Viral News: ಹೆರಿಗೆ ರಜೆ ತಗೊಂಡ್ರೆ ತನಗೆ ಕೆಲಸದ ಹೊರೆ; ಗರ್ಭಿಣಿ ಸಹೋದ್ಯೋಗಿಗೆ ವಿಷ ಹಾಕಿದ ಮಹಿಳೆ

ಗರ್ಭಿಣಿ ಸಹೋದ್ಯೋಗಿ ಹೆರಿಗೆ ರಜೆ ತೆಗೆದುಕೊಂಡರೆ ತನಗೆ ಕೆಲಸ ಹೆಚ್ಚಾಗುತ್ತೆ ಎಂಬ ಕಾರಣಕ್ಕೆ ಮಹಿಳೆಯೊಬ್ಬಳು ತನ್ನ ಗರ್ಭಿಣಿ ಸಹೋದ್ಯೋಗಿ ಕುಡಿಯುವ ನೀರಿಗೆ ವಿಷ ಹಾಕಿದ್ದಾಳೆ. ಕುಡಿಯುವ ನೀರಿಗೆ ಪುಡಿಯಂತಹ ಪದಾರ್ಥವನ್ನು ಬೆರೆಸುತ್ತಿರುವುದು ಕಚೇರಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Viral News: ಹೆರಿಗೆ ರಜೆ ತಗೊಂಡ್ರೆ ತನಗೆ ಕೆಲಸದ ಹೊರೆ; ಗರ್ಭಿಣಿ ಸಹೋದ್ಯೋಗಿಗೆ ವಿಷ ಹಾಕಿದ ಮಹಿಳೆ
ಗರ್ಭಿಣಿ ಸಹೋದ್ಯೋಗಿಗೆ ವಿಷ ಹಾಕಿದ ಮಹಿಳೆ( ಸಾಂದರ್ಭಿಕ ಚಿತ್ರ)Image Credit source: Pinterest
Follow us
|

Updated on: Apr 02, 2024 | 10:47 AM

ಪ್ರತೀ ಮಹಿಳಾ ಉದ್ಯೋಗಿಗಳಿಗೆ ಅವರ ಗರ್ಭಾವಸ್ಥೆಯ 9 ತಿಂಗಳು ಕಾಲ ಕಚೇರಿಯಲ್ಲಿ ಕೆಲಸ ಮಾಡಿ,ಬಳಿಕ 6 ತಿಂಗಳ ಕಾಲ ಹೆರಿಗೆ ರಜೆ (Maternity Leave) ಕೊಡಲಾಗುತ್ತದೆ. ಈ 6 ತಿಂಗಳ ರಜೆಯಲ್ಲಿ ಕೆಲಸದ ಯಾವುದೇ ಒತ್ತಡವಿಲ್ಲದೇ ಮಗುವಿನೊಂದಿಗೆ ಸಮಯ ಕಳೆಯಲು ರಜೆ ನೀಡಲಾಗುತ್ತದೆ. ಆದರೆ ಇಲ್ಲೊಬ್ಬಳು ಮಹಿಳೆ ತನ್ನ ಗರ್ಭಿಣಿ ಸಹೋದ್ಯೋಗಿ ಹೆರಿಗೆ ರಜೆ ತೆಗೆದುಕೊಂಡರೆ ತನಗೆ ಕೆಲಸ ಹೆಚ್ಚಾಗುತ್ತೆ ಎಂಬ ಕಾರಣಕ್ಕೆ ಆಕೆ ಕುಡಿಯುವ ನೀರಿಗೆ ವಿಷ ಹಾಕಿದ್ದಾಳೆ. ಘಟನೆಗೆ ಸಂಬಂಧಿಸಿದ ದೃಶ್ಯಗಳು ಕಚೇರಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ , ಚೀನಾದ ಮಧ್ಯ ಹುಬೈ ಪ್ರಾಂತ್ಯದ ಸರ್ಕಾರಿ-ಸಂಯೋಜಿತ ಸಂಸ್ಥೆಯೊಂದರಲ್ಲಿ ಮಹಿಳಾ ಉದ್ಯೋಗಿಯೊಬ್ಬರು ತನ್ನ ಗರ್ಭಿಣಿ ಸಹೋದ್ಯೋಗಿಯ ಕುಡಿಯುವ ನೀರಿಗೆ ಪುಡಿಯಂತಹ ಪದಾರ್ಥವನ್ನು ಬೆರೆಸುತ್ತಿರುವುದು ಕಚೇರಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಹುಟ್ಟು ಹಬ್ಬದಂದು ಕೇಕ್​ ತಿಂದ ಕೆಲ ಹೊತ್ತಿನಲ್ಲೇ ಬಾಲಕಿ ಸಾವು; ಕುಟುಂಬಸ್ಥರು ಅಸ್ವಸ್ಥ

ನೀರು ಕುಡಿದು ವಿಚಿತ್ರ ರುಚಿಯನ್ನು ಗಮನಿಸಿದ ಗರ್ಭಿಣಿ ಉದ್ಯೋಗಿ ಪ್ರಾರಂಭದಲ್ಲಿ ಕಚೇರಿಯ ನೀರಿನ ಪೂರೈಕೆಯನ್ನು ಅನುಮಾನಿಸಿ, ದೂರು ನೀಡಿದ್ದಾಳೆ. ಬಳಿಕ ತನ್ನ ನೀರಿನ ಬಾಟಲಿಯ ನೀರಿನ ರುಚಿ ವಿಚಿತ್ರವಾಗಿದೆ ಎಂದು ಆಕೆಗೆ ತಿಳಿದಿದ್ದು, ಅನುಮಾನವನ್ನು ಪರಿಹರಿಸಲು ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಕ್ಷಿಸಿದ್ದಾಳೆ. ಈ ವೇಳೆ ತನ್ನ ಸಹೋದ್ಯೋಗಿಯೇ ಕುಡಿಯುವ ನೀರಿಗೆ ವಿಷ ಹಾಕಿರುವುದು ಸಿಸಿಟಿವಿಯಲ್ಲಿ ಕಂಡು ಶಾಕ್​​ ಆಗಿದ್ದಾಳೆ.

ಘಟನೆಗೆ ಸಂಬಂಧಿಸಿದಂತೆ ಕೇಸು ದಾಖಲಾಗಿದ್ದು,ಗರ್ಭಿಣಿ ಸಹೋದ್ಯೋಗಿ ಹೆರಿಗೆ ರಜೆ ತೆಗೆದುಕೊಂಡರೆ ತನಗೆ ಕೆಲಸದ ಹೊರೆ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಈ ರೀತಿಯ ಕೆಲಸ ಮಾಡಿರುವುದಾಗಿ ಆರೋಪಿ ಮಹಿಳೆ ಹೇಳಿಕೊಂಡಿರುವುದು ಪೊಲೀಸ್​ ತನಿಖೆಯ ವೇಳೆ ತಿಳಿದುಬಂದಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ