Video Viral: ಹುಲಿಯ ಮುಂದೆ ಕುಸಿದು ಬಿದ್ದ ಯುವಕ; ಮುಂದೆನಾಯಿತು ಈ ವಿಡಿಯೋ ನೋಡಿ
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಯುವಕನೊಬ್ಬ ಬಿಳಿ ಹುಲಿಯ ಬಳಿ ಬಂದು ಎದೆ ನೋವಿನಿಂದ ನರಳುತ್ತಿರುವಂತೆ ನಟಿಸಿ ಕೆಳಗೆ ಬೀಳುತ್ತಾನೆ. ಅದನ್ನು ನೋಡಿದ ಹುಲಿ ತಕ್ಷಣ ಅವನ ಬಳಿ ಬಂದು ಅವನನ್ನು ಎಬ್ಬಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ವಿಡಿಯೋ ಇಲ್ಲಿದೆ ನೋಡಿ.
ಪ್ರಾಣಿಗಳಿಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಅದರಲ್ಲಿ ಕೆಲವೊಂದು ವಿಡಿಯೋಗಳು ಒಂದೇ ದಿನದಲ್ಲಿ ಭಾರೀ ವೈರಲ್ ಆಗುವುದುಂಟು. ಇದೀಗ ಇಂತದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರಿಂದ ಭಾರೀ ಮೆಚ್ಚುಗೆಗೆ ಕಾರಣವಾಗಿದೆ. ವಿಡಿಯೋದಲ್ಲಿ ಯುವಕನೊಬ್ಬ ಹುಲಿಯ ಮುಂದೆ ಕುಸಿದು ಬಿದ್ದಂತೆ ನಟಿಸಿದ್ದು, ಹತ್ತಿರ ಬಂದ ಹುಲಿ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ವಿಡಿಯೋದಲ್ಲಿ ಸೆರೆಯಾಗಿದೆ.
ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಯುವಕನೊಬ್ಬ ಬಿಳಿ ಹುಲಿಯ ಬಳಿ ಬಂದು ಎದೆ ನೋವಿನಿಂದ ನರಳುತ್ತಿರುವಂತೆ ನಟಿಸಿ ಕೆಳಗೆ ಬೀಳುತ್ತಾನೆ. ಅದನ್ನು ನೋಡಿದ ಹುಲಿ ತಕ್ಷಣ ಅವನ ಬಳಿ ಬಂದು ಅವನನ್ನು ಎಬ್ಬಿಸಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋಗೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ಇದನ್ನೂ ಓದಿ: ಹಸ್ತಮೈಥುನ ವಿಡಿಯೋ ಕಳುಹಿಸಿ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕಿಯ ಬಂಧನ
ಈ ವಿಡಿಯೋ ಇಂಡೋನೇಷ್ಯಾದ ಅಲ್ಶಾದ್ ಅಹ್ಮದ್ ಅವರದ್ದಾಗಿದ್ದು. ಅವರು ಸ್ವತಃ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ (@alshadahmad) ವಿಡಿಯೋ ಹಂಚಿಕೊಂಡಿದ್ದಾರೆ. ಜೂನ್ 07ರಂದು ಹಂಚಿಕೊಂಡಿರುವ ಈ ವಿಡಿಯೋ ಇಲ್ಲಿಯವರೆಗೆ 12.6ಮಿಲಿಯನ್ ಅಂದರೆ 1ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:49 am, Sun, 11 August 24