America: ಅಮೆರಿಕದ ಮಹಿಳೆಯೊಬ್ಬಳು ವಿಟಮಿನ್ ಗುಳಿಗೆ ಎಂದು ಗಂಡನ ಆ್ಯಪಲ್ ಏರ್ಪಾಡ್ (Apple Airpod) ಅನ್ನು ನುಂಗಿದ ಘಟನೆ ಇದೀಗ ವೈರಲ್ ಆಗುತ್ತಿದೆ. ತನ್ನ ಸ್ನೇಹಿತರೊಂದಿಗೆ ಬೆಳಗಿನ ವಿಹಾರಕ್ಕೆ ಹೋದಾಗ ಈ ಅಚಾತುರ್ಯ ಸಂಭವಿಸಿದೆ. ಅಮೆರಿಕದ 52 ವರ್ಷದ ಟಿಕ್ಟಾಕರ್ ರಿಯಾಲ್ಟರ್ ತನ್ನಾ ಬಾರ್ಕರ್ ಎಂಬ ಮಹಿಳೆ ತನ್ನ ಸ್ನೇಹಿತರೊಂದಿಗೆ ಹರಟುತ್ತ ವಾಕ್ ಮಾಡುತ್ತಿದ್ದಾಗ ಗುಳಿಗೆ ತೆಗೆದುಕೊಳ್ಳುವುದು ನೆನಪಾಗಿದೆ. ನೀರು ಕುಡಿಯುತ್ತ ಗುಳಿಗೆಯ ಬದಲಾಗಿ ಏರ್ಪಾಡ್ ನುಂಗಿಬಿಟ್ಟಿದ್ದಾಳೆ. ತಾನು ಗುಳಿಗೆಯ ಬದಲಾಗಿ ಏನನ್ನೋ ನುಂಗಿದ್ದೇನೆ ಎನ್ನವುದು ಆಕೆಗೆ ಅರಿವಾಗಲು ಬಹಳ ಹೊತ್ತು ಬೇಕಾಗಲಿಲ್ಲ!
ಇದನ್ನೂ ಓದಿ : Viral Video: ಲಂಡನ್; ಮಗಳ ಹೆಸರಿನಲ್ಲಿ 667 ಟ್ಯಾಟೂ ಹಾಕಿಸಿಕೊಂಡು ವಿಶ್ವದಾಖಲೆ ಮಾಡಿದ ಅಪ್ಪ
‘ವಾಕಿಂಗ್ ಮಧ್ಯೆ ನಾನು ಸ್ನೇಹಿತೆಯೊಂದಿಗೆ ಮಾತನಾಡುತ್ತಾ ನೀರು ಕುಡಿಯುತ್ತಾ ಗುಳಿಗೆಯ ಬದಲಾಗಿ ಏರ್ಪಾಡ್ ನುಂಗಿದೆ. ನಂತರ ಸ್ನೇಹಿತರನ್ನು ಬೀಳ್ಕೊಟ್ಟೆ. ನೋಡಿದರೆ ಕೈಯಲ್ಲಿ ಗುಳಿಗೆಗಳು ಹಾಗೇ ಇವೆ. ಆಗ ನಾನೇನು ನುಂಗಿದೆ ಎನ್ನುವುದು ಅರಿವಾಯಿತು. ಯಾಕೋ ಗುಳಿಗೆ ನಿಧಾನವಾಗಿ ಒಳಗಿಳಿಯುತ್ತಿದೆಯಲ್ಲ ಎನ್ನುವುದು ಅನುಭವಕ್ಕೆ ಬಂತು ಕೂಡ. ದೇವರೇ, ನನ್ನೊಳಗೆ ಇದೀಗ ಏರ್ಪಾಡ್ ಇದೆ. ಏನು ಮಾಡುವುದು?’ ಎಂದಿದ್ದಾರೆ ರಿಯಾಲ್ಟರ್.
ಇದನ್ನೂ ಓದಿ : Viral Video: ಲಂಡನ್; ಮಗಳ ಹೆಸರಿನಲ್ಲಿ 667 ಟ್ಯಾಟೂ ಹಾಕಿಸಿಕೊಂಡು ವಿಶ್ವದಾಖಲೆ ಮಾಡಿದ ಅಪ್ಪ
ಮನೆಗೆ ಬಂದು ಮುಜುಗರದಿಂದ ತನ್ನ ಪತಿಗೆ ಈ ಅಚಾತುರ್ಯದ ಬಗ್ಗೆ ಆಕೆ ವಿವರಿಸಿದಾಗ, ಇದನ್ನು ಯಾರಿಗೂ ಹೇಳಬೇಡ ಎಂದಿದ್ದಾನೆ. ಆದರೂ ಆಕೆ ತನ್ನ ಟಿಕ್ಟಾಕ್ ಫಾಲೋವರ್ಗಳೊಂದಿಗೆ ಈ ಬಗ್ಗೆ ಹಂಚಿಕೊಂಡಿದ್ದಾಳೆ. ಶರವೇಗದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಅಷ್ಟೇ ಅಲ್ಲ ಮಾಧ್ಯಮದವರು ಆಕೆಯನ್ನು ಸಂಪರ್ಕಿಸಲು ಶುರು ಮಾಡಿದ್ದಾರೆ.
ಇದನ್ನೂ ಓದಿ : Viral Video: ನಾನು ನಂದಿನಿ ಬೆಂಗಳೂರಿಗೆ ಬಂದೀನಿ; 5 ಮಿಲಿಯನ್ ಜನರನ್ನು ತಲುಪಿದ ‘ವಿಕಿಪೀಡಿಯಾ’ ರೀಲ್
ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆಗಳ ಮಹಾಪೂರ ಹರಿದು ಬಂದು ಆಕೆಯನ್ನು ಆತಂಕಕ್ಕೆ ತಳ್ಳಿದೆ. ಇದು ನಿಮಗೆ ಮರಳಿ ಸಿಕ್ಕಾಗ ಐಪೂಡ್ ಆಗಿರುತ್ತದೆ. ನೀವು ಈ ಏರ್ಪಾಡ್ ಅನ್ನು ನುಂಗುವುದನ್ನು ನಾನು ಕಲ್ಪಿಸಿಕೊಂಡೆ ಎಂದಿದ್ದಾರೆ ಒಬ್ಬರು. ಇಲ್ಲ ಅದು ಮಲವಿಸರ್ಜನೆಯಲ್ಲಿ ತಾನಾಗಿಯೇ ಹೊರಬರುತ್ತದೆ ಎಂದು ಅನೇಕರು ಹೇಳಿದ್ದಾರೆ ಅದು ಬ್ಯಾಟರಿಯನ್ನು ಹೊಂದಿದೆಯಾದ್ದರಿಂದ ಅಪಾಯ ಸಂಭವಿಸಬಹುದು ಎಂದಿದ್ದಾರೆ.
ಇದನ್ನೂ ಓದಿ : Viral Video: ‘ಮೂರು ವರ್ಷ ವ್ಯಾನ್ ಡ್ರೈವರ್ನಿಂದ ಲೈಂಗಿಕ ದೌರ್ಜನ್ಯ, ಹೇಳಿದ್ದಕ್ಕೆ ಪೋಷಕರು ನನ್ನನ್ನೇ ಬೈದರು’
ಕೊನೆಗೆ ವೈದ್ಯರ ಮಾರ್ಗದರ್ಶನಕ್ಕಾಗಿ ಗಂಡಹೆಂಡತಿ ತೆರಳಿದ್ದಾರೆ. ಏರ್ಪಾಡ್ ಮಲವಿಸರ್ಜನೆಯಲ್ಲಿ ತಾನಾಗಿಯೇ ಹೊರಬರುವುದು ಎಂದು ವೈದ್ಯರು ಹೇಳಿದ್ದಾರೆ. ಆ ಪ್ರಕಾರ ಮಲವಿಸರ್ಜನೆಯ ಮೂಲಕ ಏರ್ಪಾಡ್ ಹೊರಗೆ ಬಂದಿದೆ ಎಂದು ಈ ಪೋಸ್ಟ್ ಅನ್ನು ಸಂಪನ್ನಗೊಳಿಸಿದ್ದಾರೆ ಆಕೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ