Viral News: ಆಕೆ ನೀಡಿದ ಸೇವೆ, ಪ್ರೀತಿ, ಶಕ್ತಿಗಾಗಿ 1.75 ಕೋಟಿ ರೂ. ವಿಚ್ಛೇದನ ಪರಿಹಾರ ನೀಡಿ, ಕೋರ್ಟ್ ಖಡಕ್ ಆದೇಶ

ಮಾಜಿ ಪತ್ನಿಗೆ ವಿಚ್ಛೇದನ ಪರಿಹಾರವಾಗಿ ತನ್ನ ಗಂಡನ ಮನೆಗೆ ಮಾಡಿದ ಸೇವೆಗಾಗಿ ಆಕೆಗೆ ವಾರ್ಷಿಕ ಕನಿಷ್ಠ ವೇತನ ರೂಪದಲ್ಲಿ ಪರಿಹಾರ ನೀಡಬೇಕು ಎಂದು ಸ್ಪೇನ್‌ನ ನ್ಯಾಯಾಲಯ ವಿಭಿನ್ನವಾದ ಆದೇಶವನ್ನು ನೀಡಿದೆ.

Viral News: ಆಕೆ ನೀಡಿದ ಸೇವೆ, ಪ್ರೀತಿ, ಶಕ್ತಿಗಾಗಿ 1.75 ಕೋಟಿ ರೂ. ವಿಚ್ಛೇದನ ಪರಿಹಾರ ನೀಡಿ, ಕೋರ್ಟ್ ಖಡಕ್ ಆದೇಶ
ಸಾಂದರ್ಭಿಕ ಚಿತ್ರ

Updated on: Mar 09, 2023 | 1:52 PM

ಮದುವೆಯಾಗಿ ಎರಡು ದಶಕಗಳ ಕಾಲ ಜೊತೆಗಿದ್ದು, ತನ್ನ ಗಂಡನ ಮನೆಗೆ ಮಾಡಿದ ಸೇವೆಗಾಗಿ ಆಕೆಗೆ ಹಣದ ರೂಪದಲ್ಲಿ ಪರಿಹಾರ ನೀಡಬೇಕು ಎಂದು ಸ್ಪೇನ್‌ನ ನ್ಯಾಯಾಲಯ ವಿಭಿನ್ನವಾದ ಆದೇಶವನ್ನು ನೀಡಿದೆ. ಮಾಜಿ ಪತ್ನಿಗೆ ಪರಿಹಾರವಾಗಿ 1,80,000 ಅಥವಾ ಸುಮಾರು 1.75 ಕೋಟಿ ರೂ. ಪಾವತಿಸಲು ಸ್ಪೇನ್‌ನ ನ್ಯಾಯಾಲಯವು ಆದೇಶಿಸಿದೆ. ಪತಿ ಮದುವೆಯಾಗಿರುವ ದಿನದಿಂದ ವಿಚ್ಛೇದನ ನೀಡಿದ ದಿನದವರೆಗೆ ಆಕೆ ವಾರ್ಷಿಕ ಕನಿಷ್ಠ ವೇತನದ ಆಧಾರದ ಮೇಲೆ ನೀಡಬೇಕು ಎಂದು ವಿಚ್ಛೇದನದ ಪರಿಹಾರವಾಗಿ ಲೆಕ್ಕಹಾಕಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ (NYP) ವರದಿ ಮಾಡಿದೆ .

ನ್ಯಾಯಾಧೀಶರಾದ ಲಾರಾ ರೂಯಿಜ್ ಅಲಮಿನೋಸ್ ಅವರು ತನ್ನ ಪರಿಯೊಂದಿಗೆ 25 ವರ್ಷಗಳ ಕಾಲ ವೈವಾಹಿಕ ಜೀವನ ನಡೆಸಿದ ಮಹಿಳೆ ಇವಾನಾ ಮೋರಲ್ ಅವರಿಗೆ ನೀಡಲಾಯಿತು. ದಂಪತಿಗಳು 2020 ರಲ್ಲಿ ವಿಚ್ಛೇದನ ಪಡೆದರು. ಪತ್ನಿಗೆ 527 ರೂ. (ಸ್ಪೇನ್‌ನ ಮೌಲ್ಯ) ಮತ್ತು ತನ್ನ 20 ಮತ್ತು 14 ವರ್ಷ ವಯಸ್ಸಿನ ಹೆಣ್ಣುಮಕ್ಕಳಿಗೆ 422 ರೂ. ಮತ್ತು 633 ರೂ. ಮಾಸಿಕ ಜೀವನಾಂಶವನ್ನು ಪಾವತಿಸಲು ವ್ಯಕ್ತಿಗೆ ನ್ಯಾಯಾಲಯವು ಆದೇಶಿಸಿದೆ .

ಈ ಬಗ್ಗೆ ಮಾತನಾಡಿದ ಮೋರಲ್ ವಿಚ್ಛೇದನ ಪಡೆದಾಗ ನನ್ನ ಮತ್ತು ಈ ಎರಡು ಹೆಣ್ಣುಮಕ್ಕಳಿಗೆ ಯಾವುದೇ ರೀತಿ ಪರಿಹಾರ ಸಿಕ್ಕಿಲ್ಲ, ನಮಗೆ ಯಾವುದೇ ಆಸ್ತಿ ಇಲ್ಲ ಎಂದು ಹೇಳಿದರು. ನಾನು ಅವರನ್ನು ಮದುವೆಯಾದ ನಂತರಬ ಮದುವೆ ನನ್ನ ಬಳಿ ಏನೂ ಉಳಿದಿಲ್ಲ, ತನ್ನ ಜೀವನದ ಸಮಯ, ಶಕ್ತಿ ಮತ್ತು ಪ್ರೀತಿ ಎಲ್ಲವನ್ನೂ ಅವರ ಕುಟುಂಬಕ್ಕಾಗಿ ಸಮರ್ಪಿಸಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral News: ಬಸ್ಸಿನಲ್ಲಿ ಗರ್ಭಿಣಿ, ವೃದ್ಧ, ದಿವ್ಯಾಂಗ, ಮಕ್ಕಳು ಯಾರಿಗೆ ಸೀಟು ಬೀಡಬೇಕು? IAS ಅಧಿಕಾರಿ ಪ್ರಶ್ನೆ ವೈರಲ್

ನನಗೆ ಅವರ ಮನೆಯಲ್ಲಿ ಕೆಲಸಕ್ಕೆ ಮಾತ್ರ ಇರಬೇಕಿತ್ತು. ಅವರ ಯಾವುದೇ ನೈತಿಕ ವಿವಾರದಲ್ಲಿ ನನಗೆ ಅವಕಾಶ ಇರಲಿಲ್ಲ, ಅದಂರೆ ಅವರ ವೈಯಕ್ತಿಕ ವ್ಯವಹಾರಗಳನ್ನು ನಾನು ನೋಡಿಕೊಳ್ಳವಂತಿರಲಿಲ್ಲ. ನಾನು ನನ್ನ ಪತಿಯ ಎಲ್ಲ ಕೆಲಸಕ್ಕೂ ಸಹಾಯ ಮಾಡುತ್ತಿದೆ. ಆದರೆ ಅವರ ಹಣಕಾಸಿನ ವ್ಯವಹಾರಗಳಿಗೆ ನಾನು ಪ್ರವೇಶ ಮಾಡುವಂತಿಲ್ಲ. ಎಲ್ಲವೂ ಅವನ ಹೆಸರಿನಲ್ಲಿತ್ತು ಎಂದು ಹೇಳಿದ್ದಾರೆ.

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us