AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಶಾಲೆಯ ಊಟದ ಸಾಂಬಾರ್‌ನಲ್ಲಿ ಹಲ್ಲಿ ಪತ್ತೆ; 30 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ಸಾಂಬಾರಿನಲ್ಲಿ ಹಲ್ಲಿ ಪತ್ತೆಯಾಗಿರುವ ಘಟನೆಗೆ ಸಂಬಂಧಿಸಿದಂತೆ ಶಾಹು ನಗರ ಪೊಲೀಸ್​​ ಠಾಣೆಯನ್ನು ದೂರು ದಾಖಲಾಗಿದೆ. ಮಧ್ಯಾಹ್ನದ ಊಟವನ್ನು ಶಾಲೆಯಿಂದ ನೀಡಲಾಗಿಲ್ಲ,ಬದಲಾಗಿ ಜೆಪಿ ಹೋಟೆಲ್ ಎಂಬ ಹೆಸರಿನ ಪಕ್ಕದ ಸ್ಥಳೀಯ ಹೋಟೆಲ್​​​​ನಿಂದ ತರಿಸಲಾಗಿತ್ತು ಎಂದು ತನಿಖೆಯ ವೇಳೆ ತಿಳಿದುಬಂದಿದೆ.

Viral News: ಶಾಲೆಯ ಊಟದ  ಸಾಂಬಾರ್‌ನಲ್ಲಿ ಹಲ್ಲಿ ಪತ್ತೆ; 30 ವಿದ್ಯಾರ್ಥಿಗಳು  ಆಸ್ಪತ್ರೆಗೆ ದಾಖಲು
ಸಾಂದರ್ಭಿಕ ಚಿತ್ರ
ಅಕ್ಷತಾ ವರ್ಕಾಡಿ
|

Updated on:Mar 21, 2024 | 5:19 PM

Share

ಮುಂಬೈ: ಮಧ್ಯಾಹ್ನದ ಊಟದ ವೇಳೆ ಸಾಂಬಾರಿನಲ್ಲಿ ಹಲ್ಲಿ ಪತ್ತೆಯಾಗಿರುವ ಘಟನೆ ಧಾರಾವಿಯಲ್ಲಿರುವ ಕಾಮರಾಜ್ ಮೆಮೋರಿಯಲ್ ಇಂಗ್ಲಿಷ್ ಹೈ ಸ್ಕೂಲ್​​ ಆ್ಯಂಡ್​​​ ಮತ್ತು ಜೂನಿಯರ್ ಕಾಲೇಜಿನಲ್ಲಿ ನಡೆದಿದೆ. ತಕ್ಷಣ ಆಹಾರ ಸೇವಿಸಿದ 30 ವಿದ್ಯಾರ್ಥಿಗಳನ್ನು ಸಿಯಾನ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. “ಮಕ್ಕಳೆಲ್ಲರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದು, ಬಳಿಕ ಮಕ್ಕಳನ್ನು ಪೋಷಕರೊಂದಿಗೆ ಮನೆಗೆ ಕಳುಹಿಸಲಾಗಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಶಾಹು ನಗರ ಪೊಲೀಸ್​​ ಠಾಣೆಯನ್ನು ದೂರು ದಾಖಲಾಗಿದೆ. ಮಧ್ಯಾಹ್ನದ ಊಟವನ್ನು ಮೇಲೆ ತಿಳಿಸಿದ ಶಾಲೆಯಿಂದ ನೀಡಲಾಗಿಲ್ಲ, ಆದರೆ ಜೆಪಿ ಹೋಟೆಲ್ ಹೆಸರಿನ ಪಕ್ಕದ ಸ್ಥಳೀಯ ಹೋಟೆಲ್ ತರಿಸಲಾಗಿತ್ತು ಎಂದು ತನಿಖೆಯ ವೇಳೆ ತಿಳಿದುಬಂದಿದೆ. ಆಹಾರ ಮಾದರಿಗಳನ್ನು ಪರೀಕ್ಷೆಗಾಗಿ ಎಫ್‌ಡಿಎ ಸಂಗ್ರಹಿಸಿದೆ ಮತ್ತು ವರದಿ ಬಂದ ನಂತರ ನಾವು ತನಿಖೆ ಮುಂದುವರಿಯುತ್ತೇವೆ. ಸದ್ಯಕ್ಕೆ ಯಾವುದೇ ಪೋಷಕರು ನಮ್ಮನ್ನು ಸಂಪರ್ಕಿಸಿಲ್ಲ ಅಥವಾ ನಮ್ಮೊಂದಿಗೆ ಯಾವುದೇ ಪ್ರಕರಣವನ್ನು ದಾಖಲಿಸಿಲ್ಲ” ಎಂದು ವಲಯ ಡಿಸಿಪಿ ತೇಜಸ್ವಿ ಸತ್ಪುಟೆ ಹೇಳಿದ್ದಾರೆ.

ಇದನ್ನು ಓದಿ: ಅಂಬಾನಿ ಮನೆಯ ನಾರಿಮಣಿಗಳ ಕೈಯಲ್ಲಿ ಇರುತ್ತೆ ಈ ಕಪ್ಪು ದಾರ, ಇದರ ಹಿಂದಿರುವ ರಹಸ್ಯ ಏನು?

“ತಮ್ಮ ಮಕ್ಕಳಿಗೆ ಮಧ್ಯಾಹ್ನದ ಊಟ ಮತ್ತು ಉಪಹಾರವನ್ನು ಮಾಡಲು ಸಾಧ್ಯವಾಗದ ಪೋಷಕರು ಜೆಪಿ ಹೋಟೆಲ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಅವರು ಪ್ರತಿದಿನ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟವನ್ನು ಒದಗಿಸುತ್ತಿದ್ದರು. ಇದು ಹೆಚ್ಚಾಗಿ ಇಡ್ಲಿ, ಸಾಂಬಾರ್ ಮತ್ತು ಇತರ ದಕ್ಷಿಣ-ಭಾರತೀಯ ಆಹಾರವನ್ನು ಒಳಗೊಂಡಿರುತ್ತದೆ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:17 pm, Thu, 21 March 24