ಕ್ಲಾಸ್​ರೂಂನಲ್ಲಿ ಹುಡುಗಿಯರಿಗೇ ಬೇರೆ ಸಾಲು ಮಾಡಿ ಎಂಬ ಬಾಲಕರು; ಕಾರಣ ಕೇಳಿದ್ರೆ ನಗೋದು ಗ್ಯಾರಂಟಿ!

ಶಾಲೆಯ ವಿದ್ಯಾರ್ಥಿಗಳ ಗುಂಪೊಂದು ತಮ್ಮ ಕ್ಲಾಸ್​ರೂಂನಲ್ಲಿ ಹುಡುಗಿಯರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಬೇಕೆಂದು ವಿನಂತಿಸಿ ತಮ್ಮ ಪ್ರಿನ್ಸಿಪಾಲ್​ಗೆ ಪತ್ರ ಬರೆದಿರುವ ಘಟನೆ ನಡೆದಿದೆ. ಈ ಪತ್ರದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕ್ಲಾಸ್​ರೂಂನಲ್ಲಿ ಹುಡುಗಿಯರಿಗೇ ಬೇರೆ ಸಾಲು ಮಾಡಿ ಎಂಬ ಬಾಲಕರು; ಕಾರಣ ಕೇಳಿದ್ರೆ ನಗೋದು ಗ್ಯಾರಂಟಿ!
ಸಾಂದರ್ಭಿಕ ಚಿತ್ರ

Updated on: Aug 09, 2024 | 8:30 PM

ತಮ್ಮ ಕ್ಲಾಸ್​ರೂಂನಲ್ಲಿ ಹುಡುಗಿಯರಿಗೆ ಪ್ರತ್ಯೇಕ ಸಾಲನ್ನು ಮಾಡಬೇಕೆಂದು ಬಾಲಕರು ಪ್ರಿನ್ಸಿಪಾಲ್​ಗೆ ಪತ್ರ ಬರೆದಿದ್ದಾರೆ. ಇದಕ್ಕೆ ಕಾರಣ ಕೇಳಿದರೆ ನಿಮಗೆ ನಗದೇ ಇರಲು ಸಾಧ್ಯವೇ ಇಲ್ಲ. ತಮ್ಮ ತರಗತಿಯ ಹುಡುಗಿಯರು ಪ್ರತಿ ಬೆಂಚಿನಲ್ಲಿ ಮೊದಲ ಎರಡು ಸ್ಥಾನಗಳನ್ನು ದಿನವೂ ಆಕ್ರಮಿಸಿಕೊಳ್ಳುತ್ತಾರೆ. ನಮ್ಮ ಮೇಜಿನ ಮೇಲೆ ಅವರ ಉದ್ದನೆಯ ಕೂದಲು ಬೀಳುತ್ತದೆ. ಇದರಿಂದ ನಮಗೆ ತೊಂದರೆಯಾಗುತ್ತದೆ. ಹೀಗಾಗಿ, ಅವರನ್ನು ಬೇರೆ ಸಾಲಿನಲ್ಲಿ ಕೂರಿಸಿ ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಆನ್‌ಲೈನ್‌ನಲ್ಲಿ ಈ ಪತ್ರದ ಫೋಟೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, “ನನ್ನ ತಮ್ಮ ಮತ್ತು ಅವನ ತರಗತಿಯ ಹುಡುಗರಿಗೆ ಪ್ರತ್ಯೇಕ ಸಾಲು ಬೇಕಂತೆ” ಎಂದು ಎಕ್ಸ್ ಬಳಕೆದಾರ ಅಪೂರ್ವ ಬರೆದಿದ್ದಾರೆ. ಹುಡುಗಿಯರ ಹಿಂದೆ ಕುಳಿತುಕೊಳ್ಳುವ ಹುಡುಗರಿಗೆ ತಮ್ಮ ಡೆಸ್ಕ್‌ಗಳ ಮೇಲೆ ಬೀಳುವ ಹುಡುಗಿಯರ ಉದ್ದನೆಯ ಕೂದಲು ತೊಂದರೆ ಮಾಡುತ್ತದೆ ಎಂದು ಅದರಲ್ಲಿ ಹೇಳಲಾಗಿದೆ. ಆ ಅರ್ಜಿಯಲ್ಲಿ ಆ ದಿನ ತರಗತಿಯಲ್ಲಿದ್ದ ಹುಡುಗರ ಸಹಿಯೂ ಇತ್ತು.


ಇದನ್ನೂ ಓದಿ: Viral Video: ಚಾಲಕನಿಲ್ಲದೇ ರಸ್ತೆಯಲ್ಲಿ ಹಿಮ್ಮುಖವಾಗಿ ಚಲಿಸಿದ ವ್ಯಾನ್; ವಿಡಿಯೋ ವೈರಲ್​​​​

ಹಂಚಿಕೊಂಡ ನಂತರ, ಆ ಪತ್ರ 5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 8,400ಕ್ಕೂ ಹೆಚ್ಚು ಲೈಕ್​ಗಳನ್ನು ಗಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ