ಆಸ್ಟ್ರೇಲಿಯಾ: ತನ್ನದೇ ಹಸ್ತಮೈಥುನದ ವಿಡಿಯೋ ಕಳುಹಿಸಿ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕಿ ಈಗ ಜೈಲಿನಲ್ಲಿ ಕಂಬಿ ಎನಿಸುತ್ತಿದ್ದಾಳೆ. ಈ ಘಟನೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದಿದೆ. ಇತ್ತೀಚಿಗಷ್ಟೇ ಈ ಶಿಕ್ಷಕಿ ತನ್ನ 17 ವರ್ಷದ ವಿದ್ಯಾರ್ಥಿಗೆ ಆಕೆಯ ಹಸ್ತಮೈಥುನದ ವಿಡಿಯೋ ಕಳುಹಿಸಿದ್ದಳು. ಇದಲ್ಲದೆ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಳು ಎಂಬ ಆರೋಪ ಕೇಳಿಬಂದಿದೆ. ವಿಡಿಯೋ ಆಧಾರದ ಮೇಲೆ ಸಿಡ್ನಿ ಪೊಲೀಸರು ಶಿಕ್ಷಕಿಯನ್ನು ಬಂಧಿಸಿದ್ದಾರೆ.
ಗಾರ್ಡಿಯನ್ ಪ್ರಕಾರ, ನೈಋತ್ಯ ಸಿಡ್ನಿಯ ಲುರ್ನಿಯಾ ಹೈಸ್ಕೂಲ್ನ 30 ವರ್ಷದ ಶಿಕ್ಷಕಿ ತೈಲಾ ಬ್ರೈಲಿಯನ್ನು ಲೈಂಗಿಕ ಕಿರುಕುಳದ ಆರೋಪದ ಮೇಲೆ ಬಂಧಿಸಲಾಗಿದೆ. ಶಿಕ್ಷಕಿಯನ್ನು ಬಂಧಿಸಿ ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು, ಅಲ್ಲಿ ಅವರಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. ಜೊತೆಗೆ ಶಿಕ್ಷಕಿಯನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ.
ಸ್ನಾಪ್‌ಚಾಟ್ ಮೂಲಕ ಪ್ರಾರಂಭದಲ್ಲಿ ತನ್ನ 17 ವರ್ಷದ ವಿದ್ಯಾರ್ಥಿಗೆ ಮೆಸೇಜ್ ಮಾಡಲು ಆರಂಭಿಸಿದ್ದ ಈಕೆ, ಸಲುಗೆಯಿಂದ ಮಾತಾಡಿ ತನ್ನ ಬಲೆಗೆ ಬೀಳಿಸಿದ್ದಾಳೆ. ಬಳಿಕ ವಿದ್ಯಾರ್ಥಿಗೆ ನಗ್ನ ಫೋಟೋಗಳನ್ನು ಕಳುಹಿಸುತ್ತಿದ್ದ ಶಿಕ್ಷಕಿ ಒಂದು ದಿನ ತನ್ನ ಮನೆಗೆ ಕರೆಸಿ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದಾಳೆ. ಇಷ್ಟಕ್ಕೆ ಆಕೆಗೆ ಸಮಾಧಾನವಾಗಿಲ್ಲ, ವಿದ್ಯಾರ್ಥಿಯನ್ನು ಆಕೆ ಕರೆದಾಗಲೆಲ್ಲ ಬರುವಂತೆ ಒತ್ತಾಯಿಸಿದ್ದಾಳೆ.
ಇದನ್ನೂ ಓದಿ: ಲೈಂಗಿಕ ಕ್ರಿಯೆ ಮುನ್ನ ಹಣ ಕೇಳ್ತಿದ್ದ ಪತ್ನಿ; ಬೇಸತ್ತು ವಿಚ್ಛೇದನ ನೀಡಿದ ಪತಿ
ಮಾನಸಿಕವಾಗಿ ಒತ್ತಡಕ್ಕೆ ಒಳಗಾದ ಬಾಲಕ ಪೋಷಕರಿಗೆ ಎಲ್ಲ ವಿಷಯವನ್ನು ತಿಳಿಸಿದ್ದು, ಪೋಷಕರ ದೂರಿನ ಆಧಾರದ ಮೇಲೆ ಇದೀಗ ಶಿಕ್ಷಕಿ ಮೇಲೆ ಕೇಸು ದಾಖಲಿಸಿದ್ದು, ಸ್ಥಳೀಯ ನ್ಯಾಯಾಲಯದಲ್ಲಿ ಷರತ್ತುಬದ್ಧ ಜಾಮೀನಿನ ಮೇಲೆ ಹೊರಬಂದಿದ್ದಾಳೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ