ಮೊದಲ ರಾತ್ರಿಯಲ್ಲಿ ಬಿಯರ್ ಮತ್ತು ಗಾಂಜಾ ಕೇಳಿದ ವಧು, ಮದುವೆಗೆ ಇತಿಶ್ರೀ ಹಾಡಿದ ವರ
ಯುಪಿಯ ಸಹರಾನ್‌ಪುರದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಮದುವೆಯ ರಾತ್ರಿ ವಧು ಬಹಿರಂಗವಾಗಿ ಬಿಯರ್ ಮತ್ತು ಗಾಂಜಾಕ್ಕೆ ಬೇಡಿಕೆ ಇಟ್ಟಿದ್ದಾಳೆ.ಇಡೀ ವಿಷಯವನ್ನು ಕುಟುಂಬದವರಿಗೆ ಹೇಳಿದಾಗ ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಮೊದಮೊದಲು ಇದು ತಮಾಷೆ ಎಂದುಕೊಂಡಿದ್ದ, ಆದರೆ ಆಕೆ ಗಂಭೀರವಾಗಿಯೇ ಇದನ್ನು ಕೇಳಿದ್ದಳು.
ಇಷ್ಟಪಟ್ಟು ಮದುವೆಯಾಗಿದ್ದರು, ಇಂದಿನಿಂದ ಹೊಸ ಜೀವನ ಆರಂಭಿಸುವ ಉತ್ಸಾಹದಲ್ಲಿದ್ದರು. ಆದರೆ ಮೊದಲರಾತ್ರಿಯಲ್ಲಿ ವಧು ಗಾಂಜಾ ಹಾಗೂ ಬಿಯರ್ ಕೊಡಿ ಎಂದು ಕೇಳಿದಾಗ ವರ ಬೆಚ್ಚಿಬಿದ್ದಿದ್ದಾನೆ. ಅಷ್ಟೇ ಅಲ್ಲದೆ ಮದುವೆಗೆ ಇತಿಶ್ರೀ ಹಾಡಿದ್ದಾನೆ. ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಘಟನೆ ನಡೆದಿದೆ, ವಧು ನಡೆದುಕೊಂಡಿದ್ದ ರೀತಿ ಹಾಗೂ ಆಕೆಯ ಬೇಡಿಕೆಯನ್ನು ಕೇಳಿ ಆತ ಬೆಚ್ಚಿಬಿದ್ದಿದ್ದಾನೆ ಕೂಡಲೇ ಮದುವೆಯನ್ನು ರದ್ದುಪಡಿಸುವ ನಿರ್ಧಾರಕ್ಕೆ ಬಂದಿದ್ದಾನೆ.
ಈ ವಿಚಾರವನ್ನು ಮನೆಯವರಿಗೆ ತಿಳಿಸಿದ್ದು, ಕೋಲಾಹಲ ಸೃಷ್ಟಿಯಾಗಿತ್ತು. ಸ್ವಲ್ಪ ಸಮಯದ ಬಳಿಕ ಪೊಲೀಸರಿಗೆ ವಿಷಯ ತಿಳಿಸಲಾಯಿತು. ಅವರು ದಂಪತಿಯನ್ನು ಒಟ್ಟಿಗೆ ಇರುವಂತೆ ಮನವೊಲಿಸಲು ಪ್ರಯತ್ನಿಸಿದರು. ಆದರೆ ವರನ ನಿರ್ಧಾರ ದೃಢವಾಗಿತ್ತು, ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ.
ಅಂಥಾ ಅಭ್ಯಾಸವನ್ನು ಎಂದೂ ಒಪ್ಪಿಕೊಳ್ಳಲು ಸಿದ್ಧನಿರಲಿಲ್ಲ. ಈ ವಿಲಕ್ಷಣ ಘಟನೆಯು ಸಾಮಾಜಿಕ ಮಾಧ್ಯಮದಾದ್ಯಂತ ಚರ್ಚೆಯ ಅಲೆಯನ್ನು ಹುಟ್ಟುಹಾಕಿದೆ, ವಧುವಿನ ಅಸಾಮಾನ್ಯ ಬೇಡಿಕೆಗಳ ಕೇಳಿ ಜನರಿಗೆ ಆಶ್ಚರ್ಯವಾಗಿದೆ.
ಮತ್ತೊಂದು ಘಟನೆ ಮದುವೆ ಮಂಟಪದಿಮದ ಪದೇ ಪದೇ ಎದ್ದು ಹೋಗುತ್ತಿದ್ದ ವರ
ದೆಹಲಿಯ ಸಾಹಿಬಾಬಾದ್ನಲ್ಲಿ ಮದುವೆಯೊಂದು ನಿಶ್ಚಯವಾಗಿತ್ತು. ಶಾಸ್ತ್ರಗಳೆಲ್ಲಾ ಸುಸೂತ್ರವಾಗಿ ನಡೆಯುತ್ತಿದ್ದವು. ಆದರೆ ವರ ಪದೇ ಪದೇ ಮಂಟಪದಿಂದ ಎದ್ದು ಹೋಗುತ್ತಿದ್ದ. ವಧು ಏನೇ ಕೇಳಿದರೂ ಯಾವ ಉತ್ತರವನ್ನೂ ನೀಡುತ್ತಿರಲಿಲ್ಲ. ಆಗ ವಧು ತನ್ನ ಕಡೆಯವರನ್ನು ಆತನ ಹಿಂದೆ ಹೋಗುವಂತೆ ಹೇಳಿದಾಗ ಅಲ್ಲಿ ನಡೆಯುತ್ತಿರುವುದನ್ನು ಕಂಡು ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ.
ಮತ್ತಷ್ಟು ಓದಿ: ಮದುವೆ ಮಂಟಪದಿಂದ ಹತ್ತಾರು ಬಾರಿ ಎದ್ದು ಹೋಗ್ತಿದ್ದ ವರ, ಅನುಮಾನ ಬಂದು ಹಿಂದೆ ಹೋದಾಗ ಕಂಡಿದ್ದೇನು?
ಮೊದಲು ಮೊದಲು ವಾಶ್ರೂಮ್ಗೆ ಹೋಗುತ್ತಿರಬೇಕು ಎಂದುಕೊಂಡಿದ್ದರು. ಆದರೆ ಆತ ಸ್ನೇಹಿತರೊಂದಿಗೆ ಕುಳಿತುಕೊಂಡು ಮಾದಕದ್ರವ್ಯ ಸೇವಿಸುತ್ತಿರುವುದು ಕಂಡು ಎಲ್ಲರೂ ಗಾಬರಿಗೊಂಡರು. ಮದುವೆಯ ಈ ದಿನಕ್ಕಾಗಿ ತಿಂಗಳಾನುಗಟ್ಟಲೆ ಗಂಡು-ಹೆಣ್ಣಿಬ್ಬರೂ ತುಂಬಾ ತಯಾರಿ ನಡೆಸಿದ್ದರು.ಆದರೆ ಮದುವೆಯ ದಿನ ನಡೆದ ಘಟನೆ ಅನಿರೀಕ್ಷಿತ ತಿರುವು ಪಡೆದುಕೊಂಡಿತು.
ಆತ ಪದೇ ಪದೇ ಹೊರಗೆ ಹೋಗಿಬಂದಾಗಲೂ ವಿಚಿತ್ರವಾಗಿ ವರ್ತಿಸುತ್ತಿದ್ದ ಸರಿಯಾಗಿ ನಡೆಯಲು ಕೂಡ ಆತನಿಂದ ಸಾಧ್ಯವಾಗುತ್ತಿರಲಿಲ್ಲ. ಸತ್ಯ ಬೆಳಕಿಗೆ ಬಂದಾಗ ಮದುವೆಮನೆ ಗೊಂದಲದ ಗೂಡಾಯಿತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಅಲ್ಲಿಗೆ ಕರೆಸಿದರು. ವರನ ಕುಟುಂಬದವರು 10 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:39 am, Fri, 20 December 24