ಪ್ರತೀ ಮಹಿಳಾ ಉದ್ಯೋಗಿಗಳಿಗೆ ಅವರ ಗರ್ಭಾವಸ್ಥೆಯ 9 ತಿಂಗಳು ಕಾಲ ಕಚೇರಿಯಲ್ಲಿ ಕೆಲಸ ಮಾಡಿ,ಬಳಿಕ 6 ತಿಂಗಳ ಕಾಲ ಹೆರಿಗೆ ರಜೆ (Maternity Leave) ಕೊಡಲಾಗುತ್ತದೆ. ಈ 6 ತಿಂಗಳ ರಜೆಯಲ್ಲಿ ಕೆಲಸದ ಯಾವುದೇ ಒತ್ತಡವಿಲ್ಲದೇ ಮಗುವಿನೊಂದಿಗೆ ಸಮಯ ಕಳೆಯಲು ರಜೆ ನೀಡಲಾಗುತ್ತದೆ. ಆದರೆ ಇಲ್ಲೊಬ್ಬಳು ಮಹಿಳೆ ತನ್ನ ಗರ್ಭಿಣಿ ಸಹೋದ್ಯೋಗಿ ಹೆರಿಗೆ ರಜೆ ತೆಗೆದುಕೊಂಡರೆ ತನಗೆ ಕೆಲಸ ಹೆಚ್ಚಾಗುತ್ತೆ ಎಂಬ ಕಾರಣಕ್ಕೆ ಆಕೆ ಕುಡಿಯುವ ನೀರಿಗೆ ವಿಷ ಹಾಕಿದ್ದಾಳೆ. ಘಟನೆಗೆ ಸಂಬಂಧಿಸಿದ ದೃಶ್ಯಗಳು ಕಚೇರಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ , ಚೀನಾದ ಮಧ್ಯ ಹುಬೈ ಪ್ರಾಂತ್ಯದ ಸರ್ಕಾರಿ-ಸಂಯೋಜಿತ ಸಂಸ್ಥೆಯೊಂದರಲ್ಲಿ ಮಹಿಳಾ ಉದ್ಯೋಗಿಯೊಬ್ಬರು ತನ್ನ ಗರ್ಭಿಣಿ ಸಹೋದ್ಯೋಗಿಯ ಕುಡಿಯುವ ನೀರಿಗೆ ಪುಡಿಯಂತಹ ಪದಾರ್ಥವನ್ನು ಬೆರೆಸುತ್ತಿರುವುದು ಕಚೇರಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: ಹುಟ್ಟು ಹಬ್ಬದಂದು ಕೇಕ್ ತಿಂದ ಕೆಲ ಹೊತ್ತಿನಲ್ಲೇ ಬಾಲಕಿ ಸಾವು; ಕುಟುಂಬಸ್ಥರು ಅಸ್ವಸ್ಥ
ನೀರು ಕುಡಿದು ವಿಚಿತ್ರ ರುಚಿಯನ್ನು ಗಮನಿಸಿದ ಗರ್ಭಿಣಿ ಉದ್ಯೋಗಿ ಪ್ರಾರಂಭದಲ್ಲಿ ಕಚೇರಿಯ ನೀರಿನ ಪೂರೈಕೆಯನ್ನು ಅನುಮಾನಿಸಿ, ದೂರು ನೀಡಿದ್ದಾಳೆ. ಬಳಿಕ ತನ್ನ ನೀರಿನ ಬಾಟಲಿಯ ನೀರಿನ ರುಚಿ ವಿಚಿತ್ರವಾಗಿದೆ ಎಂದು ಆಕೆಗೆ ತಿಳಿದಿದ್ದು, ಅನುಮಾನವನ್ನು ಪರಿಹರಿಸಲು ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಕ್ಷಿಸಿದ್ದಾಳೆ. ಈ ವೇಳೆ ತನ್ನ ಸಹೋದ್ಯೋಗಿಯೇ ಕುಡಿಯುವ ನೀರಿಗೆ ವಿಷ ಹಾಕಿರುವುದು ಸಿಸಿಟಿವಿಯಲ್ಲಿ ಕಂಡು ಶಾಕ್ ಆಗಿದ್ದಾಳೆ.
ಘಟನೆಗೆ ಸಂಬಂಧಿಸಿದಂತೆ ಕೇಸು ದಾಖಲಾಗಿದ್ದು,ಗರ್ಭಿಣಿ ಸಹೋದ್ಯೋಗಿ ಹೆರಿಗೆ ರಜೆ ತೆಗೆದುಕೊಂಡರೆ ತನಗೆ ಕೆಲಸದ ಹೊರೆ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಈ ರೀತಿಯ ಕೆಲಸ ಮಾಡಿರುವುದಾಗಿ ಆರೋಪಿ ಮಹಿಳೆ ಹೇಳಿಕೊಂಡಿರುವುದು ಪೊಲೀಸ್ ತನಿಖೆಯ ವೇಳೆ ತಿಳಿದುಬಂದಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ