Bengaluru Rain: ಮಳೆಗಾಲ ಆರಂಭವಾಗುತ್ತಿದ್ದಂತೆ ಬೆಚ್ಚಿಬಿದ್ದ ಬೆಂಗಳೂರಿಗರು, ಸ್ವಂತ ಮನೆ ಬಿಟ್ಟು ಬಾಡಿಗೆ ಮನೆಗೆ ಶಿಫ್ಟ್
ಮಾನ್ಸೂನ್ಗೂ ಮುಂಚಿತವಾಗಿಯೇ ರಾಜಧಾನಿಗೆ ರಣ ಮಳೆಯ ಎಫೆಕ್ಟ್ ತಟ್ಟಿದೆ. ಕಳೆದ ಬಾರಿ ಸುರಿದಿದ್ದ ಮಳೆಯಿಂದಾಗಿ ನೆರೆಗೆ ತುತ್ತಾಗಿದ್ದ ಜನರಲ್ಲಿ ಮತ್ತೆ ಆತಂಕ ಕಾಡಿದೆ. ಸ್ವಂತ ಮನೆ ಇದ್ದರೂ ಬಾಡಿಗೆ ಮನೆಯಲ್ಲಿ ಇರಬೇಕಾದ ಸ್ಥಿತಿ ಇವರಿಗೆ ಎದುರಾಗಿದೆ.
ಬೆಂಗಳೂರು: ಮಳೆಗಾಲ ಆರಂಭಕ್ಕೂ ಮುನ್ನವೇ ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಮಳೆಗೆ ಭಾರೀ ಅನಾಹುತಗಳು ಸಂಭವಿಸಿವೆ(Bengaluru Rain). ಹೀಗಾಗಿ ಈ ಅವಘಡಗಳಿಂದ ತಪ್ಪಿಸಿಕೊಳ್ಳಲು ರಾಜಕಾಲುವೆ(Rajakaluve) ಪ್ರದೇಶಗಳಲಿದ್ದ ಜನರು ಬೇರೆಡೆಗೆ ಶಿಫ್ಟ್ ಆಗಿದ್ದಾರೆ. ಮಳೆಗಾಲ ಆರಂಭವಾಗುತ್ತಿದ್ದಂತೆ ರಾಜಕಾಲುವೆ ಸಮಸ್ಯೆಯಾಗಿ ಆ ಪ್ರದೇಶಗಳಲಿದ್ದ ಜನ ಸಮಸ್ಯೆ ಎದುರಿಸುವಂತಾಗುತ್ತಿತ್ತು. ಹೀಗಾಗಿ ಜನರು ತಮ್ಮ ಸ್ಥಳವನ್ನು ಬದಲಾಯಿಸುತ್ತಿದ್ದಾರೆ. ಸ್ವಂತ ಮನೆಯಿದ್ದರೂ ಬಾಡಿಗೆ ಮನೆಯಲ್ಲಿರುವಂತಾಗಿದೆ.
ಮಾನ್ಸೂನ್ಗೂ ಮುಂಚಿತವಾಗಿಯೇ ರಾಜಧಾನಿಗೆ ರಣ ಮಳೆಯ ಎಫೆಕ್ಟ್ ತಟ್ಟಿದೆ. ಕಳೆದ ಬಾರಿ ಸುರಿದಿದ್ದ ಮಳೆಯಿಂದಾಗಿ ನೆರೆಗೆ ತುತ್ತಾಗಿದ್ದ ಜನರಲ್ಲಿ ಮತ್ತೆ ಆತಂಕ ಕಾಡಿದೆ. ಸ್ವಂತ ಮನೆ ಇದ್ದರೂ ಬಾಡಿಗೆ ಮನೆಯಲ್ಲಿ ಇರಬೇಕಾದ ಸ್ಥಿತಿ ಇವರಿಗೆ ಎದುರಾಗಿದೆ. ನಗರದ ಹೊರಮಾವು ಬಳಿಯ ಸಾಯಿ ಲೇಔಟ್ ಜನರ ಗೋಳು ಕೇಳೋರಿಲ್ಲ. ಇವರಿಗೆ ಸ್ವಂತ ಮನೆ ಇದ್ದರೂ ಬಾಡಿಗೆ ಮನೆ ಮಾಡಿಕೊಂಡು ಮತ್ತೊಂದು ಏರಿಯಾಗೆ ಗುಳೆ ಬಂದಿದ್ದಾರೆ. ಕಳೆದ ಬಾರಿ ಮಳೆಯಿಂದಾಗಿ ಸಾಯಿ ಲೇಔಟ್ ಸಂಪೂರ್ಣ ಜಲಾವೃತವಾಗಿತ್ತು. ಮನೆಯೊಳಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ಮನೆಯ ಉಪಕರಣ ನಷ್ಟವಾಗಿತ್ತು. ಇದರಿಂದಾಗಿ ಈ ಬಾರಿಯ ಮಾನ್ಸೂನ್ ಗೂ ಮುಂಚಿತವಾಗಿಯೇ ವಲಸೆ ಬಂದಿದ್ದಾರೆ.
ಸದ್ಯ ಸಾಯಿ ಲೇಔಟ್ನಲ್ಲಿ 1000 ಮನೆಗಳಿವೆ. ಇದ್ರಲ್ಲಿ ಈಗಾಗಲೇ 600ಕ್ಕೂ ಹೆಚ್ಚು ಮನೆಗಳ ಜನರು ಶಿಫ್ಟ್ ಆಗಿದ್ದಾರೆ. ನೆರೆ ಆತಂಕದಲ್ಲಿ ಏರಿಯಾ ಬಿಟ್ಟು ಬೇರೆ ಏರಿಯಾಗಳಿಗೆ ಕುಟುಂಬ ಸಮೇತ ಶಿಫ್ಟ್ ಆಗುತ್ತಿದ್ದಾರೆ. ಇನ್ನು ಮತ್ತೊಂದೆಡೆ ಬಿಬಿಎಂಪಿ, ಬಿಡಿಎಯ ರಾಜಕಾಲುವೆ ಕಾಮಗಾರಿ ಇನ್ನೂ ಕೂಡ ಪೂರ್ಣಗೊಂಡಿಲ್ಲ. ರಾಜಕಾಲುವೆ ಸಮಸ್ಯೆಯಿಂದಾಗಿ ಈ ನೆರೆಯ ಸಮಸ್ಯೆ ಉಂಟಾಗಿದೆ. ನೆರೆ ಬಂದು ವರ್ಷವಾದ್ರು ಇನ್ನೂ ಡ್ರೈನೇಜ್ ದುರಸ್ತಿ ಕಾರ್ಯ ನಡೆದಿಲ್ಲ. ಹೊರಮಾವು ಅಗ್ರಹಾರ ಕೆರೆಗೂ ಸಂಪರ್ಕ ಇಲ್ಲ. ಹೀಗಾಗಿ ನೆರೆ ಬಂದು ಸಮಸ್ಯೆಯಾಗುತ್ತಿದೆ. ಕಳೆದ ಬಾರಿಯ ಮಳೆಯ ಹೊಡೆತಕ್ಕೆ ಗೋಡೆಗಳು ಬಿರುಕು ಬಿಟ್ಟಿವೆ. ಅಲ್ಲದೇ ಕೆಲ ಮನೆಗಳು ಕುಸಿದಿವೆ. ಹೀಗಾಗಿ ನೆರೆಯ ಸಹವಾಸವೇ ಬೇಡ ಎಂದು ಮನೆಗೆ ಬೀಗ ಜಡಿದು ಬೇರೆಡೆಗೆ ಜನ ಹೊರಟಿದ್ದಾರೆ. ಸಾಯಿ ಲೇಔಟ್ನಲ್ಲಿ ಸಾಲು ಸಾಲು ಮನೆಗಳಿಗೆ ಬೀಗ ಹಾಕಲಾಗಿದೆ. ಜನರಿಲ್ಲದೆ ಏರಿಯಾ ಬಿಕೋ ಎನ್ನುತ್ತಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ