ಮಧ್ಯ ಪ್ರದೇಶದಲ್ಲಿ ಕನ್ಯಾದಾನದ ಬದಲಿಗೆ ಪಿಂಡದಾನ !; ಏನಿದು ವಿಚಿತ್ರ ವಿವಾಹ ಅಂತೀರಾ? ಇಲ್ಲಿದೆ ಮಾಹಿತಿ

| Updated By: Digi Tech Desk

Updated on: Jun 13, 2023 | 3:07 PM

22 ವರ್ಷದ ಅನಾಮಿಕಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಮದುವೆಯಾದ ಹಿನ್ನೆಲೆಯಲ್ಲಿ ಆಕೆಯ ಕುಟುಂಬ ಆಕೆಯ ಹೆಸರಿನಲ್ಲಿ ಪಿಂಡದಾನ ಮಾಡಿದೆ. ಈ ಘಟನೆ ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯಲ್ಲಿ ನಡೆದಿದೆ.

ಮಧ್ಯ ಪ್ರದೇಶದಲ್ಲಿ ಕನ್ಯಾದಾನದ ಬದಲಿಗೆ ಪಿಂಡದಾನ !; ಏನಿದು ವಿಚಿತ್ರ ವಿವಾಹ ಅಂತೀರಾ? ಇಲ್ಲಿದೆ ಮಾಹಿತಿ
ಮದುವೆ
Follow us on

ಅಯಾಝ್ ಎಂಬಾತನನ್ನು ಮದುವೆಯಾದ ತಮ್ಮ ಮಗಳು ಅನಾಮಿಕಾ, ಫಾತೀಮಾ ಎಂದು ತನ್ನ ಹೆಸರನ್ನು ಬದಲಾಯಿಸಿಕೊಂಡು ಮನೆತನದ ಗೌರವಕ್ಕೆ ಧಕ್ಕೆ ಮಾಡಿದ್ದಾಳೆ. ಹಾಗಾಗಿ ತಮ್ಮ ಮಗಳು ತಮ್ಮ ಪಾಲಿಗೆ ತೀರಿಹೋಗಿದ್ದಾಳೆ ಎಂದು ಘೋಷಿಸಲು ಆಕೆಯ ಕುಟುಂಬ ಹಿಂದೂ ಸಂಪ್ರದಾಯದಡಿ ಅಧಿಕೃತ ಕಾರ್ಯಕ್ರಮವನ್ನು ಆಯೋಜಿಸಿತ್ತು‌.

ಕನ್ಯಾದಾನದ ಕನಸು ಹೊಂದಿದ್ದ ನಾವು ಪಿಂಡದಾನ ಮಾಡಲು ಮನೆಯವರಿಗೆ ಒತ್ತಾಯಿಸಿದೆವು ಎಂದು ಆಕೆಯ ಸೋದರ ತಿಳಿಸಿದ್ದಾನೆ. ಜೊತೆಗೆ ತಮ್ಮ ಮಗಳು ಲವ್ ಜಿಹಾದ್ ಗೆ ಬಲಿಯಾಗಿ ನಮ್ಮ ಮಾನಹಾನಿ ಮಾಡಿದ್ದಾಳೆಂದು ಕುಟುಂಬಸ್ಥರು ಹೇಳಿದ್ದಾರೆ.

ಇದನ್ನೂ ಓದಿ: ಮರಳಶಿಲ್ಪದ ಧ್ವಂಸ ಕೃತ್ಯದಲ್ಲಿ ತೊಡಗಿದ್ದ ಹದಿಹರೆಯದ ಹುಡುಗಿಯರ ಬಂಧನ

ಹುಡುಗಿಯ ತಂದೆ ಛಾಪಿಸಿದ ಶೋಕ ಸಂದೇಶ ವೈರಲ್ ಆಗುತ್ತಿದೆ. ನಮ್ಮ ಮಗಳು ಏ.2 ರಂದು ಕೊನೆಯುಸಿರೆಳೆದಿದ್ದಾಳೆ. ಆಕೆ ಕುಪುತ್ರಿ, ಅವಳಿಗೆ ನರಕದಲ್ಲಿ ಸ್ಥಾನ ಸಿಗಲಿ ಎಂದು ಆಕೆಯ ತಂದೆ ಮತ್ತು ಕುಟುಂಬ ಸದಸ್ಯರು ಪ್ರಾರ್ಥಿಸಿದ್ದಾರೆ.

ಇದನ್ನೂ ಓದಿ: ಸ್ವಯಂವಿವಾಹಿತೆ ಕ್ಷಮಾ ಬಿಂದು ಮೊದಲ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ

ಜೂನ್ ನಲ್ಲಿ ಉಜ್ಮಾ ಫಾತಿಮಾ ಅಲಿಯಾಸ್ ಅನಾಮಿಕಾಳ ಮದುವೆಯ ಕರೆಯೋಲೆ ಅಯಾಝ್ ನೊಂದಿಗೆ ವೈರಲ್ ಆಗಿತ್ತು. ಆನಂತರ ಆಕೆಯ ತಾಯಿಯೇ ಇದನ್ನು ಲವ್ ಜಿಹಾದ್ ಎಂದು ಕರೆದು ತಮ್ಮ ಮಗಳನ್ನು ಮರಳಿಸುವಂತೆ ಪೊಲೀಸರಿಗೆ ಒತ್ತಾಯಿಸಿದ್ದರು. ಆದರೆ, ಮಧ್ಯಪ್ರದೇಶ ಪೊಲೀಸರು ತಾಯಿಯ ಆರೋಪವನ್ನು ತಳ್ಳಿಹಾಕಿದ್ದರು. ಅಲ್ಲದೇ ಇದು ಎರಡು ಕುಟುಂಬಗಳ ನಡುವಿನ ಒಮ್ಮತದ ಸಂಬಂಧ ಎಂದು ಹೇಳಿದ್ದರು

ಮತ್ತಷ್ಟು ವೈರಲ್​ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ

 

Published On - 3:01 pm, Tue, 13 June 23