ಹೌದು ಮಹಿಳೆಯೊಬ್ಬಳು ತನ್ನನ್ನು ನೋಡಿಕೊಳ್ಳಲು ಕೆಲಸದಾಕೆಯನ್ನು ಹುಡುಕುತ್ತಿದ್ದಾಳೆ. ಆಕೆಯ ಊಟೋಪಚಾರ ಹಾಗೂ ಮನೆಕೆಲಸ ಮಾಡಲು ದಾದಿಯನ್ನು ಹುಡುಕುತ್ತಿದ್ದಾಳೆ. ಜೊತೆಗೆ ನಿರೀಕ್ಷೆಗಿಂತೂ ಹೆಚ್ಚು ಸಂಬಳ, ಊಟ, ವಸತಿ ಉಚಿತ. ಆದರೂ ಕೂಡ ಆಕೆಗೆ ಕೆಲಸಗಾರರು ಸಿಗುತ್ತಿಲ್ಲ. ಇದಕ್ಕೆ ಕಾರಣ ಏನು ಗೊತ್ತಾ? ಆಕೆ ನೀಡಿರುವ ವಿಚಿತ್ರ ಷರತ್ತುಗಳು. ಇತ್ತೀಚಿನ ದಿನಗಳಲ್ಲಿ ಕೈತುಂಬ ಸಂಬಳ ಸಿಗುವ ಒಂದೊಳ್ಳೆ ಕೆಲಸ ಸಿಗಲಿ ಎಂದು ದೇವರಲ್ಲಿ ಎಲ್ಲರೂ ಪ್ರಾರ್ಥಿಸುತ್ತಾರೆ. ತಮ್ಮ ನಿರೀಕ್ಷೆಗೂ ಮೀರಿದ ವೇತನ, ಊಟ, ವಸತಿ ಎಲ್ಲವೂ ಫ್ರೀ ಎಂದ ಕೂಡಲೇ ಪ್ರಪಂಚದ ಯಾವುದೇ ಮೂಲೆಗೂ ಕೆಲಸಕ್ಕೆ ಹೋಗಲು ಸಿದ್ಧರಿರುತ್ತಾರೆ. ಆದರೆ ಚೀನಾದ ಶಾಂಘೈ ಮೂಲದ ಮಹಿಳೆಯೊಬ್ಬಳು ತನ್ನ ಮನೆ ಕೆಲಸ ಹಾಗೂ ತನ್ನ ಊಟೋಪಚಾರವನ್ನು ನೋಡಿಕೊಳ್ಳಲು ಮನೆಕೆಲಸದಾಕೆಯನ್ನು ಹುಡುಕುತ್ತಿದ್ದು, ಮನೆಕೆಲಸದಾಕೆಗೆ ಬರೋಬ್ಬರೀ 2 ಕೋಟಿಯ ವೇತನದ ಪ್ಯಾಕೇಜ್ ನೀಡುತ್ತಿದ್ದಾಳೆ. ಆದರೂ ಕೂಡ ಕೆಲಸಕ್ಕೆ ಜನ ಸಿಗುತ್ತಿಲ್ಲ. ಇದೀಗಾ ಈ ಹುದ್ದೆಗಾಗಿ ಜಾಹೀರಾತು ನೀಡಿದ್ದು, ಜಾಹೀರಾತಿನಲ್ಲಿ ನಮೂದಿಸಲಾದ ವಿಚಿತ್ರ ಷರತ್ತುಗಳು ಎಲ್ಲೆಡೆ ಭಾರೀ ವೈರಲ್ ಆಗಿದೆ.
ಯಾಜಮಾನಿಯ ಆದೇಶದಲ್ಲಿ ಆಕೆಗೆ ಬೇಕಾಗುವ ಆಹಾರವನ್ನು ತಯಾರಿಸಿ ಬಡಿಸುವುದು. ಜೊತೆಗೆ ಮನೆಯನ್ನು ಸ್ವಚ್ಛಗೊಳಿಸುವುದು ಮತ್ತು ಯಾಜಮಾನಿ ಹೇಳಿದ ಕೆಲಸಗಳನ್ನು ಮಾಡುವುದು. ಇಷ್ಟು ಕೆಲಸ ಮಾಡಿದರೆ ವರ್ಷಕ್ಕೆ 1.97 ಕೋಟಿ ಸಂಬಳ. ಅಂದರೆ ತಿಂಗಳಿಗೆ 16 ಲಕ್ಷ ರೂಪಾಯಿ.
ಇದನ್ನೂ ಓದಿ: ವಿಡಿಯೋ ನೋಡಿ, ಮಜಾ ಮಾಡಿ; 10 ಗಂಟೆಗೆ 82,000 ರೂ ಗಳಿಸಿ; ಈ ಆಫರ್ ಸುಮ್ಮನೆ ಅಲ್ಲ, ಕಂಡೀಷನ್ಸ್ ಅಪ್ಲೈಡ್
ಇವಿಷ್ಟು ಷರತ್ತುಗಳನ್ನು ಜಾಹೀರಾತಿನಲ್ಲಿ ನಮೂದಿಸಲಾಗಿದ್ದು, ಈ ಜಾಹೀರಾತು ಎಲ್ಲೆಡೆ ಭಾರೀ ವೈರಲ್ ಆಗಿದೆ. ಜೊತೆಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 2:34 pm, Sun, 21 May 23