AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: 8 ವರ್ಷದ ಬಾಲಕಿ 5 ಕೋಟಿ ರೂ. ಬೆಲೆ ಬಾಳುವ ಮನೆಯ ಒಡತಿ

ಡೈಲಿ ಸ್ಟಾರ್ ವರದಿ ಪ್ರಕಾರ, ಈ ಹುಡುಗಿ ಕೇವಲ 6 ವರ್ಷದವಳಿದ್ದಾಗ ಮನೆ ಖರೀದಿಸಿದ್ದಳು. ಆಗ ಆ ಮನೆಯ ಬೆಲೆ 3 ಕೋಟಿ ರೂ. ಇಷ್ಟು ಚಿಕ್ಕ ಹುಡುಗಿ ಕೋಟಿ ಕೋಟಿ ಬೆಲೆ ಬಾಳುವ ಮನೆಯ ಒಡತಿಯಾದದ್ದು ಹೇಗೆ ಎಂದು ಈಗ ನೀವು ಆಶ್ಚರ್ಯ ಪಡುತ್ತಿರಬೇಕು, ಹಾಗಾದರೆ ಇಲ್ಲಿ ತಿಳಿದುಕೊಳ್ಳಿ.

Viral News: 8 ವರ್ಷದ ಬಾಲಕಿ 5 ಕೋಟಿ ರೂ. ಬೆಲೆ ಬಾಳುವ ಮನೆಯ ಒಡತಿ
Ruby McLellanImage Credit source: pixabay
ಅಕ್ಷತಾ ವರ್ಕಾಡಿ
|

Updated on: Mar 21, 2024 | 12:44 PM

Share

ಸ್ವಂತ ಮನೆ ಖರೀದಿಸಬೇಕು ಎನ್ನುವುದು ಪತ್ರಿಯೊಬ್ಬರ ಕನಸು. ದುಡಿದ ದುಡ್ಡನ್ನು ವರ್ಷಗಳಿಂದ ಕೂಡಿಟ್ಟು ಜೊತೆಗೆ ಒಂದಿಷ್ಟು ಸಾಲ ಮಾಡಿ ಸ್ವಂತ ಮನೆ ಖರೀದಿಸುವ ಕನಸನ್ನು ನನಸಾಗಿಸುತ್ತಾರೆ. ಆದರೆ ಇಲ್ಲೊಬ್ಬಳು 8 ವರ್ಷದ ಪುಟ್ಟ ಬಾಲಕಿ 5 ಕೋಟಿ ರೂ. ಬೆಲೆ ಬಾಳುವ ಮನೆಯನ್ನು ಖರೀದಿಸಿದ್ದಾಳೆ. ಈ ಹುಡುಗಿಯ ಹೆಸರು ರೂಬಿ ಮೆಕ್‌ಕ್ಲೆಲನ್. ಆಕೆ ಆಸ್ಟ್ರೇಲಿಯಾದ ನಿವಾಸಿ. ಡೈಲಿ ಸ್ಟಾರ್ ವರದಿ ಪ್ರಕಾರ, ಈ ಹುಡುಗಿ ಕೇವಲ 6 ವರ್ಷದವಳಿದ್ದಾಗ ಮನೆ ಖರೀದಿಸಿದ್ದಳು. ಆಗ ಆ ಮನೆಯ ಬೆಲೆ 3 ಕೋಟಿ ರೂ. ಇಷ್ಟು ಚಿಕ್ಕ ಹುಡುಗಿ ಕೋಟಿ ಕೋಟಿ ಬೆಲೆ ಬಾಳುವ ಮನೆಯ ಒಡತಿಯಾದದ್ದು ಹೇಗೆ ಎಂದು ಈಗ ನೀವು ಆಶ್ಚರ್ಯ ಪಡುತ್ತಿರಬೇಕು, ಹಾಗಾದರೆ ಇಲ್ಲಿ ತಿಳಿದುಕೊಳ್ಳಿ.

ಸಹೋದರರ ಜೊತೆ ಸೇರಿ ಮನೆ ಖರೀದಿ:

ವಾಸ್ತವವಾಗಿ, ಹುಡುಗಿ ತನ್ನ ಇಬ್ಬರು ಹಿರಿಯ ಸಹೋದರರ ಸಹಾಯದಿಂದ 3 ಕೋಟಿ ರೂಪಾಯಿ ಮೌಲ್ಯದ ಈ ಮನೆಯನ್ನು ಖರೀದಿಸಿದ್ದಳು. ರೂಬಿಯ ಹಿರಿಯ ಸಹೋದರ ಆಂಗಸ್‌ಗೆ 14 ವರ್ಷ, ಸಹೋದರಿ ಲೂಸಿಗೆ 13 ವರ್ಷ. ವಾಸ್ತವವಾಗಿ, ಈ ಮೂವರು ಸಹೋದರರು ಮತ್ತು ಸಹೋದರಿಯರು ಒಟ್ಟಿಗೆ ಮನೆ ಖರೀದಿಸಿದ್ದರು. ತನ್ನ ಪಾಕೆಟ್ ಮನಿಯಿಂದ ಸುಮಾರು 3 ಲಕ್ಷ ರೂಪಾಯಿ ಉಳಿಸಿ ಡೌನ್ ಪೇಮೆಂಟ್ ನೀಡಿದ್ದು, ಉಳಿದ ಹಣವನ್ನು ತಂದೆ ನೀಡಿದ್ದು, ಸ್ವಲ್ಪ ಹಣವನ್ನು ಇಎಂಐ ಆಗಿ ಕಟ್ಟುತ್ತಿದ್ದಾರೆ. ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ಖರೀದಿಸಿದ ಈ ಮನೆಯು ನಾಲ್ಕು ಕೊಠಡಿಗಳನ್ನು ಹೊಂದಿದೆ, ಇದು ನೋಡಲು ಬಹಳ ಅದ್ಭುತವಾಗಿದೆ.

ಇದನ್ನೂ ಓದಿ: ಸ್ವಾತಂತ್ರ್ಯಪೂರ್ವದಲ್ಲೇ ಜುನಾಗಡ್ ನವಾಬನ ನಾಯಿ ಮದುವೆಗೆ ಆದ ಖರ್ಚು 2 ಕೋಟಿ ರೂ

ಮಕ್ಕಳು ಕೋಟಿ ಬೆಲೆ ಬಾಳುವ ಮನೆ ಖರೀದಿಸಿದ ಖುಷಿ ವ್ಯಕ್ತಪಡಿಸಿದ ತಂದೆ, “ಮಕ್ಕಳು ದೊಡ್ಡವರಾದ ಮೇಲೆ ಈ ಮನೆಯನ್ನು ಮಾರಬೇಕಾದರೆ ಅದನ್ನು ಮಾರುತ್ತೇವೆ ಮತ್ತು ಅದರಿಂದ ಬಂದ ಹಣವನ್ನು ಮೂವರಿಗೂ ಸಮನಾಗಿ ಹಂಚುತ್ತೇನೆ ” ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷತಾ ವರ್ಕಾಡಿ
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್