Viral News: ತನ್ನ ಹೆಂಡತಿ ಆಸೆಯಂತೆ ತಿರುಗುವ ಮನೆ ಕಟ್ಟಿಸಿದ ವೃದ್ಧ! ಹೃದಯಸ್ಪರ್ಶಿ ಸ್ಟೋರಿ ಓದಿ

ತನ್ನ ಹೆಂಡತಿ ಆಸೆಪಟ್ಟಂತೆಯೇ ತಿರುಗುವ ಮನೆ ಕಟ್ಟಿಸಿದ್ದಾರೆ ಇಲ್ಲೋರ್ವರು. ನನ್ನ ಮಕ್ಕಳು ಕುಟುಂಬದ ಜವಾಬ್ದಾರಿ ಹೊತ್ತ ಬಳಿಕ ಮನೆ ಕಟ್ಟಿಸಲು ನನಗೆ ಸಮಯ ಸಿಕ್ಕಿತು ಎಂದು ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

Viral News: ತನ್ನ ಹೆಂಡತಿ ಆಸೆಯಂತೆ ತಿರುಗುವ ಮನೆ ಕಟ್ಟಿಸಿದ ವೃದ್ಧ! ಹೃದಯಸ್ಪರ್ಶಿ ಸ್ಟೋರಿ ಓದಿ
ತನ್ನ ಹೆಂಡತಿ ಆಸೆಯಂತೆ ತಿರುಗುವ ಮನೆ ಕಟ್ಟಿಸಿದ ವೃದ್ಧ!
Edited By:

Updated on: Oct 12, 2021 | 9:08 AM

ಸಾಮಾನ್ಯವಾಗಿ ಗಂಡ ಹೆಂಡತಿಯ ನಡುವಿನ ಪ್ರೀತಿ ವಾತ್ಸಲ್ಯ ಎಲ್ಲವನ್ನು ಮೀರಿದ್ದು. ಹೆಂಡತಿಗೆ ಸರ್ಪ್ರೈಸ್ ಕೊಡುವ ಗಂಡ, ಪತಿಯ ಆರೋಗ್ಯ, ಕಾಳಜಿಯ ಜತೆಗೆ ಸಂತೋಷದಿಂದ ಜೀವನ ನಡೆಸುವಂತೆ ನೋಡಿಕೊಳ್ಳುವ ಹೆಂಡತಿ. ಇಬ್ಬರ ದಾಂಪತ್ಯದ ಜೀವನ ಎಲ್ಲರೂ ಮೆಚ್ಚುವಂಥದ್ದು! ಹೀಗಿರುವಾಗ ತನ್ನ ಹೆಂಡತಿ ಆಸೆ ಪಟ್ಟಂತೆಯೇ ತಿರುಗುವ ಮನೆ ಕಟ್ಟಿಸಿದ್ದಾರೆ ಇಲ್ಲೋರ್ವರು.

72 ವರ್ಷದ ವೈದ್ಧರ ಹೆಸರು ವೋಜಿನ್ ಕುಸಿಕ್​. ವರದಿಯ ಪ್ರಕಾರ, ಮನೆಗೆ ಹಸಿರು ಬಣ್ಣ ಹಚ್ಚಲಾಗಿದೆ. ಹೆಂಡತಿ ಆಸೆ ಪಟ್ಟಂತೆಯೇ ಮನೆಯು ತಿರುಗುತ್ತದೆ. ನನ್ನ ಮಕ್ಕಳು ದೊಡ್ಡವರಾಗಿ ಕುಟುಂಬದ ಜವಾಬ್ದಾರಿ ಹೊತ್ತ ನಂತರದಲ್ಲಿ ನನ್ನ ಹೆಂಡತಿಯ ಆಸೆಯನ್ನು ತೀರಿಸಲು ನನಗೆ ಸಮಯ ಸಿಕ್ಕಿತು ಎಂದು ಕುಸಿಕ್ ಅವರು ಮಾತನಾಡಿದ್ದಾರೆ. ಈ ಕುರಿತಂತೆ ಇಂಡಿಯಾ ಡಾಟ್ ಕಾಮ್​ನಲ್ಲಿ ಉಲ್ಲೇಖಿಸಲಾಗಿದೆ.

ಕಾಲೇಜಿಗೆ ಹೋಗಲು ಅವಕಾಶಗಳಿಲ್ಲದ ಕಾರಣ ಅವರು ಎಲೆಕ್ಟ್ರಿಕ್ ಮೋಟಾರ್ ಮತ್ತು ಹಳೆಯ ವಾಹನ ಚಕ್ರಗಳನ್ನು ಬಳಸಿ ತಿರುಗುವ ಮನೆ ನಿರ್ಮಿಸಲು ಪ್ಲ್ಯಾನ್ ಮಾಡಿದರು. ಅದರಂತೆಯೇ ಇದೀಗ ಮನೆ ಸಿದ್ಧವಾಗಿದೆ. ಹೆಂಡತಿಯ ಆಸೆಯಂತೆಯೇ ಮನೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕುಸಿಕ್​ ಅವರು ಹೇಳಿದ್ದಾರೆ. ಈಗ ನಮ್ಮ ಮನೆ ತಿರುಗುತ್ತದೆ. ಆದ್ದರಿಂದ ಗೊತ್ತಿಲ್ಲದ ಜನರು ನಮ್ಮ ಮನೆಯನ್ನು ಪ್ರವೇಶಿಸಲು ಪ್ರಯತ್ನಿಸುತ್ತಿರುವಾಗ ಮನೆಯನ್ನು ತಿರುಗಿಸಬಹುದು ಎಂದು ಕುಸಿಕ್​ ತಮಾಷೆ ಮಾಡಿದ್ದಾರೆ.

ಇದನ್ನೂ ಓದಿ:

Viral News: ವರನ ಎದುರೇ ಮದುವೆಯ ಫೋಟೋಸ್ ಡಿಲೀಟ್ ಮಾಡಿದ ಫೋಟೋಗ್ರಾಫರ್; ಕಾರಣ ಕೇಳಿದ್ರೆ ಶಾಕ್ ಆಗ್ತೀರ

Viral News: ನಾಪತ್ತೆಯಾಗಿದ್ದು ತಾನೇ ಎಂದು ತಿಳಿಯದೆ ಕಾಡಿನಲ್ಲಿ ತನ್ನನ್ನೇ ಹುಡುಕಾಡಿದ ಕುಡುಕ!