Viral: 90 ವರ್ಷಗಳ ನಂತರ ನ್ಯೂಯಾರ್ಕ್​ ಲೈಬ್ರರಿಗೆ ಮರಳಿದ ಪುಸ್ತಕ; ಶುಲ್ಕ ಎಷ್ಟಿರಬಹುದು?

|

Updated on: Oct 16, 2023 | 12:15 PM

Library Book: ಒಂದು ತಿಂಗಳ ನಂತರ ಪುಸ್ತಕವನ್ನು ಗ್ರಂಥಾಲಯಕ್ಕೆ ಮರಳಿಸದಿದ್ದರೆ, ಗ್ರಂಥಾಲಯವು ಪುಸ್ತಕವು ಕಳೆದುಹೋಗಿದೆ ಎಂದು ಸದಸ್ಯರಿಂದ ಪುಸ್ತಕದ ಬೆಲೆಯನ್ನು ವಸೂಲಿ ಮಾಡಿಕೊಳ್ಳುತ್ತದೆ. ಆದರೆ ಈ ಪುಸ್ತಕ ಕಳೆದದ್ದು 90 ವರ್ಷಗಳ ಹಿಂದೆ. ಈಗ ಗ್ರಂಥಾಲಯಕ್ಕೆ ಮರಳಿಸಿದ ಮೇಲೆ ಸಂಬಂಧಿಸಿದ ವಾರಸುದಾರರು ಕಟ್ಟಬೇಕಾದ ದಂಡ ಕೇಳಿದರೆ ಖಂಡಿತ ಹೌಹಾರುತ್ತೀರಿ!

Viral: 90 ವರ್ಷಗಳ ನಂತರ ನ್ಯೂಯಾರ್ಕ್​ ಲೈಬ್ರರಿಗೆ ಮರಳಿದ ಪುಸ್ತಕ; ಶುಲ್ಕ ಎಷ್ಟಿರಬಹುದು?
90 ವರ್ಷಗಳ ಬಳಿಕ ನ್ಯೂಯಾರ್ಕ್​ ಲೈಬ್ರರಿಗೆ ಮರಳಿದ ಪುಸ್ತಕ
Follow us on

New York: ಅನೇಕರು ನಿಮ್ಮಲ್ಲಿ ಲೈಬ್ರರಿಯಿಂದ (Library) ಪುಸ್ತಕ ತಂದು ಓದುವ ಅಭ್ಯಾಸವನ್ನು ಇನ್ನೂ ಇಟ್ಟುಕೊಂಡಿರುತ್ತೀರಿ. ಅಬ್ಬಬ್ಬಾ ಎಂದರೆ ಒಂದು ವಾರದಿಂದ ಒಂದು ತಿಂಗಳೊಳಗೆ ಪುಸ್ತಕವನ್ನು ಮರಳಿಸುತ್ತೀರಿ. ಆದರೆ ಇದೀಗ ವೈರಲ್ ಆಗಿರುವ ಈ ಪೋಸ್ಟ್​ ಗಮನಿಸಿ. ​ ಲೈಬ್ರರಿಗೆ 90 ವರ್ಷಗಳ ನಂತರ ಪುಸ್ತಕವೊಂದು ಮರಳಿದೆ. ಹಾಗಿದ್ದರೆ ಇದಕ್ಕೆ ಲೈಬ್ರರಿಯು ವಿಧಿಸಿದ ಶುಲ್ಕ ಎಷ್ಟಿರಬಹುದು? ನ್ಯೂಯಾರ್ಕ್​ನ ಲಾರ್ಚ್​ಮಂಟ್ ಪಬ್ಲಿಕ್​ ಲೈಬ್ರರಿಯಲ್ಲಿ ಈ ಅಪರೂಪದ ಘಟನೆ ನಡೆದಿದೆ. 1933ರ ಅಕ್ಟೋಬರ್ 11ರಂದು ಜೋಸೆಫ್​ ಕಾನ್ರಾಡ್​ ಬರೆದ ‘ಯೂತ್ ಅಂಡ್ ಟು ಅದರ್​ ಸ್ಟೋರೀಸ್​’ ಪುಸ್ತಕವು ಈ ಲೈಬ್ರರಿಗೆ ಮರಳಬೇಕಿತ್ತು. ಆದರೆ ಹಾಗಾಗದೆ 90 ವರ್ಷಗಳ ನಂತರ ಅದು ಮರಳಿದೆ!

ಟಿವಿ9 ಡಿಜಿಟಲ್ ಕನ್ನಡ ವಾಟ್ಸಪ್ ಚಾನೆಲ್ ಸೇರಲು ಕ್ಲಿಕ್ ಮಾಡಿ

‘ಇತ್ತೀಚೆಗೆ ವರ್ಜೀನಿಯಾದಿಂದ ಒಂದು ಪ್ಯಾಕೇಜ್​ ನಮ್ಮನ್ನು ತಲುಪಿತು. ತೆರೆದು ನೋಡಿದರೆ ಅದರೊಳಗೆ 90 ವರ್ಷಗಳ ಹಿಂದೆ ನಮ್ಮ ಲೈಬ್ರರಿಯಿಂದ ತೆಗೆದುಕೊಂಡಿದ್ದ ಪುಸ್ತಕವನ್ನು ಮರಳಿಸಲಾಗಿತ್ತು. 1925 ರಲ್ಲಿ ಈ ಪುಸ್ತಕವು ಪ್ರಕಟಗೊಂಡಿತ್ತು. ದಿನಕ್ಕೆ ಇಪ್ಪತ್ತು ಸೆಂಟ್‌ಗಳ ಲೆಕ್ಕದಲ್ಲಿ $ 6,400 (53 ಮಿಲಿಯನ್​) ಆಗುವ ಸಾಧ್ಯತೆ ಇದೆ’ ಎಂದು ಲಾರ್ಚ್​ಮಂಟ್ ಲೈಬ್ರರಿ ತಿಳಿಸಿದೆ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇಲ್ಲಿದೆ ಆ ಪುಸ್ತಕ!

ಸಾಮಾನ್ಯವಾಗಿ 30 ದಿನಗಳೊಳಗೆ ಪುಸ್ತಕವನ್ನು ಗ್ರಂಥಾಲಯಕ್ಕೆ ಮರಳಿಸದಿದ್ದರೆ ಆ ಪುಸ್ತಕವು ಕಳೆದುಹೋಗಿದೆ ಎಂದು ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲ ಅದನ್ನು ಪಡೆದುಕೊಂಡವರಿಂದ ಆ ಪುಸ್ತಕದ ಬೆಲೆಯನ್ನು ವಸೂಲಿ ಮಾಡಲಾಗುತ್ತದೆ. ಅದಾಗದಿದ್ದರೆ ಗರಿಷ್ಠ ಐದು ಡಾಲರ್ ದಂಡ ವಿಧಿಸಲಾಗುತ್ತದೆ. ಆದಾಗ್ಯೂ ಮರಳಿಸದಿದ್ದರೆ ದಂಡ ಹೆಚ್ಚುತ್ತಾ ಹೋಗುತ್ತದೆ.

ಇದನ್ನೂ ಓದಿ : Viral Video: ‘ನನ್ನ ಚಿಕ್ಕಪ್ಪನ ಅಂತ್ಯಕ್ರಿಯೆ ವೇಳೆ ಕುಣಿಯೊಳಗೆ ಇಳಿದ ನಾಯಿ’

ತನ್ನ ಮಲತಂದೆಯ ವಸ್ತುಗಳ ನಡುವೆ ಈ ಪುಸ್ತಕವು ಸಿಕ್ಕಿತು. ನಂತರ ಅದನ್ನು ಲೈಬ್ರರಿಗೆ ಹಿಂದಿರುಗಿಸಿದೆ ಎಂದು ಜೊವಾನಿ ಮೋರ್ಗನ್ ತಿಳಿಸಿದ್ದಾರೆ. ಈ ಪೋಸ್ಟ್ ಅನ್ನು ಅಕ್ಟೋಬರ್ 11 ರಂದು ಫೇಸ್​ಬುಕ್​ನಲ್ಲಿ ಹಂಚಿಕೊಳ್ಳಲಾಗಿದೆ. ನಿಜಕ್ಕೂ ಇದು ಅದ್ಭುತವಾದ ಸಂಗತಿ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು? ನೀವೆಂದಾದರೂ ಲೈಬ್ರರಿಗೆ ಪುಸ್ತಕವನ್ನು ಮರಳಿಸುವಲ್ಲಿ ವಿಳಂಬ ಮಾಡಿದ್ದಿರೇ? ಪರಿಣಾಮವೇನಾಯಿತು, ಹಂಚಿಕೊಳ್ಳಿ.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:08 pm, Mon, 16 October 23