ಏರಿಯಲ್​​​​ ಡಾನ್ಸ್ ಲೈವ್ ಪ್ರದರ್ಶನದ ವೇಳೆ ಪತ್ನಿ ಸಾವು, ಮೈ ಜುಮ್ಮೆನಿಸುವ ವಿಡಿಯೋ ಇಲ್ಲಿದೆ ನೋಡಿ

|

Updated on: Apr 19, 2023 | 5:16 PM

ಮೃತ ಮಹಿಳೆಯನ್ನು ಚೀನಾದ ಸನ್ ಎಂದು ಗುರುತಿಸಲಾಗಿದೆ. ಆಕೆಯ ಪತಿ ಜಾಂಗ್. ಚೀನಾದ ಸೆಂಟ್ರಲ್ ಅನ್ಹುಯಿ ಪ್ರಾಂತ್ಯದ ಸುಝೌ ನಗರದಲ್ಲಿ ಫ್ಲೈಯಿಂಗ್-ಟ್ರೆಪೆಜ್ ಪ್ರದರ್ಶನದ ವೇಳೆ ಈ ಭೀಕರ ಘಟನೆ ನಡೆದಿದೆ. ಇವರಿಬ್ಬರೂ ಅನೇಕ ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡಿದ್ದಾರೆ. ಅವರು ಸುರಕ್ಷತಾ ಬೆಲ್ಟ್ ಇಲ್ಲದೆ ಒಟ್ಟಿಗೆ ಹಲವಾರು ಸಾಹಸಗಳನ್ನು ಮಾಡಿದ್ದಾರೆ ಎಂದು ದಿ ಪೇಪರ್ ನ್ಯೂಸ್​​​​ ವೆಬ್‌ಸೈಟ್ ವರದಿ ಮಾಡಿದೆ.

ಏರಿಯಲ್​​​​ ಡಾನ್ಸ್ ಲೈವ್ ಪ್ರದರ್ಶನದ  ವೇಳೆ ಪತ್ನಿ ಸಾವು, ಮೈ ಜುಮ್ಮೆನಿಸುವ ವಿಡಿಯೋ ಇಲ್ಲಿದೆ ನೋಡಿ
ಸಾಂದರ್ಭಿಕ ಚಿತ್ರ
Image Credit source: Compagnie Remue-Ménage
Follow us on

ಹಲವು ವರ್ಷಗಳಿಂದ ಏರಿಯಲ್​​​​ ಡಾನ್ಸ್​​ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿದ್ದ ದಂಪತಿಗಳು ಇವರು . ಇವರ ಈ ನೃತ್ಯ ಪ್ರದರ್ಶಕ್ಕೆ ಬೆರಗಾಗದವರೇ ಇಲ್ಲ. ಯಾವುದೇ ಸುರಕ್ಷತಾ ಕ್ರಮ ಇಲ್ಲದೇ ಸಲಿಸಾಗಿ ಗಾಳಿಯಲ್ಲಿ ತೇಲಾಡುತ್ತಾ ನೃತ್ಯ ಪ್ರದರ್ಶನ ಮಾಡಬಲ್ಲ ತಾಕತ್ತು ಈ ದಂಪತಿಗೆ ಇದೆ. ಆದರೆ ವಾರಗಳ ಹಿಂದೆಯಷ್ಟೇ ಲೈವ್ ಪ್ರದರ್ಶನದ ಪತ್ನಿ ಕಾಲು ಜಾರಿ ಸುಮಾರು 30 ಅಡಿ ಎತ್ತರದಿಂದ ಬಿದ್ದು ಸಾವನ್ನಪ್ಪಿದ್ದಾರೆ. ಈ ವಿಡಿಯೋ ಇದೀಗಾ ಎಲ್ಲೆಡೆ ವೈರಲ್​ ಆಗುತ್ತಿದೆ. ಈ ವಿಡಿಯೋ ಒಂದು ಕ್ಷಣ ಮೈ ಜುಮ್ಮೆನಿಸುವಂತೂ ಖಂಡಿತಾ.

ಮೃತ ಮಹಿಳೆಯನ್ನು ಚೀನಾದ ಸನ್ ಎಂದು ಗುರುತಿಸಲಾಗಿದೆ. ಆಕೆಯ ಪತಿ ಜಾಂಗ್. ಚೀನಾದ ಸೆಂಟ್ರಲ್ ಅನ್ಹುಯಿ ಪ್ರಾಂತ್ಯದ ಸುಝೌ ನಗರದಲ್ಲಿ ಫ್ಲೈಯಿಂಗ್-ಟ್ರೆಪೆಜ್ ಪ್ರದರ್ಶನದ ವೇಳೆ ಈ ಭೀಕರ ಘಟನೆ ನಡೆದಿದೆ. ಇವರಿಬ್ಬರೂ ಅನೇಕ ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡಿದ್ದಾರೆ. ಅವರು ಸುರಕ್ಷತಾ ಬೆಲ್ಟ್ ಇಲ್ಲದೆ ಒಟ್ಟಿಗೆ ಹಲವಾರು ಸಾಹಸಗಳನ್ನು ಮಾಡಿದ್ದಾರೆ ಎಂದು ದಿ ಪೇಪರ್ ವರದಿಮಾಡಿದೆ.

ಇದನ್ನೂ ಓದಿ: ಒಳ್ಳೆಯ ‘ಕಿಸ್ಸರ್’ ಆಗಬೇಕೆಂಬ ಆಸೆಗೆ ಬಿದ್ದು ನಾಲಿಗೆ ಕತ್ತರಿಸಿಕೊಂಡ ಯುವತಿ

ಸಾಹಸದ ಸಮಯದಲ್ಲಿ ಪತಿ ತನ್ನ ಕಾಲುಗಳಿಂದ ಅವಳನ್ನು ಹಿಡಿಯಲು ವಿಫಲವಾದಾಗ ಆಕೆಯ 30 ಅಡಿ ಎತ್ತರದಿಂದ ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ದಾರಿ ಮಧ್ಯೆ ಕೊನೆಯುಸಿರೆಳೆದ್ದಿದ್ದಾರೆ. ಮೃತ ಮಹಿಳೆ ಇಬ್ಬರು ಮಕ್ಕಳನ್ನು ಅಗಲಿದ್ದಾರೆ ಎಂದು ದಿ ಪೇಪರ್ ನ್ಯೂಸ್​​​​ ವೆಬ್‌ಸೈಟ್ ವರದಿ ಮಾಡಿದೆ.

ಲೈವ್​​ ಪ್ರದರ್ಶನಕ್ಕೂ ಮುನ್ನ ಆಕೆಗೆ ಸುರಕ್ಷತಾ ಬೆಲ್ಟ್​​ ನೀಡಲಾಗಿತ್ತು. ಆದರೆ ಆಕೆ ನಿರಾಕರಿಸಿದ್ದಾಳೆ. ಇದಲ್ಲದೇ ದಂಪತಿಗಳ ನಡುವೆ ಜಗಳ ನಡೆದಿದೆ ಎಂಬ ಸುದ್ದಿಯೂ ವರದಿಯಾಗಿದೆ. ಯಾಂಗ್ಜಿ ಈವ್ನಿಂಗ್ ನ್ಯೂಸ್ ಪ್ರಕಾರ, ಪತಿ ತನ್ನ ಹೆಂಡತಿಯೊಂದಿಗೆ ಜಗಳವಾಡುವುದನ್ನು ನಿರಾಕರಿಸಿದ್ದಾನೆ. “ನಾವು ಯಾವಾಗಲೂ ಒಟ್ಟಿಗೆ ಸಂತೋಷದಿಂದ ಇದ್ದೇವೆ, ಯಾವುದೇ ಜಗಳ ಇರಲಿಲ್ಲ ಎಂದು ಹೇಳಿಕೊಂಡಿದ್ದಾನೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 5:16 pm, Wed, 19 April 23