ಬೆಂಗಳೂರು: ಮನೆಯಲ್ಲಿ 22 ವರ್ಷ ಗೃಹಿಣಿ ನೇಣಿಗೆ ಶರಣು, ಪತಿ ಪೊಲೀಸರ ವಶಕ್ಕೆ
ಬೆಂಗಳೂರಿನ ರಾಜಗೋಪಾಲ ನಗರದ ಮೋಹನ್ ಥಿಯೇಟರ್ ಬಳಿಯ ಮನೆಯೊಂದರಲ್ಲಿ ಗೃಹಿಣಿ ಆತ್ಮಹತ್ಯೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜಗೋಪಾಲ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತ ಕಾವ್ಯ ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದವರು. ಪ್ರವೀಣ ಮತ್ತು ಕಾವ್ಯ ವಿವಾಹವಾಗಿ ಎರಡು ವರ್ಷ ಕಳೆದಿದೆ.
ಬೆಂಗಳೂರು, ಫೆಬ್ರವರಿ 12: ರಾಜಗೋಪಾಲ ನಗರದ ಮೋಹನ್ ಥಿಯೇಟರ್ ಬಳಿಯ ಮನೆಯೊಂದರಲ್ಲಿ ಗೃಹಿಣಿ ಆತ್ಮಹತ್ಯೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾವ್ಯ (22) ಮೃತ ಗೃಹಿಣಿ. ಪತಿ ಪ್ರವೀಣ್ ಮತ್ತು ಆತನ ಪೋಷಕರನ್ನು ಪೊಲೀಸರು (Police) ವಶಕ್ಕೆ ಪಡೆದುಕೊಂಡಿದ್ದಾರೆ. ಮೃತ ಕಾವ್ಯ ಮೂಲತಃ ತುಮಕೂರು (Tumakur) ಜಿಲ್ಲೆಯ ಕುಣಿಗಲ್ ಪಟ್ಟಣದವರು. ಪ್ರವೀಣ ಮತ್ತು ಕಾವ್ಯ ವಿವಾಹವಾಗಿ ಎರಡು ವರ್ಷ ಕಳೆದಿದೆ. ದಂಪತಿಗೆ ಒಂದು ವರ್ಷದ ಮಗುವಿದೆ. ರಾಜಗೋಪಾಲ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪೋಲಿಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣ ಸಂಬಂಧ ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಮಾತನಾಡಿ, ನಿನ್ನೆ (ಫೆ.11) ರಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಸಿಕ್ಕಿತ್ತು. 304A ವರದಕ್ಷಿಣೆ ಕಿರುಕುಳ ಆರೋಪದಡಿ ಕೇಸ್ ದಾಖಲಿಸಲಾಗಿದೆ. ಮೃತ ಮಹಿಳೆಯ ಪತಿ ಮತ್ತು ಕುಟುಂಬಸ್ಥರನ್ನು ವಶಪಡೆಯಲಾಗಿದೆ. ಮಹಿಳೆ ಮತ್ತು ಆಕೆ ಗಂಡನ ನಡುವೆ ಆಗಾಗ ಜಗಳ ಆಗ್ತಿತ್ತು. ಗಂಡ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರೆ ಅಂತ ಜಗಳ ಆಗುತ್ತಿತ್ತಂತೆ. ಸದ್ಯ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಕುಖ್ಯಾತ ಕಳ್ಳನ ಬಂಧನ
ಚಿತ್ರದುರ್ಗ: ಮೊಳಕಾಲ್ಮೂರು ತಾಲೂಕಿನ ರಾಂಪುರ ಠಾಣೆ ಪೊಲೀಸರು ಕುಖ್ಯಾತ ಕಳ್ಳನನ್ನು ಬಂಧಿಸಿದ್ದಾರೆ. ಬಳ್ಳಾರಿಯ ಗುಗ್ಗರಿ ಗ್ರಾಮದ ಲೋಕೇಶ್ (29) ಬಂಧಿತ ಆರೋಪಿ. ಆರೋಪಿ ಲೋಕೇಶ್ ಕಳೆದ ಒಂದು ತಿಂಗಳಿಂದ ಜನರ ನೆಮ್ಮದಿ ಕೆಡಿಸಿದ್ದಾನೆ. ಈತ ಮಾರಕಾಸ್ತ್ರ ಹಿಡಿದು ರಸ್ತೆಯಲ್ಲಿ ಓಡಾಡುತ್ತಿದ್ದನು.
ಇದನ್ನೂ ಓದಿ: ಕೋಲಾರ: ಅಪ್ರಾಪ್ತ ಬಾಲಕಿ ಕೊಂದು ತಾನು ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಮತ್ತೊಮ್ಮೆ ಆತ್ಮಹತ್ಯೆಗೆ ಯತ್ನ
ಈತನ ಜೊತೆಗೆ ಇನ್ನೂ ಇಬ್ಬರು ರಾತ್ರಿ ವೇಳೆ ಮಂಕಿ ಕ್ಯಾಪ್ ಧರಸಿ ಮಾರಕಾಸ್ತ್ರಗಳನ್ನು ಹಿಡಿದು ರಾಂಪುರದ ರಸ್ತೆಗಳಲ್ಲಿ ಓಡಾಡಿದ್ದರು. ಆರೋಪಿಗಳು ರಾಂಪುರ ಗ್ರಾಮದಲ್ಲಿ ಕಳ್ಳತನ, ದರೋಡೆಗೆ ಸಂಚು ರೂಪಿಸಿದ್ದರು. ಇದೀಗ ಈ ಗ್ಯಾಂಗ್ನ ನಾಯಕ ಲೋಕೇಶ್ನನ್ನು ಪೊಲೀಸರು ಬಂಧಿಸಿದ್ದು, ಉಳಿದವರಿಗಾಗಿ ಬಲೆ ಬೀಸಿದ್ದಾರೆ.
ಇಬ್ಬರು ಆರೋಪಿಗಳು ಆಂಧ್ರದ ಅನಂತಪುರ ಜೈಲಲ್ಲಿರುವ ಬಗ್ಗೆ ಮಾಹಿತಿ ದೊರೆತಿದೆ. ಆರೋಪಿಗಳು 14ಕ್ಕೂ ಹೆಚ್ಚು ಕಳ್ಳತನ, ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದರು. ಬಂಧಿತ ಆರೋಪಿ ಲೋಕೇಶ್ ಬಳಿಯಿಂದ ಐದು ಸಾವಿರ ನಗದು, ಬೆಳ್ಳಿ ಆಭರಣ, ಮಾರಕಾಸ್ತ್ರಗಳು, ಮಂಕಿ ಕ್ಯಾಪ್, ಹ್ಯಾಂಡ್ ಗ್ಲೋಸ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:54 am, Mon, 12 February 24