ಬ್ಯಾಟ್​ಮ್ಯಾನ್ ಕಾರ್​ನಿಂದ ಬಂಗಲೆಯವರೆಗೆ, ದೊಡ್ಡ ಉದ್ಯಮಿಗಳ ಮಕ್ಕಳಿಗೆ ಸಿಕ್ಕ ಭರ್ಜರಿ ಗಿಫ್ಟ್​ಗಳಿವು…

Expensive gifts by billionaires to their family members: ಇನ್ಫೋಸಿಸ್ ನಾರಾಯಣಮೂರ್ತಿ ತಮ್ಮ ಮಗನ ಮಗುವಿಗೆ 240 ಕೋಟಿ ರೂ ಮೌಲ್ಯದ ಷೇರುಗಳನ್ನು ಗಿಫ್ಟ್ ಆಗಿ ನೀಡಿ ಸುದ್ದಿ ಮಾಡಿದ್ದಾರೆ. ಇಷ್ಟಕ್ಕೇ ನಾವು ಮೂಗಿನ ಮೇಲೆ ಬೆರಳಿಡಬೇಕಿಲ್ಲ. ಅಂಬಾನಿ ಕುಟುಂಬದವರು ತಮ್ಮ ಮಕ್ಕಳಿಗೆ ದುಬಾರಿ ಗಿಫ್ಟ್ ಕೊಡುವುದರಲ್ಲಿ ಎತ್ತಿದ ಕೈ. ಹಾಗೆಯೇ, ಸೀರಂ ಸಂಸ್ಥೆಯ ಮುಖ್ಯಸ್ಥರು, ಎಚ್​ಸಿಎಲ್ ಟೆಕ್ನಾಲಜೀಸ್​ನ ಸಂಸ್ಥಾಪಕರು ಮೊದಲಾದ ಶ್ರೀಮಂತರು ಕುಟುಂಬ ಸದಸ್ಯರಿಗೆ ದುಬಾರಿ ಉಡುಗೊರೆ ಕೊಡುವಲ್ಲಿ ಹಿಂದುಳಿದಿಲ್ಲ...

ಬ್ಯಾಟ್​ಮ್ಯಾನ್ ಕಾರ್​ನಿಂದ ಬಂಗಲೆಯವರೆಗೆ, ದೊಡ್ಡ ಉದ್ಯಮಿಗಳ ಮಕ್ಕಳಿಗೆ ಸಿಕ್ಕ ಭರ್ಜರಿ ಗಿಫ್ಟ್​ಗಳಿವು...
ದೊಡ್ಡವರ ಉಡುಗೊರೆಗಳು
Follow us
|

Updated on: Mar 21, 2024 | 4:34 PM

ಕೋಟ್ಯಾಧಿಪತಿಗಳ (billionaires) ಮಾತುಕತೆ, ನಡೆ ನುಡಿ ಎಲ್ಲವೂ ವಿಭಿನ್ನ. ಆಹಾರಕ್ರಮದಿಂದ ಹಿಡಿದು ಅವರ ಜೀವನಶೈಲಿ ಮತ್ತು ಉಡುಗೊರೆಗಳವರೆಗೆ, ಈ ಶ್ರೀಮಂತರು ತಮ್ಮದೇ ಛಾಪು ಮೂಡಿಸುತ್ತಾರೆ. ಇತ್ತೀಚೆಗಷ್ಟೇ ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ತಮ್ಮ 6 ತಿಂಗಳ ಮೊಮ್ಮಗುವಿಗೆ ಕೋಟ್ಯಂತರ ರೂ ಮೌಲ್ಯದ ಷೇರುಗಳ ಉಡುಗೊರೆ ನೀಡಿ ಸುದ್ದಿಯಲ್ಲಿದ್ದಾರೆ. ನಾರಾಯಣಮೂರ್ತಿ ಅವರ ಮಗ ರೋಹನ್ ಮೂರ್ತಿಯ ಈ ಮಗು ವಿಶ್ವದ ಅತ್ಯಂತ ಕಿರಿಯ ಕೋಟ್ಯಧಿಪತಿ (crorepati) ಎನಿಸಿದೆ. ಅದೇ ರೀತಿ, ಅನೇಕ ಶ್ರೀಮಂತರು ತಮ್ಮ ಮಕ್ಕಳಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಉಡುಗೊರೆಗಳನ್ನು ನೀಡಿದ್ದಾರೆ. ತಂದೆ ಅಥವಾ ತಾಯಿಯಿಂದ ಸಿಕ್ಕ ಈ ಉಡುಗೊರೆಗಳು ಆ ಮಕ್ಕಳನ್ನೂ ಕೋಟ್ಯಾಧೀಶ್ವರರನ್ನಾಗಿಸಿದೆ.

ನಾರಾಯಣಮೂರ್ತಿಯಿಂದ ಷೇರುಗಳ ಉಡುಗೊರೆ

ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಇತ್ತೀಚೆಗೆ ತಮ್ಮ ನಾಲ್ಕು ತಿಂಗಳ ಮೊಮ್ಮಗ ಏಕಾಗ್ರಗೆ 240 ಕೋಟಿ ರೂಪಾಯಿ ಮೌಲ್ಯದ 15 ಲಕ್ಷ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಏಕಾಗ್ರನು ರೋಹನ್ ಮೂರ್ತಿ ಮತ್ತು ಅಪರ್ಣಾ ಕೃಷ್ಣನ ಮಗ. ಅವರು 10 ನವೆಂಬರ್ 2023 ರಂದು ಬೆಂಗಳೂರಿನಲ್ಲಿ ಜನಿಸಿದೆ ಈ ಮಗು. ನಾರಾಯಣ ಮೂರ್ತಿ ಮತ್ತು ಪತ್ನಿ ಸುಧಾ ಮೂರ್ತಿ ಈಗಾಗಲೇ ಅಜ್ಜಿಯಾಗಿದ್ದಾರೆ. ಬ್ರಿಟನ್ ಪ್ರಧಾನಿ ರಿಷಿ ಸುನಕ್​ರನ್ನು ಮದುವೆ ಆಗಿರುವ ಅವರ ಮಗಳು ಅಕ್ಷತಾ ಮೂರ್ತಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಸೊಸೆ ಶ್ಲೋಕಾಗೆ 451 ಕೋಟಿ ಮೌಲ್ಯದ ನೆಕ್ಲೇಸ್ ನೀಡಿದ ನೀತಾ ಅಂಬಾನಿ

ನೀತಾ ಮತ್ತು ಮುಕೇಶ್ ಅಂಬಾನಿ ಅವರ ಹಿರಿಯ ಮಗ ಆಕಾಶ್ ಪತ್ನಿ ಶ್ಲೋಕಾ ಮೆಹ್ತಾಗೆ ದುಬಾರಿ ಮೌಲ್ಯದ ಸರ ಉಡುಗೊರೆಯಾಗಿ ಸಿಕ್ಕಿದೆ. 2019ರಲ್ಲಿ ನೀತಾ ಅಂಬಾನಿ ತಮ್ಮ ಸೊಸೆಗೆ 451 ಕೋಟಿ ರೂ ಮೌಲ್ಯದ ಡೈಮಂಡ್ ನೆಕ್ಲೇಸ್ ಕೊಟ್ಟಿದ್ದರು. ಇದು 407.48 ಕ್ಯಾರೆಟ್ ಹಳದಿ ವಜ್ರ, 229.52 ಕ್ಯಾರೆಟ್ ಬಿಳಿ ವಜ್ರ ಹಾಗು ಮತ್ತು 18 ಕ್ಯಾರೆಟ್ ಗುಲಾಬಿ ಚಿನ್ನದಿಂದ ಮಾಡಿದ ಮನಮೋಹಕ ನೆಕ್ಲೇಸ್ ಆಗಿದೆ.

ಇದನ್ನೂ ಓದಿ: ಪುಟಿದೆದ್ದ ಅನಿಲ್ ಅಂಬಾನಿ; ಸಾಲಗಳನ್ನು ತೀರಿಸಿ ಮೈಕೊಡವುತ್ತಿರುವ ಮುಕೇಶ್ ಸಹೋದರ; ರಿಲಾಯನ್ಸ್ ಪವರ್ ಷೇರುಪೇಟೆಯಲ್ಲಿ ಹೊಸ ಖದರ್

ಪೂನಾವಾಲಾರಿಂದ ಬ್ಯಾಟ್​ಮೊಬೈಲ್ ಕಾರ್

ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಅದಾರ್ ಪೂನಾವಾಲಾ ಅವರು ತಮ್ಮ ಮಗನಿಗೆ ಬ್ಯಾಟ್‌ಮೊಬೈಲ್ ವಿನ್ಯಾಸದ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಅದಾರ್ ಪೂನಾವಾಲಾ ಅವರು 2015 ರಲ್ಲಿ ತಮ್ಮ ಮಗನ ಹುಟ್ಟುಹಬ್ಬದಂದು Mercedes-Benz S-ಕ್ಲಾಸ್ ಅನ್ನು ಡಿಸೈನರ್ ಬ್ಯಾಟ್‌ಮೊಬೈಲ್ ಆಗಿ ಪರಿವರ್ತಿಸಿ ಗಿಫ್ಟ್ ಆಗಿ ನೀಡಿದ್ದರು.

ಶಿವ ನಾದರ್ ಅವರಿಂದ ಮಗಳಿಗೆ 115 ಕೋಟಿ ಮೌಲ್ಯದ ಮನೆ

2014 ರಲ್ಲಿ ಎಚ್‌ಸಿಎಲ್ ಸಂಸ್ಥಾಪಕ ಮತ್ತು ಅಧ್ಯಕ್ಷ ಶಿವ ನಾದರ್ ಅವರು ತಮ್ಮ ಏಕೈಕ ಪುತ್ರಿ ಮತ್ತು ವಾರಸುದಾರರಾದ ರೋಶನಿ ನಾದರ್ ಅವರಿಗೆ 115 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಖರೀದಿಸಿ ಕೊಟ್ಟಿದ್ದರು. ಆ ಕಾಲಕ್ಕೆ ದೆಹಲಿಯಲ್ಲಿ ನಡೆದ ಅತಿದೊಡ್ಡ ಆಸ್ತಿ ವಹಿವಾಟಿನಲ್ಲಿ ಅದೂ ಸೇರಿದೆ. ಈ ಮನೆ ಪೂರ್ವ ದೆಹಲಿಯ ಫ್ರೆಂಡ್ಸ್ ಕಾಲೋನಿಯಲ್ಲಿದೆ.

ಇದನ್ನೂ ಓದಿ: ಅಮೆರಿಕದ ಫೆಡ್ ರಿಸರ್ವ್ ಸಭೆ ಬಳಿಕ ಚಿನ್ನದ ಬೆಲೆ ದಾಖಲೆ ಮಟ್ಟಕ್ಕೆ ಏರಿಕೆ

ಇಶಾ ಅಂಬಾನಿ 450 ಕೋಟಿ ಮೌಲ್ಯದ ಬಂಗಲೆ

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ 2018 ರಲ್ಲಿ ಬಿಲಿಯನೇರ್ ಆನಂದ್ ಪಿರಾಮಲ್ ಅವರನ್ನು ವಿವಾಹವಾದರು. ತಮ್ಮ ಮಗಳು ಮತ್ತು ಅಳಿಯನ ಕುಟುಂಬಕ್ಕೆ ಮುಂಬೈನಲ್ಲಿ ಗುಲಿತಾ ಎಂಬ ಐಷಾರಾಮಿ ಮನೆಯನ್ನು ಉಡುಗೊರೆಯಾಗಿ ನೀಡಿದ್ದರು ಅಂಬಾನಿ ದಂಪತಿ. ಮುಂಬೈನಲ್ಲಿರುವ ಮುಖೇಶ್ ಮತ್ತು ನೀತಾ ಅಂಬಾನಿ ಮನೆ ಆಂಟಿಲಿಯಾ ಸಮೀಪವೇ ಗುಲಿತಾವನ್ನು ನಿರ್ಮಿಸಲಾಗಿದೆ. ಇದರ ಬೆಲೆ ಸುಮಾರು 450 ಕೋಟಿ ರೂ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ