51 ಟ್ರ್ಯಾಕ್ಟರ್​​ಗಳಲ್ಲಿ 51 ಕಿ.ಮೀ ಅದ್ದೂರಿ ಮದುವೆ ಮೆರವಣಿಗೆ; ವಿಡಿಯೋ ವೈರಲ್

|

Updated on: Jun 14, 2023 | 11:23 AM

ಮದುವೆ ಮೆರವಣಿಗೆಯು 51 ಟ್ರ್ಯಾಕ್ಟರ್‌ಗಳಲ್ಲಿ ಹೊರಟಿದ್ದು, ಅದರಲ್ಲಿ ಒಂದು ಟ್ರ್ಯಾಕ್ಟರ್‌ ವರನೇ ಓಡಿಸಿರುವುದು ಮತ್ತೊಂದು ವಿಶೇಷ. ಅದ್ದೂರಿ ಮದುವೆ ಮೆರವಣೆಗೆಯ ವಿಡಿಯೋ ಇದೀಗಾ ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್​​ ಆಗಿದೆ

51 ಟ್ರ್ಯಾಕ್ಟರ್​​ಗಳಲ್ಲಿ 51 ಕಿ.ಮೀ ಅದ್ದೂರಿ ಮದುವೆ ಮೆರವಣಿಗೆ; ವಿಡಿಯೋ ವೈರಲ್
51 ಟ್ರ್ಯಾಕ್ಟರ್​​ಗಳಲ್ಲಿ 51 ಕಿ.ಮೀ ಅದ್ದೂರಿ ಮದುವೆ ಮೆರವಣಿಗೆ
Image Credit source: NDTV
Follow us on

ರಾಜಸ್ಥಾನದ ಬಾರ್ಮರ್‌ನಲ್ಲಿ ನಡೆದ ವಿಶಿಷ್ಟ ಮದುವೆಯ ಮೆರವಣಿಗೆ ಎಲ್ಲರ ಕಣ್ಮನ ಸೆಳೆದಿದೆ. ಮದುವೆ ಮೆರವಣಿಗೆಯು 51 ಟ್ರ್ಯಾಕ್ಟರ್‌ಗಳಲ್ಲಿ ಹೊರಟಿದ್ದು, ಅದರಲ್ಲಿ ಒಂದು ಟ್ರ್ಯಾಕ್ಟರ್‌ ವರನೇ ಓಡಿಸಿರುವುದು ಮತ್ತೊಂದು ವಿಶೇಷ. ಗುಡಮಲಾನಿ ಗ್ರಾಮದವರಾದ ಪ್ರಕಾಶ್ ಚೌಧರಿ ಅವರು ರೋಲಿ ಗ್ರಾಮದ ಮಮತಾ ಎಂಬಾಕೆಯನ್ನು ವಿವಾಹವಾಗಿದ್ದಾರೆ. ಸೋಮವಾರ ಬೆಳಿಗ್ಗೆ, ಮೆರವಣಿಗೆಯು ವರನ ಮನೆಯಿಂದ 51 ಕಿಲೋಮೀಟರ್ ದೂರದಲ್ಲಿರುವ ರೋಲಿ ಗ್ರಾಮಕ್ಕೆ ಹೊರಟಿದ್ದು. 51 ಟ್ರ್ಯಾಕ್ಟರ್‌ಗಳಲ್ಲಿ 200ಕ್ಕೂ ಜನರು ಅದ್ದೂರಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. ಈ ಅದ್ದೂರಿ ಮದುವೆ ಮೆರವಣೆಗೆಯ ವಿಡಿಯೋ ಇದೀಗಾ ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್​​ ಆಗಿದೆ.

51 ಟ್ರ್ಯಾಕ್ಟರ್‌ಗಳ ಅದ್ದೂರಿ ಮೆರವಣೆಗೆಯ ವಿಡಿಯೋ ಇಲ್ಲಿದೆ ನೋಡಿ: 

ಇದನ್ನೂ ಓದಿ: 7 ವರ್ಷಗಳ ಹಿಂದೆ ಟ್ವಿಟರ್​​ನಲ್ಲಿ ಹಂಚಿಕೊಂಡ ಫೋಟೋದಲ್ಲಿದ್ದ ಬಾಲಕಿಯನ್ನು ಭೇಟಿಯಾದ ಆನಂದ್ ಮಹೀಂದ್ರಾ

ನಮ್ಮದು ಕೃಷಿ ಪ್ರಧಾನ ಕುಟುಂಬ. ನಾವೆಲ್ಲರೂ ಕೃಷಿಯನ್ನೇ ಅವಲಂಬಿಸಿ ಬದುಕುತ್ತಿದ್ದೇವೆ. ಕೇವಲ ಒಂದು ಟ್ರ್ಯಾಕ್ಟರ್‌ ಮದುವೆಯಲ್ಲಿ ಬಳಸಲು ನಿರ್ಧರಿಸಲಾಗಿತ್ತು. ಆದರೆ ಮದುವೆ ಇನ್ನಷ್ಟು ವಿಭಿನ್ನವಾಗಿರಲಿ ಎಂದು 51 ಟ್ರ್ಯಾಕ್ಟರ್‌ ಬಳಸಿದ್ದೇವೆ ಎಂದು ವರ ಪ್ರಕಾಶ್ ಚೌಧರಿ ಎಎನ್​​ಐ ಗೆ ತಿಳಿಸಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗೆ ಇಲ್ಲಿ ಕ್ಲಿಕ್​​ ಮಾಡಿ: