‘ಸ್ಯಾಮ್​ಸಂಗ್ ಯಾವಾಗಿನಿಂದ ಡಿಟರ್ಜೆಂಟ್​ ಬಾರ್ ತಯಾರಿಸಲು ಶುರು ಮಾಡಿತು?!’

| Updated By: ಶ್ರೀದೇವಿ ಕಳಸದ

Updated on: Jan 28, 2023 | 6:45 PM

Samsung : ನನ್ನ ಅಮ್ಮ ನೋಡಿದರೆ ಇದರಿಂದ ಬಟ್ಟೆ ಉಜ್ಜುವುದು ಗ್ಯಾರಂಟಿ ಎಂದು ಒಬ್ಬರು. ಇದು ಸರ್ಫ್​ ಎಕ್ಸೆಲ್​ ಬಾರ್​ ಎಂದು ಇನ್ನೊಬ್ಬರು. ಇದು ರಿನ್ ಡಿಟರ್ಜೆಂಟ್​ ಬಾರ್​ನ ಜಾಹೀರಾತು ಅಲ್ವಾ ಹಾಗಿದ್ದರೆ ಎಂದು ಮತ್ತೊಬ್ಬರು. ನೀವೇನಂತೀರಿ?

‘ಸ್ಯಾಮ್​ಸಂಗ್ ಯಾವಾಗಿನಿಂದ ಡಿಟರ್ಜೆಂಟ್​ ಬಾರ್ ತಯಾರಿಸಲು ಶುರು ಮಾಡಿತು?!’
ರಿನ್​ ಡಿಟರ್ಜೆಂಟ್​ ಬಾರ್​ನಂತೆ ಕಾಣುತ್ತಿರುವ ಸ್ಯಾಮ್​ಸಂಗ್​ನ ಹೊಸ ಗ್ಯಾಜೆಟ್​
Follow us on

Viral News : ಹೊಸ ಗ್ಯಾಜೆಟ್​ಗಳು ಮತ್ತವುಗಳ ವಿನ್ಯಾಸಗಳು ಹುಟ್ಟಿಸುವ ಕುತೂಹಲ ಎಂದಿಗೂ ಮುಗಿಯದ್ದು. ಪೆನ್​ಡ್ರೈವ್​​ಗಳು ಮಾರುಕಟ್ಟೆಗೆ ಹೊಸ ಹೊಸ ವಿನ್ಯಾಸದಲ್ಲಿ ಬಂದಾಗ ಅವುಗಳು ಗ್ಯಾಜೆಟ್​ ಎಂದ ಹೇಳಲಾಗದಷ್ಟು ನೈಜ ವಿನ್ಯಾಸದಿಂದ ಕೂಡಿರುತ್ತಿದ್ದವು. ಇದೀಗ ವೈರಲ್ ಆಗಿರುವ ಈ ಗ್ಯಾಜೆಟ್​ ಗಮನಿಸಿ. ಸ್ಯಾಮ್​ಸಂಗ್​ ಇತ್ತೀಚೆಗೆ ಬಿಡುಡೆ ಮಾಡಿದ ಪೋರ್ಟೇಬಲ್​ ಸಾಲಿಡ್​ ಸ್ಟೇಟ್​ ಡ್ರೈವ್​ (SSD) T7 ಶೀಲ್ಡ್ (Solid-State Drive) ಇದು. ಇನ್​ಸ್ಟಾಗ್ರಾಂನಲ್ಲಿ ಈ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ನೆಟ್ಟಿಗರು ಇದನ್ನು ನೋಡಿ, ಇದೇನು ರಿನ್​ ಡಿಟರ್ಜೆಂಟ್​ ಬಾರ್? ಎಂದು ಕೇಳುತ್ತಿದ್ದಾರೆ.

ಒಂದು ಲಕ್ಷಕ್ಕಿಂತಲೂ ಹೆಚ್ಚು ಜನರು ಈ ಪೋಸ್ಟ್​ ನೋಡಿದ್ದಾರೆ. ಸುಮಾರು 20,000ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.  ನೂರಾರು ಜನರು ಪ್ರತಿಕ್ರಿಯಿಸಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಾನಂತೂ ಇದು ರಿನ್​ ಸೋಪ್​ ಬಾರ್​ ಎಂದೇ ನಂಬುತ್ತಿದ್ದೇನೆ ಇನ್ನೂ ಎಂದಿದ್ದಾರೆ ಅನೇಕರು. ಸ್ಯಾಮ್ಸಂಗ್​ ಕಂಪೆನಿ ಯಾವಾಗ ಡಿಟರ್ಜೆಂಟ್​ ಸೋಪ್​ ತಯಾರಿಸಲು ಆರಂಭಿಸಿತು ಎಂದು ಅಚ್ಚರಿಪಡುತ್ತಿದ್ದೇನೆ ಎಂದಿದ್ದಾರೆ ಒಬ್ಬರು. ಇದು ರಿನ್​ ಡಿಟರ್ಜೆಂಟ್​ ಸೋಪ್​ನ ಜಾಹೀರಾತು ಎಂದು ಅಂದುಕೊಂಡೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : ವೃದ್ಧರೊಬ್ಬರು ಕೋತಿಗೆ ರೊಟ್ಟಿ ಕೊಡಲು ಪ್ರಯತ್ನಿಸುತ್ತಿರುವ ಆಪ್ತವಾದ ವಿಡಿಯೋ ವೈರಲ್

ಇದನ್ನು ನಮ್ಮ ಅಮ್ಮ ಏನಾದರೂ ನೋಡಿದರೆ ಗ್ಯಾರಂಟಿ ನೀರಿನಲ್ಲಿ ಅದ್ದಿ ಬಟ್ಟೆಗೆ ಉಜ್ಜಲು ಶುರು ಮಾಡುತ್ತಾರೆ ಎಂದು ಒಬ್ಬರು ಹೇಳಿದ್ದಾರೆ. ನೋಡಿದಾಕ್ಷಣ ಇದು ಸರ್ಫ್​ ಎಕ್ಸೆಲ್​ ಬಾರ್​ನಂತೆ ಕಂಡಿತು ಎಂದು ಕೆಲವರು ಹೇಳಿದ್ದಾರೆ. ನಿಜ ಈ ವಿನ್ಯಾಸ್​ ಥೇಟ್​ ಬಟ್ಟೆ ಒಗೆಯುವ ಸೋಪ್​​ನಂತೆಯೇ ಇದೆ ಎಂದಿದ್ದಾರೆ ಅನೇಕರು.

ಇದನ್ನು ನೋಡಿದ ನಿಮ್ಮಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ