Viral News : ಹೆಣ್ಣು ಶಿಕ್ಷಣದತ್ತ ಹೆಚ್ಚು ಮುಖಮಾಡುತ್ತಿರುವುದರಿಂದ ತನಗೆ ತಕ್ಕಂತಹ ಹುಡುಗನ ಶೋಧನೆಯಲ್ಲಿ ಆಕೆ ತೊಡಗಿಕೊಳ್ಳುತ್ತಿದ್ದಾಳೆ. ಹಾಗಾಗಿ ಹಳ್ಳಿಗಳಲ್ಲಿರುವ ರೈತಾಪಿ ಹುಡುಗರು ಮದುವೆಗೆ ಹೆಣ್ಣು ಸಿಗದೆ ಪರದಾಡುವಂತಾಗಿದೆ. ಇದೀಗ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತಿರುವ ಈ ಫೋಟೋ ನೋಡಿ, ಬಾಳೆಹಣ್ಣಿನ ಮೇಲೆ ‘ಜನರ ಮನಸ್ಸು ಬದಲಾಗಲಿ’, ‘ರೈತರಿಗೆ ಕನ್ಯಾ ಕೊಡಲಿ’ ಎಂದು ಟ್ರೋಲ್ ಮಾಡಲಾಗುತ್ತಿದೆ.
ಸುಮಾರು 32,000 ಜನರು ಇದನ್ನು ಇಷ್ಟಪಟ್ಟಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ನಮ್ಮಪ್ಪ ರೈತ, ನಮ್ಮ ದೊಡ್ಡಪ್ಪ ರೈತ ನಾನು ರೈತ ಎಂದು ಒಬ್ಬರು ಹೇಳಿದ್ದಾರೆ. ಯಾರು ಹೇಳಿದ್ದು ಕೊಡಲ್ಲ ಅಂತ. ಒಮ್ಮೆ ಹಳ್ಳಿಕಡೆಗೆ ಹೋಗಿ ಹೆಣ್ಣು ಕೇಳಿ, ಅವರು ಏನು ಡಿಮ್ಯಾಂಡ್ ಮಾಡ್ತಾರೆ ಅಂತ ಗೊತ್ತಾಗತ್ತೆ ಅಂತ ಇನ್ನೊಬ್ಬರು ಹೇಳಿದ್ದಕ್ಕೆ, ಅದಕ್ಕೆ ಪ್ರತ್ಯುತ್ತರವಾಗಿ ಮತ್ತೊಬ್ಬರು, ಹುಡುಗನಿಗೆ ಜಮೀನಿರಬೇಕು ಆದರೆ ರೈತನಾಗಿರಬಾರದು ಅಂತಾರೆ ಎಂದಿದ್ದಾರೆ.
ಇದನ್ನೂ ಓದಿ : ಸೀರೆಯುಟ್ಟು ಜಿಮ್ ವರ್ಕೌಟ್ ಮಾಡುತ್ತಿರುವ ಮಹಿಳೆಯ ವಿಡಿಯೋ ವೈರಲ್; ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ
ಹಳ್ಳಿಗಳಲ್ಲಿರುವ ಹುಡುಗೀರು, ಹುಡುಗ ಸರ್ಕಾರಿ ನೌಕರಿಯಲ್ಲಿರಬೇಕು ಅಂತ ಡಿಮ್ಯಾಂಡ್ ಮಾಡ್ತಾರೆ ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ದಾರೆ. ಚೆನ್ನಾಗಿ ದುಡಿಮೆ ಮಾಡಿ ಅಣ್ಣಾ, ಋಣ ಇದ್ದಲ್ಲಿ ಹುಡುಗಿ ಸಿಗ್ತಾಳೆ ಎಂದಿದ್ದಾರೆ ಇನ್ನೊಬ್ಬರು. ನಾನಂತೂ ಒಳ್ಳೆಯ ಹೃದಯ, ಒಳ್ಳೆಯ ಆರೋಗ್ಯ ಇರುವ ರೈತನನ್ನೇ ಮದುವೆಯಾಗ್ತೀನಿ. ಆತನಿಗೆ ಕೆಟ್ಟ ಅಭ್ಯಾಸ ಮತ್ತು ಡಯಾಬಿಟೀಸ್ ಇರಬಾರದು ಎಂದಿದ್ದಾರೆ ಒಬ್ಬಾಕೆ. ಅದಕ್ಕೆ ಪ್ರತಿಯಾಗಿ ನಿಮ್ಮ ಮಾತನ್ನು ಉಳಿಸಿಕೊಳ್ಳಿ ಗುಡ್ ಗರ್ಲ್ ಎಂದು ಹೇಳಿದ್ದಾರೆ ಮತ್ತೊಬ್ಬರು.
ಇದನ್ನೂ ಓದಿ : ವರ್ಷದ ಅಪ್ಪ ಪ್ರಶಸ್ತಿ ಈ ಅಪ್ಪನಿಗೇ! ವೈರಲ್ ಆದ ವಿಡಿಯೋ
ಮೊದಲು ಬೆಳೆಗೆ ಒಳ್ಳೆಯ ಬೆಲೆ ಕೊಡಲಿ. ಆಮೇಲೆ ಕನ್ಯಾ ಕೊಡುವ ಮಾತಾಡಲಿ ಎಂದು ಇನ್ನೂ ಒಬ್ಬರು ಹೇಳಿದ್ದಾರೆ. ಈ ಪೋಸ್ಟ್ ಅನ್ನು ಮಲೆನಾಡು ಸಾಗರ ಟ್ರೋಲ್ಸ್ ಎಂಬ ಪುಟದಲ್ಲಿ ಹಂಚಿಕೊಳ್ಳಲಾಗಿದೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ಪೋಸ್ಟ್ಗಾಗಿ ಕ್ಲಿಕ್ ಮಾಡಿ
Published On - 5:20 pm, Wed, 8 February 23