ಕಲಬುರಗಿ: ತವರು ಮನೆಯಿಂದ ಬಂದವಳೆ ಮಗುವನ್ನು ಕೊಂದು ತಾನೂ ನೇಣಿಗೆ ಶರಣಾದ ತಾಯಿ
ಆಕೆಗಿನನ್ನು ಮದುವೆಯಾಗಿ ನಾಲ್ಕು ವರ್ಷವಾಗಿತ್ತು. ಅಲ್ಲದೇ 2 ವರ್ಷದ ಮುದ್ದಾದ ಹೆಣ್ಣು ಮಗು ಕೂಡ ಇತ್ತು. ಸಂಸಾರಕ್ಕೆ ಯಾವುದೇ ಕೊರತೆಯಿರಲಿಲ್ಲ. ಎಲ್ಲವೂ ಚೆನ್ನಾಗಿಯೇ ಇತ್ತು. ಆದ್ರೆ, ಏಕಾಏಕಿ ನಿನ್ನೆ(ಫೆ.13) ರಾತ್ರಿ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಮರಪಳ್ಳಿ ಗ್ರಾಮದಲ್ಲಿನ ತನ್ನ ಮನೆಯಲ್ಲಿಯೇ ಮುದ್ದು ಕಂದಮ್ಮನನ್ನ ಕೊಂದು ತಾನೂ ನೇಣಿಗೆ ಕೊರಳೊಡ್ಡಿದ್ದಾಳೆ.
ಕಲಬುರಗಿ, ಫೆ.14: ಜಿಲ್ಲೆಯ ಚಿಂಚೋಳಿ(Chincholi) ತಾಲೂಕಿನ ಮರಪಳ್ಳಿ ಗ್ರಾಮದ ನಿವಾಸದಲ್ಲಿ ನಿನ್ನೆ(ಫೆ.13) ಸಂಜೆ ಎರಡು ವರ್ಷದ ಪುಟ್ಟ ಕಂದಮ್ಮಳನ್ನ ಕೊಂದು ತಾಯಿಯೂ ನೇಣಿಗೆ ಕೊರಳೊಡ್ಡಿರುವ ಧಾರುಣ ಘಟನೆ ನಡೆದಿದೆ. ತಾಯಿ ಶಿವಲೀಲಾ (23) ಹಾಗೂ ವರ್ಷಿತಾ(2) ಮೃತ ರ್ದುದೈವಿಗಳು. ಚಿಂಚೋಳಿ ತಾಲ್ಲೂಕಿನ ಕೆರೋಳ್ಳಿ ಗ್ರಾಮದ ನಿವಾಸಿಯಾಗಿರುವ ಶಿವಲೀಲಾ, ಮೂರು ವರ್ಷದ ಹಿಂದೆ ಮರಪಳ್ಳಿ ಗ್ರಾಮದ ಆನಂದ ಜೊತೆ ಮದುವೆ ಮಾಡಿಕೊಡಲಾಗಿತ್ತು. ಇಷ್ಟು ದಿನ ಇಬ್ಬರು ಚೆನ್ನಾಗಿಯೇ ಇದ್ದರು. ಅಲ್ಲದೆ ನಿನ್ನೆಯಷ್ಟೆ ತವರು ಮನೆಯಿಂದ ವಾಪಸ್ ಅಗಿದ್ದಳು. ಅಷ್ಟೇ ಸಂಜೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮಗುವನ್ನು ಕೊಂದು ತಾನೂ ನೇಣಿಗೆ ಶರಣಾಗಿದ್ದಾಳೆ. ತಾಯಿ ಮಗಳ ಸಾವನ್ನ ಕಂಡು ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನು ಮೊದ ಮೊದಲು ಗಂಡ ಅತ್ತೆಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿರಬುಹುದು ಎನ್ನುವ ಶಂಕೆ ವ್ಯಕ್ತವಾಗಿತ್ತು. ಆದ್ರೆ, ಸದ್ಯ ಮೃತಳ ಸಂಬಂಧಿಕರೇ ‘ಶಿವಲೀಲಾ ಸ್ವಲ್ಪ ಮುಂಗೊಪಿಯಾಗಿದ್ದಳು. ಅಲ್ಲದೇ ಆಕೆ ಯಾಕೆ ಸಾವನ್ನಪ್ಪಿದ್ದಾಳೆ ಎನ್ನುವ ನಿಖರ ಕಾರಣ ಗೊತ್ತಿಲ್ಲ ಎನ್ನುತ್ತಿದ್ದಾರೆ. ಹೆಂಡತಿಯನ್ನ ಕರೆದುಕೊಂಡು ಬರುವುದಕ್ಕೆ ಹೋಗಿದ್ದ ಗಂಡ ಆನಂದ ದೇಸಾಯಿ ಕೂಡ ಹೆಂಡತಿ ಮನೆಯಲ್ಲಿಯೇ ಎರಡ್ಮೂರು ದಿನ ಇದ್ದನಂತೆ. ನಿನ್ನೆಯಷ್ಟೆ ತವರು ಮನೆಯಿಂದ ಹೆಂಡತಿಯನ್ನು ಕರೆದುಕೊಂಡು ಬಂದಿದ್ದ. ಆದ್ರೆ, ಇದ್ದಕ್ಕಿಂತದ್ದೇ ಶಿವಲೀಲಾ ಇಂತಹ ನಿರ್ಧಾರಕ್ಕೆ ಬಂದಿದ್ದು ಯಾಕೆ ಎನ್ನುವ ಹತ್ತಾರು ಪ್ರಶ್ನೆ ಮೂಡುತ್ತಿವೆ.
ಇದನ್ನೂ ಓದಿ:ಕೋಲಾರ: ಅಪ್ರಾಪ್ತ ಬಾಲಕಿ ಕೊಂದು ತಾನು ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಮತ್ತೊಮ್ಮೆ ಆತ್ಮಹತ್ಯೆಗೆ ಯತ್ನ
ಒಟ್ಟಿನಲ್ಲಿ ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಚಿಂಚೋಳಿ ಪೊಲೀಸರು, ತನಿಖೆಗಿಳಿದಿದ್ದಾರೆ. ತನ್ನ ಕರುಳ ಕುಡಿಯನ್ನ ಕೊಂದು ಆಕೆಗೆ ನೇಣಿಗೆ ಶರಣಾಗಿದ್ದೇಕೆ, ಗಂಡನ ಮನೆಯವರ ಕಿರುಕುಳವಾ? ಅಥವಾ ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಳಾ ಎನ್ನುವ ಬಗ್ಗೆ ಪೊಲೀಸರ ತನಿಖೆಯಿಂದಲೇ ಬಟ ಬಯಲಾಗಬೇಕು. ಅದೇನೆ ಇರಲಿ ತಾನು ನೇಣಿಗೆ ಶರಣಾಗಿದ್ದಲ್ಲದೇ ಏನು ಅರಿಯದ ಮುದ್ದು ಕಂದಮ್ಮನನ್ನು ಕೊಂದಿದ್ದು ನಿಜಕ್ಕೂ ದುರಂತವೇ ಸರಿ.
ರಾಜ್ಯದ ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ