Viral News: 26 ವರ್ಷ ಮನೆಗೆಲಸ ಮಾಡಿದ ಪತ್ನಿಗೆ 79 ಲಕ್ಷ ರೂ. ನೀಡಿದ ಪತಿ

|

Updated on: Mar 19, 2024 | 10:54 AM

26 ವರ್ಷಗಳಿಂದ ಗೃಹಿಣಿಯಾಗಿ ಮಾಡಿದ ಮನೆಗೆಲಸಕ್ಕೆ ಪತಿ ತನಗೆ ಪರಿಹಾರ ನೀಡುವಂತೆ ಪತ್ನಿ ಕೋರ್ಟ್​​​​ ಮೊರೆ ಹೋಗಿದ್ದಾಳೆ. ಅಂತಿಮವಾಗಿ ನ್ಯಾಯಾಲಯವು 26 ವರ್ಷಗಳಿಂದ ಗೃಹಿಣಿಯಾಗಿ ಮಾಡಿದ ಮನೆಗೆಲಸಕ್ಕೆ ರೂ.79 ಲಕ್ಷ 48 ಸಾವಿರ ಪರಿಹಾರ ನೀಡುವಂತೆ ಪತಿಗೆ ಆದೇಶಿಸಿದೆ.

Viral News: 26 ವರ್ಷ ಮನೆಗೆಲಸ ಮಾಡಿದ ಪತ್ನಿಗೆ 79 ಲಕ್ಷ ರೂ. ನೀಡಿದ ಪತಿ
26 ವರ್ಷ ಮನೆಗೆಲಸ ಮಾಡಿದ ಪತ್ನಿಗೆ 79 ಲಕ್ಷ ರೂ. ನೀಡಿದ ಪತಿ
Image Credit source: Pinterest
Follow us on

ಸ್ಪೇನ್: ಮದುವೆಯಾದ ನಂತರ, ಪ್ರತೀ ಮಹಿಳೆ ತವರು ಮನೆ ಮರೆತು, ತನ್ನ ಜೊತೆಗಾರನ ಮನೆಗೆ ಬರುವುದು, ಬಾಳುವುದು ಆಕೆಯ ಜೀವನದ ಪುಸ್ತಕದ ಎರಡನೇ ಅಧ್ಯಾಯ. ಅಡುಗೆ ಮಾಡುವುದು, ಮಕ್ಕಳ ಪಾಲನೆ ಪೋಷಣೆ ಮಾಡುವುದು ಒಟ್ಟಾರೆ ಮನೆಯ ಜವಾಬ್ದಾರಿ ಹೊತ್ತಿರುತ್ತಾಳೆ. ಆದರೆ ಈ ಎಲ್ಲಾ ಜವಾಬ್ದಾರಿಗಳನ್ನು ಖುಷಿಯಿಂದಲೇ ಮಾಡುತ್ತಾಳೆ ವಿನಃ ಸಂಬಳಕ್ಕಾಗಿ ಅಲ್ಲ. ಆದರೆ ಸ್ಪೇನ್ ನ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿ ಮಹಿಳೆಯೊಬ್ಬಳು ತಾನು 26 ವರ್ಷಗಳಿಂದ ಗೃಹಿಣಿಯಾಗಿ ಮಾಡಿದ ಮನೆಗೆಲಸಕ್ಕೆ ಪತಿ ತನಗೆ ಪರಿಹಾರ ನೀಡುವಂತೆ ಕೋರ್ಟ್​​​​ ಮೊರೆ ಹೋಗಿದ್ದಾಳೆ. ಅಂತಿಮವಾಗಿ ನ್ಯಾಯಾಲಯವು 26 ವರ್ಷಗಳಿಂದ ಗೃಹಿಣಿಯಾಗಿ ಮಾಡಿದ ಮನೆಗೆಲಸಕ್ಕೆ ರೂ.79 ಲಕ್ಷ 48 ಸಾವಿರ ಪರಿಹಾರ ನೀಡುವಂತೆ ಪತಿಗೆ ಆದೇಶಿಸಿದೆ.

ಸ್ಪೇನ್‌ನ ಪಾಂಟೆವೆಡ್ರಾದಲ್ಲಿನ ಪ್ರಾಂತೀಯ ನ್ಯಾಯಾಲಯವು ಇತ್ತೀಚೆಗೆ ಈ ತೀರ್ಪು ನೀಡಿದ್ದು, ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. 79 ಲಕ್ಷದ 48 ಸಾವಿರ ರೂ. ಪರಿಹಾರ ನೀಡಿದ್ದು, ಆದರೆ ದಂಪತಿಗಳ ಹೆಸರನ್ನು ಬಹಿರಂಗಪಡಿಸಿಲ್ಲ.

ಇದನ್ನೂ ಓದಿ: ದೇವ್ರೆ ನನ್ನ ನೀನೇ ಕಾಪಾಡ್ಬೇಕಪ್ಪ; ದೇವರಿಗೆ ಕೈ ಮುಗಿದು ದೇಗುಲದ ಹುಂಡಿ ಹಣವನ್ನೇ ಎಗರಿಸಿದ ಭೂಪ 

1996 ರಲ್ಲಿ ಮದುವೆಯಾಗಿದ್ದ ಈ ದಂಪತಿಗಳು ಕೆಲ ಭಿನ್ನಾಭಿಪ್ರಾಯದಿಂದ 2022ರಲ್ಲಿ ವಿಚ್ಛೇಧನ ಪಡೆದುಕೊಂಡಿದ್ದರು. ಸುಮಾರು 26 ವರ್ಷದ ದಾಂಪತ್ಯ ಜೀವನದಲ್ಲಿ ಪತ್ನಿ ಮನೆಯ ಕೆಲಸ ಹಾಗೂ ಮಗಳನ್ನು ಬೆಳೆಸುವುದರಲ್ಲಿಯೇ ಜೀವನ ಕಂಡುಕೊಂಡಿದ್ದಳು. ಸ್ವಂತ ಜೀವನ ನಿರ್ವಹಣೆಗೆ ಏನು ಕಂಡುಕೊಂಡಿಲ್ಲದ್ದ ಕಾರಣ ಪತ್ನಿ ನ್ಯಾಯಾಲಯದ ಮೊರೆ ಹೋಗಿ 26 ವರ್ಷಗಳ ಕಾಲ ಮನೆಗೆಲಸ ಮಾಡಿದಕ್ಕೆ ಪತಿಯಿಂದ 79 ಲಕ್ಷ ರೂ. ಪರಿಹಾರ ಪಡೆದುಕೊಂಡಿದ್ದಾಳೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:53 am, Tue, 19 March 24