Viral Video: ಬೋರ್ವೆಲ್ ಕೊರೆಸುವಾಗ ಕಾರಂಜಿಯಂತೆ ಚಿಮ್ಮಿದ ನೀರು; ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ರೈತ
ಈ ಸುಡು ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಒಂದೆಡೆಯಾದರೆ, ಮತ್ತೊಂದೆಡೆ ಕೃಷಿ ಚಟುವಟಿಕೆಗಳಿಗೆ ನೀರಿಲ್ಲದೆ ರೈತರು ಕಂಗಾಲಾಗಿದ್ದಾರೆ. ಹೀಗೆ ನೀರಿನ ಸಮಸ್ಯೆಯನ್ನು ಪೂರೈಸಲು ಅದೆಷ್ಟೋ ರೈತರು ಕೊಳವೆ ಬಾವಿಗಳ ಮೊರೆ ಹೋಗಿದ್ದಾರೆ. ಆದರೆ ಇಂದು ಬೋರ್ವೆಲ್ ಕೊರೆದರೂ ಒಂದು ಹನಿ ನೀರು ಸಿಗುತ್ತಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಇಲ್ಲೊಬ್ರು ರೈತ ತಮ್ಮ ಜಮೀನಿನಲ್ಲಿ ಬೋರ್ ವೆಲ್ ಕೊರೆಸಿದಾಗ ಬಾನೆತ್ತರಕ್ಕೆ ನೀರು ಚಿಮ್ಮಿದ್ದು, ನೀರು ಕಂಡ ಖುಷಿಯಲ್ಲಿ ರೈತ ಕುಣಿದು ಕುಪ್ಪಳಿಸಿದ್ದಾರೆ. ಈ ಹೃದಯಸ್ಪರ್ಷಿ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ತೀವ್ರ ಬಿಸಿಲಿನ ತಾಪದ ಕಾರಣ ನೀರಿನ ಕೊರತೆ ತೀವ್ರವಾಗುತ್ತಿದೆ. ಈ ಸುಡು ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಒಂದದೆಡೆಯಾದರೆ, ಇನ್ನೊಂದೆಡೆ ಕೃಷಿ ಕಾರ್ಯಕ್ಕೆ ನೀರು ಸಿಗುತ್ತಿಲ್ಲ ಎಂದು ರೈತರು ಕಂಗಾಲಾಗಿದ್ದಾರೆ. ಹೀಗೆ ನೀರಿನ ಸಮಸ್ಯೆಯನ್ನು ನೀಗಿಸಲು ರೈತರು ಕೊಳವೆ ಬಾವಿಗಳ ಮೊರ ಹೋಗುತ್ತಿದ್ದಾರೆ. ಅದೆಷ್ಟೋ ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ನೀರಿನ ಬದಲು ಕೇವಲ ಕಲ್ಲು ಪುಡಿ ಸಿಗುತ್ತಿದೆ. ಇನ್ನೂ ಹೊಸ ಬೋರ್ವೆಲ್ ಕೊರೆಸಿದರೂ ಒಂದು ಹನಿ ನೀರು ಲಭಿಸುತ್ತಿಲ್ಲ. ಆದರೆ ಇಲ್ಲೊಬ್ರು ರೈತ ಕೊರೆಸಿದ ಕೊಳವೆ ಬಾವಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಲಭಿಸಿದ್ದು, ಬೋರ್ ವೆಲ್ ಕೊರೆಯುವಾಗ ಬಾನೆತ್ತರಕ್ಕೆ ನೀರು ಚಿಮ್ಮಿದೆ. ನೀರು ಕಂಡ ಖುಷಿಯಲ್ಲಿ ಆ ರೈತ ಕುಣಿದು ಕುಪ್ಪಲಿಸಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಡಾ. ಉದಯ್ ಕುಮಾರ್ ಜಿ.ಎಸ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, “ನೀರಿನ ಬೆಲೆ ರೈತನಿಗೆ ಮಾತ್ರ ಗೊತ್ತಾಗುತ್ತೆ, ನೀರು ಸಿಕ್ಕಾಗ ಆ ರೈತನಿಗೆ ಆದಂತಹ ಸಂತೋಷವನ್ನು ವರ್ಣಿಸಲು ಪದಗಳೇ ಸಾಲದು ಆದರೆ ಇಂದು ಎಲ್ಲೆಡೆ ಜನರಿಗೆ ನೀರಿನ ಬೆಲೆ ತಿಳಿಯುತ್ತಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ಡಾ. ಉದಯ್ ಕುಮಾರ್ ಜಿ.ಎಸ್ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ
ವೈರಲ್ ವಿಡಿಯೋದಲ್ಲಿ ರೈತರೊಬ್ಬರು ಕೃಷಿ ಕಾರ್ಯಕ್ಕೆ ನೀರಿನ ಕೊರತೆ ಎದುರಾದಾಗ, ಬರದ ನಡುವೆಯೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಕೃಷಿ ಕಾರ್ಯವನ್ನು ಮುಂದುವರಿಸಬೇಕಲ್ವಾ ಎನ್ನುತ್ತಾ ದೇವರ ಮೇಲೆ ಭಾರ ಹಾಕಿ ತಮ್ಮ ಜಮೀನಿನಲ್ಲಿ ಕೊಳವೆ ಬಾವಿಯನ್ನು ಕೊರೆಸುತ್ತಾರೆ. ತಮ್ಮ ಇಚ್ಛೆಯಂತೆ ಬೋರ್ ವೆಲ್ ಕೊರೆಯುವಾಗ ಸಾಕಷ್ಟು ಪ್ರಮಾಣದಲ್ಲಿ ನೀರು ಲಭಿಸಿದೆ. ಅಷ್ಟೇ ಅಲ್ಲದೆ ಕೊಳವೆಬಾವಿ ಕೊರೆಯುವಾಗ ಕಾರಂಜಿಯಂತೆ ಬಾನೆತ್ತರಕ್ಕೆ ನೀರು ಚಿಮ್ಮಿದೆ. ಇದನ್ನು ಕಂಡ ಆ ರೈತ ಖುಷಿಯಿಂದ ಕುಣಿದು ಕುಪ್ಪಳಿಸುವಂತ ಸುಂದರ ದೃಶ್ಯವನ್ನು ಕಾಣಬಹುದು.
ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1.6 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನೀರಿನ ಬೆಲೆ ಕೇವಲ ರೈತನಿಗ ಮಾತ್ರ ಗೊತ್ತುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ಸಂತೋಷ ಅವರಿಗೆ ಕೋಟಿ ಕೊಟ್ಟರೂ ಬಾರದುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಹೃದಯಸ್ಪರ್ಷಿ ವಿಡಿಯೋಗೆ ಭಾರಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ.