Viral News: ಮದುವೆಗೆ 1 ತಿಂಗಳಿರುವಾಗಲೇ ತಂದೆಯ ತಂಗಿಯೊಂದಿಗೆ ಪರಾರಿಯಾದ ಮಗ

|

Updated on: Mar 23, 2024 | 11:49 AM

ವರದಿಯ ಪ್ರಕಾರ ಯುವಕ ತನ್ನ ಅಪ್ರಾಪ್ತ ವಯಸ್ಸಿನ ಸೋದರ ಅತ್ತೆಯನ್ನು ಅಪಹರಿಸಿದ್ದಾನೆ. ಅಪಹರಿಸಿದ ಯುವಕ ಅಜಯ್​​​ಗೆ​​​ ಏಪ್ರಿಲ್​​​ 21ಕ್ಕೆ ಬೇರೆ ಯುವತಿಯೊಂದಿಗೆ ವಿವಾಹ ನಿಶ್ಚಯವಾಗಿತ್ತು. ಆದರೂ ಮನೆಗೆ ಬಂದು ಬೆದರಿಸಿ ಮಗಳನ್ನು ಕರೆದೊಯ್ದಿದ್ದಾನೆ ಎಂದು ಬಾಲಕಿಯ ತಂದೆ ಹೇಳಿದ್ದಾರೆ.

Viral News: ಮದುವೆಗೆ 1 ತಿಂಗಳಿರುವಾಗಲೇ ತಂದೆಯ ತಂಗಿಯೊಂದಿಗೆ ಪರಾರಿಯಾದ ಮಗ
ಮದುವೆಗೆ 1 ತಿಂಗಳಿರುವಾಗಲೇ ತಂದೆಯ ತಂಗಿಯೊಂದಿಗೆ ಪರಾರಿಯಾದ ಮಗ
Follow us on

ಉತ್ತರ ಪ್ರದೇಶದ ಹಮೀರ್​ಪುರದಲ್ಲಿ ಯುವಕನೊಬ್ಬ ತನ್ನ ತಂದೆಯ 16 ವರ್ಷದ ತಂಗಿ ಅಂದರೆ ಸೋದರ ಅತ್ತೆಯೊಂದಿಗೆ ಓಡಿ ಹೋಗಿದ್ದಾನೆ. ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಬಾಲಕಿಯನ್ನು ಅಪಹರಿಸಿದ ಯುವಕ ಅಜಯ್​​​ ಏಪ್ರಿಲ್​​​ 21ರಂದು ವಿವಾಹವಾಗಬೇಕಿತ್ತು. ಆದರೆ ಅದಕ್ಕೂ ಮೊದಲೇ ತನ್ನ 16 ವರ್ಷದ ಸೋದರ ಅತ್ತೆಯೊಂದಿಗೆ ಪರಾರಿಯಾಗಿದ್ದಾನೆ.

ವರದಿಯ ಪ್ರಕಾರ ಯುವಕ ತನ್ನ ಅಪ್ರಾಪ್ತ ವಯಸ್ಸಿನ ಸೋದರ ಅತ್ತೆಯನ್ನು ಅಪಹರಿಸಿದ್ದಾನೆ. ಯುವಕನ ಮನೆಯವರನ್ನು ಸಂಪರ್ಕಿಸಿದಾಗ ಬಾಲಕಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಬಾಲಕಿಯ ತಂದೆ ಹೇಳಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: ಮೂರನೇ ಮಗು ಕೂಡ ಹೆಣ್ಣು ಎಂದು ಹೊಲದಲ್ಲಿ ಎಸೆದ ತಾಯಿ, ಮಗುವಿನ ಶವವನ್ನು ಎಳೆದೊಯ್ದ ಬೀದಿ ನಾಯಿಗಳು

ಪ್ರಕರಣದಲ್ಲಿ ಹೊರ ಬಿದ್ದಿರುವ ಮತ್ತೊಂದು ವಿಷಯವೆಂದರೆ ಆರೋಪಿ ಅಂದರೆ ಬಾಲಕಿಯನ್ನು ಅಪಹರಿಸಿದ ಯುವಕ ಅಜಯ್​​​ ಏಪ್ರಿಲ್​​​ 21ರಂದು ವಿವಾಹವಾಗಬೇಕಿತ್ತು. ಆದರೆ ಅದಕ್ಕೂ ಮೊದಲೇ ತನ್ನ 16 ವರ್ಷದ ಸೋದರ ಅತ್ತೆಯೊಂದಿಗೆ ಪರಾರಿಯಾಗಿದ್ದಾನೆ. ಅಜಯ್​​​ ತನ್ನ ಮೂವರು ಸ್ನೇಹಿತರೊಂದಿಗೆ ತಮ್ಮ ಮನೆಗೆ ಬಂದು ಬೆದರಿಸಿ ಮಗಳನ್ನು ಕರೆದೊಯ್ದಿದ್ದಾನೆ ಎಂದು ಬಾಲಕಿಯ ತಂದೆ ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:48 am, Sat, 23 March 24