AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಪತ್ನಿಯ ಗೂಗಲ್ ಖಾತೆಯಲ್ಲಿದ್ದ ಸೀಕ್ರೆಟ್ ಫೋಟೋಗಳನ್ನು ಕಂಡು ಬೆಚ್ಚಿ ಬಿದ್ದ ಪತಿ; ಅಷ್ಟಕ್ಕೂ ಅದರಲ್ಲಿ ಏನಿತ್ತು?

ಪತಿ ಪತ್ನಿಯರ ನಡುವೆ ಎಷ್ಟೇ ಆಳವಾದ ಬಾಂಧವ್ಯವಿದ್ದರೂ ಅವರ ನಡುವೆ ಕೆಲವೊಂದು ಸಣ್ಣಪುಟ್ಟ ಸೀಕ್ರೆಟ್  ಇದ್ದೇ ಇರುತ್ತೆ. ಆದರೆ ಕೆಲವೊಂದು ಗುಟ್ಟುಗಳು ರಟ್ಟಾದಾಗ ನಿಜಕ್ಕೂ ಆಘಾತವಾಗುತ್ತದೆ. ಇದೀಗ ಅಂತಹದೊಂದು ಸುದ್ದಿ ವೈರಲ್ ಆಗಿದ್ದು, ವ್ಯಕ್ತಿಯೊಬ್ಬರು ತನ್ನ ಪತ್ನಿಯ ಗೂಗಲ್ ಖಾತೆಯಲ್ಲಿದ್ದ ಪೋಟೋಗಳನ್ನು ಕಂಡು ಶಾಕ್ ಆಗಿದ್ದಾರೆ. ಈ ಕುರಿತ ಸ್ಟೋರಿಯನ್ನು ಅವರು ಸೋಷಿಯಲ್ ಮೀಡಿಯಾ ಫ್ಲಾಟ್ಫಾರ್ಮ್ ರೆಡ್ಡಿಡ್ ಅಲ್ಲಿ ಹಂಚಿಕೊಂಡಿದ್ದಾರೆ.  

Viral: ಪತ್ನಿಯ ಗೂಗಲ್ ಖಾತೆಯಲ್ಲಿದ್ದ ಸೀಕ್ರೆಟ್ ಫೋಟೋಗಳನ್ನು ಕಂಡು ಬೆಚ್ಚಿ ಬಿದ್ದ ಪತಿ; ಅಷ್ಟಕ್ಕೂ ಅದರಲ್ಲಿ ಏನಿತ್ತು?
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Mar 21, 2024 | 2:12 PM

Share

ಪತಿ ಪತ್ನಿಯರಿಬ್ಬರು  ಉತ್ತಮ ಸ್ನೇಹಿತರು ಅಂತಾನೇ ಹೇಳಬಹುದು. ಸಾಮಾನ್ಯವಾಗಿ ಅವರುಗಳು ಸ್ನೇಹಿತರಂತೆ ಪರಸ್ಪರ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಹೀಗೆ ಪರಸ್ಪರ ಎಲ್ಲವನ್ನು ಹೇಳಿಕೊಂಡಾಗ ಸಂಬಂಧ ಇನ್ನಷ್ಟು ಗಟ್ಟಿಯಾಗಲು ಸಾಧ್ಯ. ಹಾಗಾಗಿ ಪತಿ-ಪತ್ನಿ ಯಾವುದೇ ಗುಟ್ಟುಗಳನ್ನು ಮುಚ್ಚಿಡದೆ ಪರಸ್ಪರ ತೆರೆದ ಪುಸ್ತಕದಂತಿರಬೇಕು ಅಂತ ಹೇಳುವ ಮಾತಿದೆ. ಹೀಗಿದ್ದರೂ ಕೂಡಾ ಪತಿಯಾದವನು ಪತ್ನಿಯಿಂದ ಅಥವಾ ಹೆಂಡತಿಯಾದವಳು ಗಂಡನಿಂದ ಕೆಲವೊಂದು ಸಣ್ಣಪುಟ್ಟ ವಿಷಯಗಳನ್ನು ಮುಚ್ಚಿಡುತ್ತಾರೆ. ಅದರಲ್ಲಿ ಕೆಲವೊಂದು ಸೀಕ್ರೆಟ್ ವಿಷಯಗಳು ರಟ್ಟಾದಾಗ ನಿಜಕ್ಕೂ ಆಘಾತವಾಗುತ್ತದೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ವ್ಯಕ್ತಿಯೊಬ್ಬರು ತನ್ನ ಹೆಂಡತಿಯ ಗೂಗಲ್ ಡ್ರೈವ್ ಅಲ್ಲಿ ಸಿಕ್ರೇಟ್ ಆಗಿ ಸಂಗ್ರಹಿಸಿಟ್ಟಿದ್ದಂತಹ  ಫೋಟೋಗಳನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.   ಈ ಕುರಿತ ಸ್ಟೋರಿಯನ್ನು  ಅವರು ಸೋಷಿಯಲ್ ಮೀಡಿಯಾ ಫ್ಲಾಟ್ಫಾರ್ಮ್ ರೆಡ್ಡಿಡ್ ನಲ್ಲಿ ಬರೆದುಕೊಂಡಿದ್ದಾರೆ.

ಪತ್ನಿಯ ಗೂಗಲ್ ಖಾತೆಯಲ್ಲಿ ತನ್ನ ಮಾಜಿ ಗೆಳತಿಯ ಫೋಟೋವನ್ನು ಕಂಡು ಬೆಚ್ಚಿಬಿದ್ದ ಪತಿ:

ಈ ವ್ಯಕ್ತಿ ಪತ್ನಿಯ ಗೂಗಲ್ ಅಕೌಂಟ್ ಅಲ್ಲಿ ತನ್ನ ಮಾಜಿ ಗೆಳತಿಯ ಫೋಟೋಗಳನ್ನು ಕಂಡು ಶಾಕ್ ಆಗಿದೆ ಎಂದು ಹೇಳಿದ್ದಾರೆ. ಆ ವ್ಯಕ್ತಿಗೆ 36 ವರ್ಷ ಹಾಗೂ ಪತ್ನಿಗೆ 33 ವರ್ಷ.  ಒಂಬತ್ತು ವರ್ಷಗಳ ಹಿಂದೆ ಪರಿಚಯವಾದ ಈ ಇಬ್ಬರ ನಡುವೆ ಪ್ರೀತಿ ಚಿಗುರೊಡೆದು, ಕೋವಿಡ್ ಲಾಕ್ಡೌನ್ ಕೊನೆಯಲ್ಲಿ ಮದುವೆಯಾದರು. ಇದೀಗ ಮುದ್ದಾದ ಮಗಳು ಜನಿಸಿದ್ದು, ಪತಿ ಪತಿಯರಿಬ್ಬರು ಸುಖ ಸಂಸಾರ ನಡೆಸುತ್ತಿದ್ದಾರೆ.

ಈ ವ್ಯಕ್ತಿ ತನ್ನ ಪತ್ನಿಯನ್ನು ಭೇಟಿಯಾಗುವ ಮೊದಲು ಬೇರೊಂದು ಯುವತಿಯ ಜೊತೆ ಪ್ರೇಮ ಸಂಬಂಧವನ್ನು ಹೊಂದಿದ್ದರು. ಆದರೆ ಆಕೆ ಪ್ರೀತಿಗಿಂತ ಹೆಚ್ಚಾಗಿ ಮಾನಸಿಕ ಕಿರುಕುಳವನ್ನು ನೀಡುತ್ತಿದ್ದಳು. ಈ ಟಾಕ್ಸಿಕ್ ರಿಲೇಷನ್ಶಿಪ್ ನಿಂದ ಹೊರ ಬಂದು, ನಂತರ ಇವರಿಗೆ ಪತ್ನಿಯ ಪರಿಚಯವಾಗುತ್ತದೆ. ಹೀಗೆ ಪರಿಚಯ ಪ್ರೀತಿಗೆ ತಿರುಗಿ ಇಬ್ಬರು ಮದುವೆಯಾಗಿ ಇದೀಗ  ಸುಖ ಸಂಸಾರವನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: 8 ವರ್ಷದ ಬಾಲಕಿ 5 ಕೋಟಿ ರೂ. ಬೆಲೆ ಬಾಳುವ ಮನೆಯ ಒಡತಿ

ಆದರೆ ಇತ್ತೀಚಿಗೆ ಇವರು ತನ್ನ ಪತ್ನಿಯ ಸೀಕ್ರೆಟ್ ವಿಷಯವನ್ನು ಕಂಡು ಶಾಕ್ ಆಗಿದ್ದಾರೆ. ಹೌದು ಕೆಲ ದಿನಗಳ ಹಿಂದೆ ಈ ವ್ಯಕ್ತಿ ಮನೆಯಲ್ಲಿಯೇ ಆಫೀಸ್ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಲ್ಯಾಪ್ಟಾಪ್ ಕೆಟ್ಟು ಹೋಗುತ್ತೆ. ಆ ಸಮಯದಲ್ಲಿ  ಕೆಲಸ ಮಾಡಲು ಹೆಂಡತಿಯ ಟ್ಯಾಬ್ ತೆಗೆದುಕೊಳ್ಳುತ್ತಾರೆ. ಅದರಲ್ಲಿ ಕೆಲಸಕ್ಕೆ ಲಾಗ್ ಇನ್ ಆಗಲು ಗೂಗಲ್ ಅಕೌಂಟ್ ತೆರೆದಾಗ ಪತ್ನಿಯ ಪ್ರತ್ಯೇಕ ಗೂಗಲ್ ಖಾತೆ ಕಾಣಿಸಿಕೊಳ್ಳುತ್ತದೆ.

ಆ ಗೂಗಲ್ ಅಕೌಂಟ್ ಓಪನ್ ಮಾಡಿದಾಗ ಅದರಲ್ಲಿ ತನ್ನ ಮಾಜಿ ಗೆಳತಿಯ 300 ಕ್ಕೂ ಹೆಚ್ಚು ಫೋಟೋಗಳು ಇದ್ದಿದ್ದು ಕಂಡು ಈ ವ್ಯಕ್ತಿ ಬೆಚ್ಚಿ ಬಿದ್ದಿದ್ದಾರೆ. ಇವರಿಬ್ಬರು ಪ್ರೀತಿ ಮಾಡಲು ಶುರು ಮಾಡಿದ ದಿನದಿಂದಲೇ ಇವರ ಪತ್ನಿ  ಮಾಜಿ ಗೆಳತಿಯ ಫೋಟೋಗಳನ್ನು ಸಂಗ್ರಹಿಸಲು ಶುರು ಮಾಡಿದ್ದರಂತೆ  ಅಷ್ಟೇ ಅಲ್ಲದೇ ನನ್ನ ಮಾಜಿ ಪ್ರೇಯಸಿಯಂತೆ ಡ್ರೆಸ್ ಹಾಕಿ, ಆಕೆಯಂತೆಯೇ ಹೇರ್ ಸ್ಟೈಲ್ ಮಾಡಿ, ತನ್ನನ್ನು ತಾನು  ಬದಲಿಸಿಕೊಳ್ಳುವ ಪ್ರಯತ್ನ ಕೂಡಾ ಮಾಡಿದ್ದಳು. ಆದರೆ ನನ್ನ ಪತ್ನಿ ಮಾಜಿ ಗೆಳತಿಯಂತೆ ಕಾಣಿಸಿಕೊಳ್ಳುವುದು ನನಗೆ ಇಷ್ಟವೇ ಇಲ್ಲ ಎಂದು ರೆಡ್ಡಿಡ್ ಅಲ್ಲಿ ಬರೆದುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ