Viral News: ಕಿಡ್ನಿ-ಲಿವರ್ ಮಾರಾಟಕ್ಕಿದೆ ಎಂದು ಪೋಸ್ಟರ್​​ ಹಾಕಿದ ಕೇರಳ ವ್ಯಕ್ತಿ, ಹಿಂದಿನ ಕಾರಣವೇನು?

ಕಿಡ್ನಿ-ಲಿವರ್ ಮಾರಾಟಕ್ಕಿದೆ ಎಂದು ಕೇರಳದ ವ್ಯಕ್ತಿಯೊಬ್ಬರು ಪೋಸ್ಟರ್​​ ಹಾಕಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆರಂಭದಲ್ಲಿ ಇದು ಚೇಷ್ಟೆ ಎಂದು ಜನರು ಭಾವಿಸಿದ್ದರು,

Viral News: ಕಿಡ್ನಿ-ಲಿವರ್ ಮಾರಾಟಕ್ಕಿದೆ ಎಂದು ಪೋಸ್ಟರ್​​ ಹಾಕಿದ ಕೇರಳ ವ್ಯಕ್ತಿ, ಹಿಂದಿನ ಕಾರಣವೇನು?
ಕಿಡ್ನಿ-ಲಿವರ್ ಮಾರಾಟಕ್ಕಿದೆ ಪೋಸ್ಟರ್

Updated on: Mar 13, 2023 | 9:01 AM

ಕಿಡ್ನಿ-ಲಿವರ್ ಮಾರಾಟಕ್ಕಿದೆ ಎಂದು ಕೇರಳದ ವ್ಯಕ್ತಿಯೊಬ್ಬರು ಪೋಸ್ಟರ್​​ ಹಾಕಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಆರಂಭದಲ್ಲಿ ಇದು ಚೇಷ್ಟೆ ಎಂದು ಜನರು ಭಾವಿಸಿದ್ದರು, ಜೊತೆಗೆ ಕೆಲವರು ಸರ್ಕಾರವನ್ನು ಗುರಿಯಾಗಿಸಲು ಇಂತಹ ಪೋಸ್ಟರ್ ಹಾಕಿದ್ದಾರೆ ಎಂದು ಭಾವಿಸಿದ್ದರು. ಪೋಸ್ಟರ್‌ನಲ್ಲಿ ಎರಡು ಮೊಬೈಲ್ ಸಂಖ್ಯೆಗಳನ್ನು ಸಹ ನೀಡಲಾಗಿದೆ. ಅದಕ್ಕೆ ಕರೆ ಮಾಡಿದಾಗ ಸುದ್ದಿ ನಿಜವೆಂದು ತಿಳಿದುಬಂದಿತ್ತು.

ಈ ಆಘಾತಕಾರಿ ಪ್ರಕರಣ ತಿರುವನಂತಪುರದ ಮಣಕಾಡು ಪುಥೇನ್ ರಸ್ತೆ ಪ್ರದೇಶದಲ್ಲಿ ನಡೆದಿದೆ. ಸುದ್ದಿ ಸಂಸ್ಥೆ ಐಎಎನ್ಎಸ್ ಪ್ರಕಾರ, ಈ ಪ್ರದೇಶದಲ್ಲಿ ವಾಸಿಸುವ 50 ವರ್ಷದ ಸಂತೋಷ್ ಕುಮಾರ್ ಅವರು ಕಿಡ್ನಿ ಮತ್ತು ಲಿವರ್ ಮಾರಾಟಕ್ಕಿದೆ ಎಂದು ಪೋಸ್ಟರ್​ ಹಾಕಿದ ವ್ಯಕ್ತಿ.

ಮತ್ತಷ್ಟು ಓದಿ: Albino Fawn: ಅಪರೂಪದ ಬಿಳಿ ಬಣ್ಣದ ಜಿಂಕೆ ಪತ್ತೆ, ವೈರಲ್​ ಪೋಟೋ ಇಲ್ಲಿದೆ ನೋಡಿ

ಹಣ್ಣಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಗೋಣಿಚೀಲ ಎತ್ತುವ ವೇಳೆ ಬೆನ್ನಿಗೆ ಪೆಟ್ಟು ಬಿದ್ದಿತ್ತು. ನಂತರ ಚಿಕಿತ್ಸೆಗೆ ಒಳಗಾಗಬೇಕಾಯಿತು, ಇರುವ ಹಣವೆಲ್ಲಾ ಖಾಲಿಯಾಗಿತ್ತು, ತಮ್ಮ ಕುಟುಂಬಕ್ಕೆ ಸೇರಿದ ಜಮೀನು ಮನಕೋಡು ಜಂಕ್ಷನ್ ಬಳಿ ಇದ್ದು ಅದರಲ್ಲಿ ಒಂದು ಭಾಗವನ್ನು ಮಾರಾಟ ಮಾಡಲು ಬಯಸಿದ್ದೆ, ಆದರೆ ಜಮೀನಿನ ವಿಚಾರದಲ್ಲಿ ಅಣ್ಣನೊಂದಿಗೆ ಜಗಳವಾಗಿತ್ತು. ಆಸ್ತಿ ತಾಯಿಯ ಹೆಸರಿನಲ್ಲಿದ್ದು, ಆರು ಮಂದಿ ಒಡಹುಟ್ಟಿದವರಿಗೆ ಹಂಚಿಕೆ ಮಾಡಲಾಗಿದೆ ಎಂದು ಸಂತೋಷ್ ಸಹೋದರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮತ್ತಷ್ಟು ಓದಿ:ವೈದ್ಯರನ್ನೇ ಬೆಚ್ಚಿ ಬೀಳಿಸಿತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯ ಸ್ಕ್ಯಾನಿಂಗ್​ ರಿಪೋರ್ಟ್

ತನ್ನ ಹೆಂಡತಿ ಮಕ್ಕಳಿಗೆ ಟ್ಯೂಷನ್ ಹೇಳುತ್ತಿದ್ದಳು ಆದರೆ ಕೊರೊನಾ ನಂತರ ಅದೂ ನಿಂತುಹೋಯಿತು. ಈಗ ನಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ದೇಹದ ವಿವಿಧ ಭಾಗಗಳನ್ನು ಮಾರಾಟ ಮಾಡದೆ ಬೇರೆ ದಾರಿ ಇಲ್ಲ ಎಂದು ಹೇಳಿದ್ದಾರೆ.

ವ್ಯಕ್ತಿ ಹಾಕಿರುವ ಪೋಸ್ಟರ್ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಿತ್ರವನ್ನು ಹಂಚಿಕೊಳ್ಳುವಾಗ ಅನೇಕರು ವ್ಯಕ್ತಿಯ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುತ್ತಿದ್ದಾರೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:01 am, Mon, 13 March 23

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us