Viral News: ಲೇಹ್​ನಿಂದ ಮನಾಲಿಗೆ ಸೊಲೊ ಸೈಕ್ಲಿಂಗ್ ಮಾಡಿದ ಭಾರತೀಯ ಸೇನಾಧಿಕಾರಿ; ಗಿನ್ನಿಸ್ ದಾಖಲೆ

ಭಾರತೀಯ ಸೇನಾಧಿಕಾರಿ ಕಠಿಣ ಹವಾಮಾನ ಪರಿಸ್ಥಿತಿಯಲ್ಲಿ ಐದು ಮಾರ್ಗಗಳನ್ನು ದಾಟಿ 34 ಗಂಟೆ 54 ನಿಮಿಷಗಳಲ್ಲಿ ಮನಾಲಿಯನ್ನು ತಲುಪಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Viral News: ಲೇಹ್​ನಿಂದ ಮನಾಲಿಗೆ ಸೊಲೊ ಸೈಕ್ಲಿಂಗ್ ಮಾಡಿದ ಭಾರತೀಯ ಸೇನಾಧಿಕಾರಿ; ಗಿನ್ನಿಸ್ ದಾಖಲೆ
ಲೇಹ್​ನಿಂದ ಮನಾಲಿಗೆ ಸೊಲೊ ಸೈಕ್ಲಿಂಗ್ ಮಾಡಿದ ಭಾರತೀಯ ಸೇನಾಧಿಕಾರಿ; ಗಿನ್ನಿಸ್ ದಾಖಲೆ
Edited By:

Updated on: Sep 28, 2021 | 9:37 AM

ಭಾರತೀಯ ಸೇನೆಯ ಅಧಿಕಾರಿ ಹೊಸ ಗಿನ್ನಿಸ್ ದಾಖಲೆಯನ್ನು ನಿರ್ಮಿಸಿದ್ದಾರೆ. ಫಾಸ್ಟೆಸ್ಟ್ ಸೊಲೊ ಸೈಕ್ಲಿಂಗ್​ನಲ್ಲಿ (ಪುರುಷರು) ಅತಿ ವೇಗದಲ್ಲಿ ಸೊಲೊ ಸೈಕ್ಲಿಂಗ್ ಮಾಡಿ ಹೆಸರು ಗಿಟ್ಟಿಸಿಕೊಂಡಿದ್ದಾರೆ. ಲೇಹ್​ನಿಂದ ಮನಾಲಿಗೆ ಒಟ್ಟು 472 ಕಿ.ಮೀ ಕ್ರಮಿಸುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ. ಲೆಫ್ಟಿನೆಂಟ್ ಕರ್ನಲ್ ಶ್ರೀಪಾದ ಶ್ರೀರಾಮ್ ಅವರು ಕಳೆದ ಶನಿವಾರ ಬೆಳಿಗ್ಗೆ 4 ಗಂಟೆಗೆ ಲಡಾಕ್​ನ ಲೇಹ್​ನಿಂದ ಹೊರಟರು, ಅವರು ಭಾನುವಾರ ಮಧ್ಯಾಹ್ನ ಮನಾಲಿಯನ್ನು ತಲುಪಿದ್ದಾರೆ.

ಭಾರತೀಯ ಸೇನಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಶ್ರಿಪಾದ ಶ್ರೀರಾಮ್ ಅವರು ಸೆಪ್ಟೆಂಬರ್ 26 ರಂದು ವೇಗದ ಸೊಲೊ ಸೈಕ್ಲಿಂಗ್​ನಲ್ಲಿ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಭಾರತೀಯ ಸೇನೆಯ ನಾರ್ಥನ್ ಕಮಾಂಡ್​ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಅಧಿಕಾರಿಯ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಕಠಿಣ ಹವಾಮಾನ ಪರಿಸ್ಥಿತಿಯಲ್ಲಿ ಐದು ಮಾರ್ಗಗಳನ್ನು ದಾಟಿ 34 ಗಂಟೆ 54 ನಿಮಿಷಗಳಲ್ಲಿ ಮನಾಲಿಯನ್ನು ತಲುಪಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ:

Viral News: 6.52 ಸೆಂ.ಮೀ ಬಾಯಿ ತೆರೆದು ಇಡೀ ಸೇಬು ಹಣ್ಣನ್ನೇ ಬಾಯಿಯಲ್ಲಿಟ್ಟ ಮಹಿಳೆ; ಗಿನ್ನಿಸ್ ದಾಖಲೆ!

World Record: ಒಂದೇ ಬಾರಿಗೆ ಹತ್ತು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ; ಗಿನ್ನಿಸ್ ದಾಖಲೆ ನಿರ್ಮಿಸಿದ ಅಮ್ಮ!

(Viral News Indian army officer sripada Sriram record for forest solo cycling from leh to manali guinness record)

TV9 Web

TV9 Kannada

Read More
Loading...
Unable to load recommendations.
Follow Us