ಆಗ್ರಾ: ಉತ್ತರ ಪ್ರದೇಶದ ಆಗ್ರಾದಿಂದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಪತ್ನಿಯೊಬ್ಬಳು ಪತಿಯೊಂದಿಗೆ ಫ್ಯಾಮಿಲಿ ಕೌನ್ಸಿಲಿಂಗ್ ಸೆಂಟರ್ಗೆ ಹೋಗಿದ್ದಾಳೆ. ನಾನು ಇನ್ನುಮುಂದೆ ನನ್ನ ಗಂಡನೊಂದಿಗೆ ಬದುಕಲು ಸಾಧ್ಯವೇ ಇಲ್ಲ ಎಂದಿರುವ ಮಹಿಳೆ ನಾನು ನನ್ನ ಬಾಯ್ಫ್ರೆಂಡ್ ಜೊತೆಗೇ ಇರುತ್ತೇನೆ ಎಂದಿದ್ದಾಳೆ. ಆದರೆ, ನನ್ನ ಮತ್ತು ಪ್ರಿಯಕರನ ಖರ್ಚನ್ನು ನನ್ನ ಗಂಡನೇ ಭರಿಸಬೇಕು ಎಂದಿದ್ದಾರೆ.
ನನ್ನ ಪ್ರಿಯಕರನಿಗೂ ಹೆಂಡತಿ, ಮಕ್ಕಳಿದ್ದಾರೆ. ಅವನಿಗೆ ಅವರ ಖರ್ಚೇ ಸಾಕಷ್ಟಿರುತ್ತದೆ. ಹೀಗಾಗಿ, ನನ್ನ ಖರ್ಚನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ಆದ್ದರಿಂದ ನನ್ನ ಗಂಡನೇ ನಮ್ಮ ತಿಂಗಳ ಖರ್ಚಿಗೆ ಹಣ ಕೊಡಬೇಕು ಎಂದು ಆ ಮಹಿಳೆ ಬೇಡಿಕೆಯಿಟ್ಟಿದ್ದಾಳೆ. ಆದರೆ, ಇದಕ್ಕೆ ಆಕೆಯ ಗಂಡ ಒಪ್ಪಿಲ್ಲ. ನನ್ನ ಹೆಂಡತಿ ತನ್ನ ಪ್ರಿಯಕರನೊಂದಿಗೆ ವಾಸಿಸುತ್ತಿರುವಾಗ ನಾನೇಕೆ ಅವಳ ಖರ್ಚನ್ನು ಸಹ ಭರಿಸಬೇಕೆಂದು ಪತಿ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ನಡು ರಸ್ತೆಯಲ್ಲೇ ಟಿಎಂಸಿ ಮುಖಂಡನಿಂದ ಮಹಿಳೆಗೆ ಮನಬಂದಂತೆ ಥಳಿತ; ಬಂಗಾಳದ ಶಾಕಿಂಗ್ ವಿಡಿಯೋ ವೈರಲ್
ಉತ್ತರ ಪ್ರದೇಶದ ಆಗ್ರಾದಲ್ಲಿ ಈ ರೀತಿಯ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಪತ್ನಿಯೊಬ್ಬಳು ತನ್ನ ಪತಿಯಿಂದ ವಿಚಿತ್ರ ಬೇಡಿಕೆ ಇಟ್ಟಿದ್ದಾಳೆ. ಇನ್ನು ಅವನೊಂದಿಗೆ ಬಾಳಲು ಇಷ್ಟವಿಲ್ಲ ಎಂದು ಹೇಳಿರುವ ಆಕೆ ತನ್ನೊಂದಿಗೆ ತನ್ನ ಇಬ್ಬರು ಹೆಣ್ಣುಮಕ್ಕಳನ್ನೂ ಕರೆದುಕೊಂಡು ಪ್ರಿಯಕರನೊಂದಿಗೆ ಹೋಗಲು ನಿರ್ಧರಿಸಿದ್ದಾಳೆ. ಆದರೆ, ಅವರೆಲ್ಲರ ಖರ್ಚನ್ನೂ ತನ್ನ ಗಂಡ ಕೊಡಬೇಕೆಂದು ಡಿಮ್ಯಾಂಡ್ ಮಾಡಿದ್ದಾಳೆ.
ತನ್ನ ಪತ್ನಿ ಪ್ರಿಯಕರನ ಜೊತೆ ಬದುಕಿದರೆ ಆಕೆಗೆ ಒಂದು ರೂಪಾಯಿ ಕೂಡ ಕೊಡುವುದಿಲ್ಲ ಎಂದು ಪತಿಯೂ ಹಠ ಹಿಡಿದಿದ್ದಾನೆ. ಹೀಗಾಗಿ, ಈ ವಿಷಯ ಕುಟುಂಬ ಸಲಹಾ ಕೇಂದ್ರಕ್ಕೆ ತಲುಪಿದೆ. ಇದನ್ನು ಮಹಿಳೆ ಕೌಂಟರ್ ಮುಂದೆ ಹೇಳಿದಾಗ ಅವರಿಗೂ ಬಹಳ ಆಶ್ಚರ್ಯವಾಯಿತು. ನಾನು ನನ್ನ ಗೆಳೆಯನೊಂದಿಗೆ ಬದುಕಲು ಬಯಸುತ್ತೇನೆ. ಆದರೆ ಇಬ್ಬರು ಹೆಣ್ಣುಮಕ್ಕಳು ಗಂಡನಿಂದ ಬಂದವರು. ಹಾಗಾಗಿ ಅವರ ಖರ್ಚು ವೆಚ್ಚಗಳಿಗೆ ಗಂಡನೇ ಜವಾಬ್ದಾರನಾಗಿರುತ್ತಾನೆ ಎಂದಿದ್ದಾಳೆ.
ಇದನ್ನೂ ಓದಿ: ವಿಚಿತ್ರ ಘಟನೆ: ಹೆಲ್ಮೆಟ್ ಧರಿಸಿಲ್ಲವೆಂದು ಲಾರಿ ಚಾಲಕನಿಗೆ ದಂಡ ಹಾಕಿದ ಪೊಲೀಸರು!
ಈ ಬಗ್ಗೆ ಪತಿ ಹೇಳಿಕೆ ನೀಡಿದ್ದು, ಆಕೆ ನನ್ನೊಂದಿಗೆ ವಾಸ ಮಾಡದೇ ಇರುವಾಗ ಹಣವನ್ನು ಏಕೆ ಖರ್ಚು ಮಾಡಬೇಕು ಎಂದು ಕೇಳಿದ್ದಾರೆ. ಅವಳು ತನ್ನ ಪ್ರಿಯಕರನೊಂದಿಗೆ ವಾಸಿಸುತ್ತಿದ್ದರೆ, ಅವಳ ಖರ್ಚನ್ನೂ ಅವನು ಭರಿಸಬೇಕು.
ಆಪ್ತ ಸಲಹೆಗಾರ ಏನು ಹೇಳಿದರು?:
ಈ ಬಗ್ಗೆ ಆಪ್ತಸಮಾಲೋಚಕ ಡಾ. ಅಮಿತ್ ಮಾತನಾಡಿ, ಇಬ್ಬರಿಗೂ ಮದುವೆಯಾಗಿ 10 ವರ್ಷಗಳಾಗಿವೆ. ಪತ್ನಿ ಹತ್ರಾಸ್ ನಿವಾಸಿ. ಆಕೆಯ ಪತಿ ಆಗ್ರಾ ನಿವಾಸಿ. ಹೆಂಡತಿ ಈಗ ತನ್ನ ಪ್ರಿಯಕರನೊಂದಿಗೆ ವಾಸಿಸಲು ಬಯಸುತ್ತಾಳೆ. ಆದರೆ ಪತಿಯಿಂದ ಮಾಸಿಕ ಖರ್ಚನ್ನೂ ಕೇಳುತ್ತಿದ್ದಾರೆ. ಪತಿ ಅವಳ ಖರ್ಚನ್ನು ಭರಿಸಲು ಬಯಸುವುದಿಲ್ಲ. ಸದ್ಯ ಇಬ್ಬರ ನಡುವೆ ಯಾವುದೇ ಒಪ್ಪಂದಕ್ಕೆ ಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ಮತ್ತೊಂದು ದಿನಾಂಕ ನೀಡಲಾಗಿದೆ. ಈ ವಿಚಾರದಲ್ಲಿ ಮುಂದಿನ ನಿರ್ಧಾರ ಏನು ಎಂದು ನೋಡಬೇಕಿದೆ ಎಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:22 pm, Mon, 1 July 24