲಕ್ಕೆ ಬಂದು ಬಿದ್ದಿದೆ. ಕೊರಿಯನ್‌ ಭಾಷೆಯ ಬರಹಗಳಿದ್ದ ಈ ನಿಗೂಢ ಸಾಧನವನ್ನು ನೋಡಲು ಜನ ದೌಡಾಯಿಸಿದ್ದು, ಈ ಕುರಿತ ಸುದ್ದಿಯೊಂದು ಭಾರೀ ವೈರಲ್‌ ಆಗುತ್ತಿದೆ.

ಮಹಾರಾಷ್ಟ್ರದ ಚಿಖಲಿ ತಾಲೂಕಿನ ಅಂಚರವಾಡಿಯಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ಆಕಾಶದಿಂದ ಬಲೂನ್‌ ರೀತಿಯ ನಿಗೂಢ ವಸ್ತು ಬಿದ್ದಿದ್ದನ್ನು ಕಂಡು ಜನ ಭಯಬೀತರಾಗಿದ್ದಾರೆ. ಡಿಸೆಂಬರ್‌ 2 ಸೋಮವಾರದಂದು ಮೋಡ ಕವಿದ ವಾತಾವರಣದ ಮಧ್ಯೆ ಅಂಚರವಾಡಿಯ ಸಂಜಯ್‌ ಸೀತಾರಾಮ ಪರಿಹಾರ್ ಎಂಬವರ ಹೊಲಕ್ಕೆ ಬಲೂನ್‌ ತರಹದ ನಿಗೂಢವಾದ ವಸ್ತು ಬಿದ್ದಿದೆ. ಸಂಜಯ್‌ ಪರಿಹಾರ್‌ ಅವರ ಮಗ ಅವಿನಾಶ್‌ ಮತ್ತು ಸೋದರ ಸಂಬಂಧಿ ವೈಭವ್‌ ಜೊತೆ ಎಂದಿನಂತೆ ಹೊಲಕ್ಕೆ ಬಂದ ವೇಳೆ ಈ ನಿಗೂಢ ವಸ್ತುವನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.

ಹತ್ತಿರಕ್ಕೆ ಹೋಗಿ ಪರಿಶೀಲಿಸಿದಾಗ ಕೊರಿಯನ್‌ ಭಾಷೆಯ ಅಕ್ಷರಗಳಿದ್ದಂತಹ ಸಾಧನವನ್ನು ದೊಡ್ಡ ಬಲೂನ್‌ಗೆ ಜೋಡಿಸಿರುವುದನ್ನು ಗಮನಿಸುತ್ತಾರೆ. ತಕ್ಷಣ ಅವರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ತಿಳಿಸಿದ್ದು, ವಿಷಯ ಗೊತ್ತಾಗುತ್ತಿದ್ದಂತೆ ಈ ನಿಗೂಢ ವಸ್ತುವನ್ನು ಕಣ್ತುಂಬಿಕೊಳ್ಳಲು ಗ್ರಾಮಸ್ಥರು ಹೊಲದ ಬಲಿ ದೌಡಾಯಿಸಿದ್ದಾರೆ. ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಕಂದಾಯ ಇಲಾಖೆ ತನಿಖೆ ನಡೆಸಿ ಸಾಧನವನ್ನು ವಶಕ್ಕೆ ಪಡೆದಿದ್ದಾರೆ. ಸಾಧನ ಎಲ್ಲಿಂದ ಬಂತು ಎಂಬ ಬಗ್ಗೆ ತನಿಖೆ ಆರಂಭಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ವಿದ್ಯಾರ್ಥಿ ಭವನದಲ್ಲಿ ಕೈಗೆ ಸಿಕ್ಕ ಪ್ರಾತ್ರೆಗಳಲ್ಲಿ ಅದ್ಭುತವಾಗಿ ಡ್ರಮ್ಸ್‌ ನುಡಿಸಿ ಶಿವಮಣಿ

ಕೊರಿಯನ್‌ ಭಾಷೆಯ ಅಕ್ಷರಗಳಿರುವ ಈ ಸಾಧನ ಹವಾಮಾನಕ್ಕೆ ಸಂಬಂಧಿಸಿದ ಸಾಧನವಾಗಿದೆ ಎಂದು ಊಹಿಸಲಾಗಿದೆ. ಆದರೆ ಈ ಸಾಧನ ಇಲ್ಲಿಗೆ ಹೇಗೆ ಬಂತು ಮತ್ತು ಅದರ ಉದ್ದೇಶ ಏನು ಎಂಬುದರ ಕುರಿತು ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಸಾಧನದ ಬಗ್ಗೆ ಜನರು ಯಾವ ರೀತಿಯೂ ಭಯಪಡಬೇಕಾದ ಅವಶ್ಯಕತೆ ಇಲ್ಲ ಎಂದು ನಾಗ್ಪುರದ ಪ್ರಾದೇಶಿಕ ಹವಾಮಾನ ಇಲಾಖೆ ಹೇಳಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ