AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Office Demand: ಬೆಂಗಳೂರಿನ ವೈಟ್​ಫೀಲ್ಡ್​ನಲ್ಲಿ ಭಯಂಕರ ಟ್ರಾಫಿಕ್ ಇದ್ದರೂ ಕಚೇರಿ ಸ್ಥಳಕ್ಕೆ ಭಾರೀ ಡಿಮ್ಯಾಂಡ್; ಕಾರಣ ಇದು

Bengaluru's Whitefield: ವೈಟ್​ಫೀಲ್ಡ್​ನಲ್ಲಿ ಮುಂದಿನ ಎರಡು ವರ್ಷದಲ್ಲಿ ಕಚೇರಿ ಸ್ಥಳಗಳ ಬಾಡಿಗೆ ಶೇ. 10ರಷ್ಟು ಹೆಚ್ಚಾಗಬಹುದು. ಮೂರ್ನಾಲ್ಕು ಕಿಲೋಮೀಟರ್ ದೂರಕ್ಕೆ ಗಂಟೆಗಟ್ಟಲೆ ಕಾಲ ಸವೆಯುವುಷ್ಟು ಅರಿಭಯಂಕರ ಟ್ರಾಫಿಕ್ ಇರುವ ವೈಟ್​ಫೀಲ್ಡ್​ನಲ್ಲಿ ಈಪಾಟಿ ಬೇಡಿಕೆಯಾ ಎಂದನಿಸಬಹುದು.

Office Demand: ಬೆಂಗಳೂರಿನ ವೈಟ್​ಫೀಲ್ಡ್​ನಲ್ಲಿ ಭಯಂಕರ ಟ್ರಾಫಿಕ್ ಇದ್ದರೂ ಕಚೇರಿ ಸ್ಥಳಕ್ಕೆ ಭಾರೀ ಡಿಮ್ಯಾಂಡ್; ಕಾರಣ ಇದು
ಟ್ರಾಫಿಕ್ ಕಿರಿಕಿರಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 28, 2023 | 10:42 AM

Share

ಬೆಂಗಳೂರು: ಭಾರತದ ಸಿಲಿಕಾನ್ ಸಿಟಿ ಎಂದನಿಸಿರುವ ಬೆಂಗಳೂರಿನಲ್ಲಿ ಆಫೀಸ್ ಸ್ಪೇಸ್​ಗೆ (Office Space) ಯಾವಾಗಲೂ ಬೇಡಿಕೆ ಇರುವಂಥದ್ದೇ. ಭಾರೀ ಟ್ರಾಫಿಕ್ ಕಿರಿಕಿರಿ ಇದ್ದರೂ ಬೇರೆ ಹಲವಾರು ಅನುಕೂಲಕರ ಕಾರಣಗಳಿಂದ ಉದ್ಯಾನನಗರಿಯಲ್ಲಿ ವಾಣಿಜ್ಯ ಮತ್ತು ಔದ್ಯಮಿಕ ಚಟುವಟಿಕೆ ಬಹಳ ಜೀವಂತ ಇರುತ್ತದೆ. ಮುಂಬೈ ಬಿಟ್ಟರೆ ಬೆಂಗಳೂರಿನಲ್ಲೇ ಅತಿಹೆಚ್ಚು ಆಫೀಸ್ ಸ್ಪೇಸ್ ಬಾಡಿಗೆ ದರ ಇರುವುದು. ಈಗ ನಗರದ ವೈಟ್​ಫೀಲ್ಡ್ ಪ್ರದೇಶದತ್ತ ಬಹಳ ಕಂಪನಿಗಳ ಚಿತ್ತ ನೆಟ್ಟಿದೆ. ರಿಯಲ್ ಎಸ್ಟೇಟ್ ಕನ್ಸಲ್ಟೆಂಟ್ ಸಂಸ್ಥೆ ಎನಿಸಿದ ಕಾಲಿಯರ್ಸ್ (Colliers) ಪ್ರಕಾರ ವೈಟ್​ಫೀಲ್ಡ್​ನಲ್ಲಿ ಮುಂದಿನ ಎರಡು ವರ್ಷದಲ್ಲಿ ಕಚೇರಿ ಸ್ಥಳಗಳ ಬಾಡಿಗೆ ಶೇ. 10ರಷ್ಟು ಹೆಚ್ಚಾಗಬಹುದು. ಮೂರ್ನಾಲ್ಕು ಕಿಲೋಮೀಟರ್ ದೂರಕ್ಕೆ ಗಂಟೆಗಟ್ಟಲೆ ಕಾಲ ಸವೆಯುವುಷ್ಟು ಅರಿಭಯಂಕರ ಟ್ರಾಫಿಕ್ ಇರುವ ವೈಟ್​ಫೀಲ್ಡ್​ನಲ್ಲಿ ಈಪಾಟಿ ಬೇಡಿಕೆಯಾ ಎಂದನಿಸಬಹುದು. ವೈಟ್​ಫೀಲ್ಡ್​ನಲ್ಲಿ ಟ್ರಾಫಿಕ್ ಕಿರಿಕಿರಿ ತುಸು ಕಡಿಮೆ ಆಗುವಂತೆ ಸೌಕರ್ಯವ್ಯವಸ್ಥೆ ಉತ್ತಮಗೊಳ್ಳಲಿರುವುದು ಇದಕ್ಕೆ ಕಾರಣ.

ವೈಟ್​ಫೀಲ್ಡ್​ನಲ್ಲಿ ಮೆಟ್ರೋ ರೈಲು ತಂದಿತ್ತ ಭಾಗ್ಯ

ಭೈಯಪ್ಪನಹಳ್ಳಿ ವೈಟ್​ಫೀಲ್ಡ್ ಮೆಟ್ರೋ ಯೋಜನೆ ಸದ್ಯದಲ್ಲೇ ಪೂರ್ಣಗೊಳ್ಳಲಿದೆ. ಇದರಿಂದ ಈ ಭಾಗದಲ್ಲಿ ಸಾಕಷ್ಟು ಅನುಕೂಲವಾಗಲಿದೆ. ಅದರಲ್ಲೂ ಐಟಿ ಕಂಪನಿಗಳೇ ಹೆಚ್ಚಿರುವ ಈ ಪ್ರದೇಶದಲ್ಲಿ ಮೆಟ್ರೋ ರೈಲು ಓಡಾಡುವುದರಿಂದ ಐಟಿ ಉದ್ಯೋಗಿಗಳಿಗೆ ಭಾರೀ ಅನುಕೂಲವಾಗಲಿದೆ. ಹೀಗಾಗಿ, ಮುಂದಿನ ಎರಡು ವರ್ಷದಲ್ಲಿ ವೈಟ್​ಫೀಲ್ಡ್​ನಲ್ಲಿ ಕಚೇರಿ ಸ್ಥಳಗಳಿಗೆ ಒಳ್ಳೆಯ ಬೇಡಿಕೆ ಬರುವ ನಿರೀಕ್ಷೆ ಇದೆ ಎಂದು ಕಾಲಿಯರ್ಸ್ ಸಂಸ್ಥೆ ತನ್ನ ‘ಬೆಂಗಳೂರು ಮೆಟ್ರೋ ರೈಲ್: ಕೀ ಆಫೀಸ್ ಮಾರ್ಕೆಟ್ ಇಂಪ್ಯಾಕ್ಟ್’ ಎಂಬ ತನ್ನ ವರದಿಯಲ್ಲಿ ತಿಳಿಸಿದೆ.

ಇದನ್ನೂ ಓದಿAfter IPL: ವೀಕ್ಷಣೆಯಲ್ಲಿ ದಾಖಲೆ ಬರೆದಿರುವ ಜಿಯೋ ಸಿನಿಮಾ ಒಟಿಟಿಯ ಕಥೆ ಐಪಿಎಲ್ ಮುಗಿದ ಬಳಿಕ ಏನಾಗುತ್ತೆ?

ವೈಟ್​ಫೀಲ್ಡ್ ಬೆಂಗಳೂರಿನಲ್ಲೇ ಎರಡನೇ ಅತಿಹೆಚ್ಚು ಕಚೇರಿ ಮಾರುಕಟ್ಟೆ ಎನಿಸಿದೆ. ಅಂದರೆ ಕಚೇರಿ ಸ್ಥಳಗಳು ಅತಿಹೆಚ್ಚು ಇರುವ ಪ್ರದೇಶಗಳಲ್ಲಿ ವೈಟ್​ಫೀಲ್ಡ್ ಎರಡನೇ ಸ್ಥಾನಪಡೆಯುತ್ತದೆ. ಇಲ್ಲಿ 40.4 ಮಿಲಿಯನ್ ಚದರ ಅಡಿಯಷ್ಟು ಕಚೇರಿ ಸ್ಥಳಗಳಿವೆ. ಮೆಟ್ರೋ ಯೋಜನೆ ಈ ಮಾರ್ಗಕ್ಕೆ ಬರುತ್ತದೆ ಎಂದಾದ ಬಳಿಕ ಕಚೇರಿ ಸ್ಥಳಗಳಿಗೆ ಹೆಚ್ಚು ಬೇಡಿಕೆ ಬಂದಿದೆ. ಈಗ ಯೋಜನೆ ಪೂರ್ಣಗೊಳ್ಳುವ ಹಂತಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚುತ್ತಿದೆ. ಮೆಟ್ರೋ ಓಡಾಟ ಶುರುವಾದ ಬಳಿಕ ವೈಟ್​ಫೀಲ್ಡ್​ನಲ್ಲಿ ಕಚೇರಿ ಸ್ಥಳಗಳಲ್ಲಿ ಇನ್ನಿಲ್ಲದಷ್ಟು ಡಿಮ್ಯಾಂಡ್ ಬರಲಿದೆ.

ಬೆಂಗಳೂರಿನಲ್ಲಿ ಈಗೀಗ ಹೆಚ್ಚೆಚ್ಚು ಟ್ರೆಂಡಿಂಗ್​ನಲ್ಲಿರುವುದು ಕೋ ವರ್ಕಿಂಗ್ ಸ್ಪೇಸ್​ಗಳು. ಅಂದರೆ, ಯಾರು ಬೇಕಾದರೂ ಬಂದು ನಿರ್ದಿಷ್ಟ ಬಾಡಿಗೆ ಕೊಟ್ಟು ಕೆಲಸ ಮಾಡಬಹುದಾದ ಆಫೀಸ್ ಸ್ಪೇಸ್​ಗಳು ಇವು. ಬೆಂಗಳೂರಿನ ಒಟ್ಟು ಆಫೀಸ್ ಲೀಸಿಂಗ್​ಲ್ಲಿ ಶೇ. 13ರಷ್ಟು ಸ್ಥಳವು ಕೋವರ್ಕಿಂಗ್ ಸ್ಪೇಸ್​ನದ್ದಾಗಿದೆ. ಆದರೆ, ಟ್ರಾಫಿಕ್ ಕಿರಿಕಿರಿ ಹೆಚ್ಚು ಇರುವ ವೈಟ್​ಫೀಲ್ಡ್​ನಲ್ಲಿ ಇಂಥ ಕಚೇರಿಗಳು ಇರುವುದು ಕಡಿಮೆ. ಆದರೆ, ಮೆಟ್ರೋ ಆರಂಭವಾದ ಬಳಿಕ ಈ ವರ್ಕ್​ಸ್ಪೇಸ್​ಗಳಿಗೆ ವೈಟ್​ಫೀಲ್ಡ್​ನಲ್ಲಿ ಬೇಡಿಕೆ ಹೆಚ್ಚಬಹುದು ಎಂದು ರಿಯಲ್ ಎಸ್ಟೇಟ್ ಕನ್ಸಲ್ಟೆಂಟ್ ಕಂಪನಿ ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ