Viral News: 56 ಬ್ಲೇಡ್‌ಗಳನ್ನು ನುಂಗಿದ ಯುವಕ, ದಂಗಾದ ವೈದ್ಯರು

| Updated By: Digi Tech Desk

Updated on: Mar 15, 2023 | 12:07 PM

ರಾಜಸ್ಥಾನದ 25 ವರ್ಷದ ಯುವಕನೊರ್ವ ರಕ್ತ ವಾಂತಿ ಮಾಡುತ್ತಿರುವುದನ್ನು ಕಂಡು ಆತನ ಮನೆಯವರು ಆವನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲವೇ ಗಂಟೆಗಳಲ್ಲಿ ಸ್ಕ್ಯಾನಿಂಗ್​​ ಮಾಡಲಾಗಿದೆ. ಸ್ಕ್ಯಾನಿಂಗ್ ರಿಪೋರ್ಟ್ ಕಂಡು ವೈದ್ಯರೇ ದಂಗಾಗಿ ಹೋಗಿದ್ದಾರೆ.

Viral News: 56 ಬ್ಲೇಡ್‌ಗಳನ್ನು ನುಂಗಿದ ಯುವಕ, ದಂಗಾದ ವೈದ್ಯರು
56 ಬ್ಲೇಡ್‌ಗಳನ್ನು ನುಂಗಿದ ಯುವಕ
Image Credit source: etvbharat
Follow us on

ರಾಜಸ್ಥಾನದ 25 ವರ್ಷದ ಯುವಕನೊರ್ವ ರಕ್ತ ವಾಂತಿ ಮಾಡುತ್ತಿರುವುದನ್ನು ಕಂಡು ಆತನ ಮನೆಯವರು ಆವನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲವೇ ಗಂಟೆಗಳಲ್ಲಿ ಸ್ಕ್ಯಾನಿಂಗ್​​ ಮಾಡಲಾಗಿದೆ. ಸ್ಕ್ಯಾನಿಂಗ್ ರಿಪೋರ್ಟ್ ಕಂಡು ವೈದ್ಯರೇ ದಂಗಾಗಿ ಹೋಗಿದ್ದಾರೆ. ಇತ ಒಂದಲ್ಲ, ಎರಡಲ್ಲ ಬರೋಬ್ಬರಿ 56 ಬ್ಲೇಡ್​​ಗಳನ್ನು ನುಂಗಿರುವುದು ತಿಳಿದುಬಂದಿದೆ. ಆದರೆ ಯಾಕೆ ಈತ ಬ್ಲೇಡ್​ಗಳನ್ನು ನುಂಗಿದ್ದಾನೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.

ಯಶಪಾಲ್ ಸಿಂಗ್ ಎಂಬ ಹೆಸರಿನ ಯುವಕ(25) ರಾಜಸ್ಥಾನದ ಸಂಚೋರ್ ಪಟ್ಟಣದ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟೆಂಟ್ ಆಗಿ ನಿರ್ವಹಿಸುತ್ತಿದ್ದ, ಜೊತೆಗೆ ತನ್ನ ನಾಲ್ವರು ಸ್ನೇಹಿತರೊಂದಿಗೆ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ. ವಿಪರೀತ ರಕ್ತ ವಾಂತಿ ಮಾಡುತ್ತಿರುವುದನ್ನು ಕಂಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚೋರ್‌ನಲ್ಲಿರುವ ಖಾಸಗಿ ಆಸ್ಪತ್ರೆಯ ಡಾ ನರಸಿ ರಾಮ್ ದೇವಸಿ ತಕ್ಷಣ ಸ್ಕ್ಯಾನಿಂಗ್ ಮಾಡಿಸಿದ್ದಾರೆ. ಸ್ಕ್ಯಾನಿಂಗ್ ರಿಪೋರ್ಟ್​ನಲ್ಲಿ ಆತನ ಹೊಟ್ಟೆಯೊಳಗೆ ಲೋಹದ ಅಂಶ ಪತ್ತೆಯಾಗಿದೆ. ಸಮಸ್ಯೆಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು, ವೈದ್ಯರು ಸೋನೋಗ್ರಫಿ ಮತ್ತು ಎಂಡೋಸ್ಕೋಪಿ ಪರೀಕ್ಷೆ ನಡೆಸಿದ್ದಾರೆ. ವ್ಯಕ್ತಿಯ ಹೊಟ್ಟೆಯಲ್ಲಿ ಲೋಹದ ಬ್ಲೇಡ್‌ಗಳಿವೆ ಎಂದು ಪರೀಕ್ಷೆಗಳು ಸ್ಪಷ್ಟವಾಗಿ ತಿಳಿದುಬಂದಿದೆ. ತಕ್ಷಣ ಶಸ್ತ್ರಚಿಕಿತ್ಸೆ ನಡೆಸಿ, ಹೊಟ್ಟೆಯಿಂದ 56 ಬ್ಲೇಡ್‌ಗಳನ್ನು ಹೊರತೆಗೆಯಲಾಗಿದೆ.

ಇದನ್ನೂ ಓದಿ: ಮದುವೆಯಾಗ್ತಿದ್ದಂತೆ ವಧು ತನ್ನ ಪತಿಗೆ ಕೋಲಿನಿಂದ ಹೊಡೆಯೋದಂತೆ, ಇದೆಂಥಾ ಸಂಪ್ರದಾಯ ಮಾರಾಯ್ರೆ

ಈತ ಪೇಪರ್​​ ಕವರ್​​ಗಳ ಸಮೇತ ಬ್ಲೆಡ್​​ ನುಂಗಿದ್ದು, ಪ್ರಾರಂಭದಲ್ಲಿ ಆತನಿಗೆ ಗೊತ್ತಾಗಲ್ಲಿಲ್ಲ. ಹೊಟ್ಟೆಯೊಳಗೆ ಪೇಪರ್ ಕರಗಿದಂತೆ, ಅದು ಹಾನಿಯನ್ನುಂಟುಮಾಡಲು ಪ್ರಾರಂಭಿಸಿದೆ. ನಂತರ ನೋವು, ವಾಕರಿಕೆ ಪ್ರಾರಂಭವಾಗಿದೆ. ಆತ ಬ್ಲೇಡ್‌ಗಳನ್ನು ತಿನ್ನುವ ಮೊದಲು ಎರಡು ಭಾಗಗಳಾಗಿ ಮುರಿದು ತಿಂದಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 12:04 pm, Wed, 15 March 23