Viral News: ಬಸ್ಸಿನಲ್ಲಿ ಗರ್ಭಿಣಿ, ವೃದ್ಧ, ದಿವ್ಯಾಂಗ, ಮಕ್ಕಳು ಯಾರಿಗೆ ಸೀಟು ಬೀಡಬೇಕು? IAS ಅಧಿಕಾರಿ ಪ್ರಶ್ನೆ ವೈರಲ್

ಮನುಷ್ಯರಾಗಿ ನಾವು ಪ್ರತಿದಿನವೂ ನಮ್ಮನ್ನು ಪರೀಕ್ಷಿಸುವ ನೈತಿಕ ಇಕ್ಕಟ್ಟುಗಳನ್ನು ಎದುರಿಸುತ್ತಿರುತ್ತೇವೆ. ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಅಂತಹದ್ದೆ ನೈತಿಕ ಸಂದಿಗ್ಧತೆಯ ಫೋಟೊವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

Viral News: ಬಸ್ಸಿನಲ್ಲಿ ಗರ್ಭಿಣಿ, ವೃದ್ಧ, ದಿವ್ಯಾಂಗ, ಮಕ್ಕಳು ಯಾರಿಗೆ ಸೀಟು ಬೀಡಬೇಕು? IAS ಅಧಿಕಾರಿ ಪ್ರಶ್ನೆ ವೈರಲ್
Viral News
Edited By:

Updated on: Mar 08, 2023 | 2:22 PM

ನೈತಿಕ ಸಂದಿಗ್ಧತೆಗಳು ನಮ್ಮ ಜೀವನದಲ್ಲಿ ಬಂದೇ ಬರುತ್ತದೆ ಮತ್ತು ಮನುಷ್ಯರಾಗಿ ನಾವು ಪ್ರತಿದಿನವೂ ನಮ್ಮನ್ನು ಪರೀಕ್ಷಿಸುವ ನೈತಿಕ ಇಕ್ಕಟ್ಟುಗಳನ್ನು ಎದುರಿಸುತ್ತಿರುತ್ತೇವೆ. ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಅಂತಹದ್ದೆ ನೈತಿಕ ಸಂದಿಗ್ಧತೆಯ ಫೋಟೊವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಮತ್ತು ಅದಕ್ಕೆ ಪ್ರತಿಕ್ರಿಯೆ ನೀಡಲು ಟ್ವಿಟರ್ ಬಳಕೆದಾದರನ್ನು ಕೇಳಿದ್ದಾರೆ. ನಾವು ಒಬ್ಬ ಅಸಹಾಯಕ ವ್ಯಕ್ತಿಯನ್ನು ರಸ್ತೆ ದಾಟಿಸುವುದಾಗಿರಲಿ, ಹಸಿದ ಬೀದಿ ಬದಿಯ ಪ್ರಾಣಿಗಳಿಗೆ ಊಟ ಹಾಕುವುದಾಗಿರಲಿ ಅಥವಾ ಬಸ್‌ನಲ್ಲಿ ಪ್ರಯಾಣಿಸುವಾಗ ವಯಸ್ಸಾದವರಿಗೆ ಸೀಟ್ ಬಿಟ್ಟು ಕೊಡುವುದಾಗಲಿ ಇವೆಲ್ಲ ನಮ್ಮ ನೈತಿಕ ಹಾಗೂ ಮಾನವೀಯ ಮೌಲ್ಯಗಳಾಗಿವೆ. ಕೆಲವೊಂದು ಬಾರಿ ನೈತಿಕ ಸಂದಿಗ್ಧತೆಗಳನ್ನು ಎದುರಿಸುತ್ತೇವೆ. ಯಾರಿಗೆ ಸಹಾಯ ಮಾಡಿದರೆ ಉತ್ತಮ ಎಂಬ ಗೊಂದಲ ನಮ್ಮಲ್ಲಿ ಮೂಡುತ್ತದೆ. ಅಂತಹದ್ದೆ ನೈತಿಕ ಸಂದಿಗ್ಧತೆಯ ಕುರಿತ ಫೋಟೊವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡು ಇದಕ್ಕೆ ಸರಿಯಾದ ಪ್ರತಿಕ್ರಿಯೆಯನ್ನು ನೀಡಿ ಎಂದು ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಹೇಳಿದ್ದಾರೆ.

ಅವರು ಟ್ವಿಟರ್‌ನಲ್ಲಿ ಶೇರ್ ಮಾಡಿರುವ ಫೋಟೊದಲ್ಲಿ ಒಬ್ಬ ಯುವಕ ಬಸ್ ಸೀಟ್‌ನಲ್ಲಿ ಕುಳಿತಿರುತ್ತಾನೆ. ಹಾಗೂ ಅದೇ ಬಸ್‌ನಲ್ಲಿ ಆ ಯುವಕನ ಕಣ್ಣ ಮುಂದೆ ಒಬ್ಬ ಮುದುಕಿ, ಮಗುವನ್ನು ಎತ್ತಿಕೊಂಡ ಮಹಿಳೆ, ಕಾಲಿಗೆ ಗಾಯಗೊಂಡ ಕಾಲಿಗೆ ಪ್ಲಾಸ್ಟರ್ ಹಾಕಿದ ವ್ಯಕ್ತಿ, ದೈಹಿಕವಾಗಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ವ್ಯಕ್ತಿ ಸೀಟ್ ಇಲ್ಲದೆ ನಿಂತಿರುತ್ತಾರೆ. ಮತ್ತು ಅವರು ಯಾರು ಆ ಸೀಟ್‌ನಲ್ಲಿ ಕುಳಿತುಕೊಳ್ಳಲು ಅರ್ಹರು ಮತ್ತು ಏಕೆ? ಎಂಬ ಪ್ರಶ್ನೆಯನ್ನು ಟ್ವಿಟರ್ ಬಳಕೆದಾರರಲ್ಲಿ ಕೇಳಿದ್ದಾರೆ.

ಇದನ್ನೂ ಓದಿ: Viral News: ಈ ದೇಶದಲ್ಲಿ ಅರ್ಧದಷ್ಟು ಹೆಣ್ಣುಮಕ್ಳು ಮದುವೆಯಾಗದೇ ತಾಯಿಯಾಗ್ತಾರೆ: 10ರಲ್ಲಿ 8 ಮದುವೆಗಳು ವಿಚ್ಛೇದನಲ್ಲಿ ಕೊನೆಗೊಳ್ಳುತ್ತಂತೆ!

ಹೆಚ್ಚಿನ ಬಳಕೆದಾರರು ತಮ್ಮ ಅಭಿಪ್ರಾಯಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾದರು ನನ್ನ ಅಭಿಪ್ರಾಯದ ಪ್ರಕಾರ ಗಾಯಗೊಂಡಿರುವು ವ್ಯಕ್ತಿಗೆ ಸೀಟ್ ಬಿಟ್ಟುಕೊಡುವುದು ಉತ್ತಮ. ಏಕೆಂದರೆ ಅವನಿಗೆ ಹೆಚ್ಚು ಹೊತ್ತು ನಿಲ್ಲುವುದು ಕಷ್ಟ ಎಂದು ಹೇಳಿದರು. ಇನ್ನೊಬ್ಬ ಬಳಕೆದಾರರು ಇದಕ್ಕೆ ಸ್ಪಷ್ಟ ಉತ್ತರವಿಲ್ಲ. ಪ್ರತಿಯೊಂದು ಆಯ್ಕೆಯು ತನ್ನದೇ ಆದ ಅರ್ಹತೆಯನ್ನು ಹೊಂದಿದೆ. ಅದಾಗ್ಯೂ ಮಗುವನ್ನು ಹೊತ್ತ ಮಹಿಳೆಗೆ ಸೀಟ್ ನೀಡಬೇಕು ಏಕೆಂದರೆ ಅಲ್ಲಿ ಇಬ್ಬರಿಗೆ ಆಸನದ ವ್ಯವಸ್ಥೆ ಸಿಕ್ಕಂತಾಗುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ಅಂಹತ ಸಂದಿಗ್ಧ ಸಂದರ್ಭದಲ್ಲಿ ದಿಲ್ಲಿಯ ಮೆಟ್ರೋ ಪ್ರಯಾಣಿಕರಂತೆ ಕಣ್ಣು ಮುಚ್ಚಿ ನಿದ್ದೆ ಮಾಡುವಂತೆ ವರ್ತಿಸಬೇಕು ಎಂದು ಹೇಳಿದ್ದಾರೆ.