ಮೂರನೇ ಮಗು ಕೂಡ ಹೆಣ್ಣು ಎಂದು ಹೊಲದಲ್ಲಿ ಎಸೆದ ತಾಯಿ, ಮಗುವಿನ ಶವವನ್ನು ಎಳೆದೊಯ್ದ ಬೀದಿ ನಾಯಿಗಳು
ಮೂರನೇ ಹೆರಿಗೆಯಲ್ಲಿಯೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರಿಂದ ಜೊತೆಗೆ ಇನ್ನೊಂದು ಕಡೆ ಮದುವೆಯಾದ ಮಗಳಿದ್ದು, ಮತ್ತೆ ಗರ್ಭಿಣಿಯಾಗಿರುವುದು ಅವಮಾನ ಎಂದುಕೊಂಡು. ಸದ್ದು ಮಾಡದೆ ಹಸುಗೂಸನ್ನು ಗ್ರಾಮದ ಹೊರವಲಯದ ಗದ್ದೆಯಲ್ಲಿ ಬಿಸಾಕಿ ಬಂದಿದ್ದಾಳೆ.
ತೆಲಂಗಾಣ: ಗಂಡು ಮಗು ಜನಿಸಲಿದೆ ಎಂಬ ನಿರೀಕ್ಷೆಯಲ್ಲಿದ್ದ ಮಹಿಳೆಗೆ ಮೂರನೇ ಬಾರಿಯೂ ಹೆಣ್ಣು ಮಗುವಿನ ಜನನವಾಗಿದೆ. ಇದರಿಂದ ನಿರಾಸೆಗೊಂಡಿದ್ದ ಮಹಿಳೆ ತಾನು ಹೆತ್ತ ಮಗುವನ್ನು ಗ್ರಾಮದ ಹೊರವಲಯದ ಹೊಲದಲ್ಲಿ ಎಸೆದುಬಂದಿದ್ದಾಳೆ. ಮರುದಿನ ಬೀದಿ ನಾಯಿಗಳು ಹಸುಗೂಸಿನ ಶವವೊಂದನ್ನು ಎಳೆದೊಯ್ದು ಬೀದಿಯಲ್ಲಿ ತಿರುಗಾಡುತ್ತಿರುವ ದೃಶ್ಯಕಂಡು ಗ್ರಾಮಸ್ಥರು ದಂಗಾಗಿ ಹೋಗಿದ್ದಾರೆ. ಈ ಭೀಕರ ಘಟನೆ ತೆಲಂಗಾಣದ ಮಂಚಿರ್ಯಾಲ ಜಿಲ್ಲೆಯ ಭೀಮಿನಿ ಮಂಡಲದ ಕೇಸ್ಲಾಪುರ ಗ್ರಾಮದಲ್ಲಿ ನಡೆದಿದೆ.
ಪೊಲೀಸರ ಪ್ರಕಾರ ಕೇಸ್ಲಾಪುರ ಗ್ರಾಮದ ಗಂಗಕ್ಕ ಎಂಬ ಮಹಿಳೆಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರ ಹಿರಿಯ ಮಗಳಿಗೆ ಇತ್ತೀಚೆಗಷ್ಟೇ ಮದುವೆಯಾಗಿದೆ. ಆದರೂ ಕೂಡ ಗಂಗಕ್ಕ ಗಂಡು ಮಗು ಜನಿಸುವ ನಿರೀಕ್ಷೆ ಹೊತ್ತು ಗರ್ಭೀಣಿಯಾಗಿದ್ದಳು. ಬುಧವಾರ ರಾತ್ರಿ ಹೆರಿಗೆ ನೋವಿನಿಂದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಮೂರನೇ ಹೆರಿಗೆಯಲ್ಲಿಯೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರಿಂದ ಜೊತೆಗೆ ಇನ್ನೊಂದು ಕಡೆ ಮದುವೆಯಾಗಿ ಮಗಳಿದ್ದು, ಮತ್ತೆ ಗರ್ಭಿಣಿಯಾಗುವುದು ಅವಮಾನ ಎಂದುಕೊಂಡು. ಸದ್ದು ಮಾಡದೆ ಹಸುಗೂಸನ್ನು ಗ್ರಾಮದ ಹೊರವಲಯದ ಗದ್ದೆಯಲ್ಲಿ ಬಿಸಾಕಿ ಬಂದಿದ್ದಾಳೆ.
ಇದನ್ನೂ ಓದಿ: ಶಾಲೆಯ ಊಟದ ಸಾಂಬಾರ್‌ನಲ್ಲಿ ಹಲ್ಲಿ ಪತ್ತೆ; 30 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು
ಗುರುವಾರ ಬೆಳಗ್ಗೆ ಗ್ರಾಮದ ಬಳಿ ನಾಯಿಗಳು ಮಗುವಿನ ಶವವನ್ನು ಎಳೆದೊಯ್ದಿವೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗಂಗಕ್ಕೆ ಮೇಲೆ ಅನುಮಾನ ಹೊಂದಿದ್ದ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಗ್ರಾಮಸ್ಥರ ದೂರಿನ ಮೇರೆಗೆ ಎಸ್‌ಎಸ್‌ಐ ವಿಜಯ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ನಂತರ ಗಂಗಕ್ಕನನ್ನು ಬಂಧಿಸಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಎಸ್‌ಎಸ್‌ಐ ವಿಜಯ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ