AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಒಳ್ಳೆಯ ‘ಕಿಸ್ಸರ್’ ಆಗಬೇಕೆಂಬ ಆಸೆಗೆ ಬಿದ್ದು ನಾಲಿಗೆ ಕತ್ತರಿಸಿಕೊಂಡ ಯುವತಿ

ಪ್ರತಿಯೊಬ್ಬರು ತಮ್ಮ ದೇಹದ ಆಕಾರದಿಂದ ತೃಪ್ತರಾಗಿರುವುದಿಲ್ಲ, ಇದೊಂದು ಬದಲಾವಣೆ ಮಾಡಿಕೊಂಡರೆ ಮತ್ತಷ್ಟು ಚೆನ್ನಾಗಿ ಕಾಣಿಸಬಹುದು ಎನ್ನುವ ಹಂಬಲದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆ.

Viral News: ಒಳ್ಳೆಯ ‘ಕಿಸ್ಸರ್’ ಆಗಬೇಕೆಂಬ ಆಸೆಗೆ ಬಿದ್ದು ನಾಲಿಗೆ ಕತ್ತರಿಸಿಕೊಂಡ ಯುವತಿ
Xehli
ನಯನಾ ರಾಜೀವ್
|

Updated on: Apr 19, 2023 | 2:38 PM

Share

ಪ್ರತಿಯೊಬ್ಬರು ತಮ್ಮ ದೇಹದ ಆಕಾರದಿಂದ ತೃಪ್ತರಾಗಿರುವುದಿಲ್ಲ, ಇದೊಂದು ಬದಲಾವಣೆ ಮಾಡಿಕೊಂಡರೆ ಮತ್ತಷ್ಟು ಚೆನ್ನಾಗಿ ಕಾಣಿಸಬಹುದು ಎನ್ನುವ ಹಂಬಲದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆ. ಕೆಲವು ಶಸ್ತ್ರ ಚಿಕಿತ್ಸೆಗಳಿಂದ ಉತ್ತಮ ರೂಪ ಸಿಗಬಹುದು ಇನ್ನೂ ಕೆಲವು ಶಸ್ತ್ರಚಿಕಿತ್ಸೆಗಳು ಫೇಲ್ ಆಗಬಹುದು. ಇನ್ನೂ ಕೆಲವರು ತಾನು ಹೇಗಿದ್ದರೂ ಚೆಂದ ಎಂದು ತಮ್ಮನ್ನು ಆಸೆಪಡುತ್ತಾರೆ, ಇನ್ನೂ ಕೆಲವರಿಗೆ ತಮ್ಮ ದೇಹದ ಆಕಾರವನ್ನು ಬದಲಾಯಿಸುವ ಮನಸ್ಸಿದ್ದರೂ ಕುಟುಂಬದ ಒತ್ತಡ ಅಥವಾ ಹಣದ ಕೊರತೆಯಿಂದ ಇರುವ ಸೌಂದರ್ಯಕ್ಕೆ ತೃಪ್ತಿಪಟ್ಟುಕೊಳ್ಳುತ್ತಾರೆ.

ಹಾಗೆಯೇ ಯುವತಿಯೊಬ್ಬಳು ತಾನು ಉತ್ತಮ ಕಿಸ್ಸರ್ ಆಗಬೇಕೆನ್ನುವ ಹಂಬಲದಲ್ಲಿ ನಾಲಿಗೆಯನ್ನೇ ಕತ್ತರಿಸಿಕೊಂಡಿದ್ದಾಳೆ. ಪೋಷಕರು ಎಷ್ಟೇ ವಿರೋಧಿಸಿದರೂ ಆಕೆ ನಾಲಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾಳೆ. ನ್ಯೂಯಾರ್ಕ್ ಪೋಸ್ಟ್ ವೆಬ್‌ಸೈಟ್‌ನ ವರದಿಯ ಪ್ರಕಾರ, 22 ವರ್ಷದ ರೋಚೆಲ್ ಗ್ಯಾರೆಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ (Xehli G) ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ರೋಚೆಲ್​ಗೆ ಇನ್​​ಸ್ಟಾಗ್ರಾಂನಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ಫಾಲೋವರ್ಸ್​ಗಳಿದ್ದಾರೆ. ವರದಿಯ ಪ್ರಕಾರ, ರೋಚೆಲ್ ತನ್ನ ನಾಲಿಗೆಯ ಒಂದು ಸಣ್ಣ ಭಾಗವನ್ನು ಕತ್ತರಿಸಿಕೊಂಡಿದ್ದಾರೆ. ರೋಚೆಲ್ ಉತ್ತಮ ಕಿಸ್ಸರ್ ಆಗಲು ಬಯಸಿದ್ದರು, ಆದ್ದರಿಂದ ಅವಳು ತನ್ನ ನಾಲಿಗೆಯ ಭಾಗವನ್ನು ಕತ್ತರಿಸಿಕೊಂಡಿದ್ದಾರೆ.

ಮತ್ತಷ್ಟು ಓದಿ: Blind Snake: ಇದು ಎರೆಹುಳುವಲ್ಲ ಹಾವು, ಈ ಬ್ಲೈಂಡ್ ಸ್ನೇಕ್ ಎಷ್ಟು ಅಪಾಯಕಾರಿ?

ಅವರ ನಾಲಿಗೆಯ  ಫ್ರೆನ್ಯುಲಮ್, ಅಂದರೆ, ನಾಲಿಗೆ ಮತ್ತು ಬಾಯಿಯ ಕೆಳಭಾಗವನ್ನು ಜೋಡಿಸಲಾದ ಅಂಗಾಂಶವು ತುಂಬಾ ಚಿಕ್ಕದಾಗಿದೆ ಎಂದು ಅವರು ಹೇಳಿದರು. ಇದರಿಂದಾಗಿ ಅವರ ನಾಲಿಗೆ ಸಂಪೂರ್ಣವಾಗಿ ಹೊರಬರಲು ಸಾಧ್ಯವಾಗಲಿಲ್ಲ. ಅವರು ಈ ಭಾಗವನ್ನು ಕತ್ತರಿಸಿ ಬೇರ್ಪಡಿಸಿದ್ದಾರೆ.

ಈ ಹಿಂದೆ ಅವಳು ತನ್ನ ಸಂಗಾತಿಯನ್ನು ಚುಂಬಿಸುವಾಗ ತನ್ನ ನಾಲಿಗೆಯಿಂದಾಗಿ ಕೆಟ್ಟ ಅನುಭವವಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಆದರೆ ಅವರು ಈ ಶಸ್ತ್ರಚಿಕಿತ್ಸೆಯನ್ನು ಮಾಡಿದ ನಂತರ,  ಮೊದಲಿಗಿಂತ ಉತ್ತಮ ಕಿಸ್ಸರ್ ಆಗಿದ್ದೇನೆ ಎಂದು ಹೇಳಿದ್ದಾರೆ. ಕೆಲವು ವರ್ಷಗಳ ಹಿಂದೆ ಈ ಶಸ್ತ್ರಚಿಕಿತ್ಸೆ ಮಾಡುವಂತೆ ಅವರ ವೈದ್ಯರು ಸಲಹೆ ನೀಡಿದ್ದರು.

ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ