Viral Video : ಇದು ಹೋಳಿ ಕುಣಿತ, ರಾಮಾಯಣದ ಹಾಡುಗಳನ್ನು ಹಾಡಿ ಹಾರೈಸುವ ಸುಂದರ ಆಚರಣೆ

ಇಂದಿನ ಜನರು ಆಧುನಿಕತೆಯತ್ತ ಸಾಗುತ್ತಿದ್ದೂ ತಮ್ಮ ಆಚಾರ ವಿಚಾರಗಳು ಸಂಸ್ಕೃತಿ ಹಾಗೂ ಸಂಪ್ರದಾಯಗಳನ್ನು ಮರೆಯುತ್ತಿದ್ದಾರೆ. ರಭಸದಲ್ಲಿ ನಮ್ಮ ಮೂಲ ಸಂಸ್ಕೃತಿ ಮರೆಯುತ್ತಿದ್ದೇವೆ. ಆದರೆ ನಮ್ಮ ಹಿರಿಯರ ಕಾಲ ಹಬ್ಬದ ಆಚರಣೆಗಳು ಮೂಲೆ ಸೇರುತ್ತಿವೆ. ಆದರೆ ಕರಾವಳಿಯಲ್ಲಿ ಮರಾಠಿ ಸಮುದಾಯದವರು ಹೋಳಿ ಹಬ್ಬದಂದು ತಮ್ಮ ವಿಶಿಷ್ಟ ಆಚರಣೆಯ ಮೂಲಕ ಗಮನ ಸೆಳೆಯುತ್ತಾರೆ. ಮರಾಠ ಜನಾಂಗದವರ ಹೋಳಿ ಹಬ್ಬದ ಆಚರಣೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದೆ. ಬಣ್ಣಗಳ ಎರಚಾಟವಿಲ್ಲದ ಇವರ ಹೋಳಿ ಹಬ್ಬವು ಅದ್ದೂರಿಯ ಆಚರಣೆಯೊಂದಿಗೆ ಆಕರ್ಷಕವಾದ ವೇಷ ಭೂಷಣ ಕಂಡು ಬೆರಗಾಗಿದ್ದಾರೆ.

Viral Video : ಇದು ಹೋಳಿ ಕುಣಿತ, ರಾಮಾಯಣದ ಹಾಡುಗಳನ್ನು ಹಾಡಿ ಹಾರೈಸುವ ಸುಂದರ ಆಚರಣೆ
ವೈರಲ್​​ ವಿಡಿಯೋ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 23, 2024 | 2:55 PM

ಹೋಳಿ ಹಬ್ಬವನ್ನು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತದೆ. ಬಣ್ಣಗಳ ಹಬ್ಬವನ್ನು ಪ್ರತೀ ವರ್ಷ ಫಾಲ್ಗುಣ ಮಾಸದ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಒಂದೊಂದು ಕಡೆಗಳಲ್ಲಿ ಒಂದೊಂದು ರೀತಿಯ ಆಚರಣೆ ಹಾಗೂ ಸಂಪ್ರದಾಯವಿದ್ದು, ಆದರೆ ತುಳುನಾಡಿನಲ್ಲಿ ಹೋಳಿ ಕುಣಿತ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಮರಾಠಿ ಸಮುದಾಯ ಮತ್ತು ಕುಡುಬಿ ಜನಾಂಗ ತುಳುನಾಡಿನ ಸಂಸ್ಕೃತಿಯೊಂದಿಗೆ ವಿಶಿಷ್ಟ ಕಲೆಯಾಗಿ ಆಚರಿಸಿಕೊಂಡು ಬರುತ್ತಿವೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮರಾಠಿ ಸಮುದಾಯದವರ ಹೋಳಿ ಹಬ್ಬದ ಸಡಗರ ಸಂಭ್ರಮವು ಎಲ್ಲರ ಗಮನ ಸೆಳೆಯುತ್ತಿವೆ.

ಉಡುಪಿಯ ಕಂಡೀರಾ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತುಳುನಾಡಿನ ಮರಾಠ ಜನಾಂಗದವರ ವಿಶಿಷ್ಟ ಹೋಳಿ ಆಚರಣೆಯ ವಿಡಿಯೋವೊಂದನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದೊಂದಿಗೆ ‘ದಶಮಿಯಿಂದ ಹುಣ್ಣಿಮೆಯವರೆಗೆ ಮನೆ ಮನೆಗೆ ಹೋಗಿ ಕುಣಿದು, ರಾಮಾಯಣದ ಹಾಡುಗಳನ್ನು ಹಾಡಿ ಹಾರೈಸುವ ಸುಂದರ ಆಚರಣೆ’ ಎಂದು ಬರೆದುಕೊಳ್ಳಲಾಗಿದೆ. ಈ ಕರಾವಳಿಯ ಈ ವಿಶಿಷ್ಟ ಹೋಳಿ ಆಚರಣೆಯ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆಯುತ್ತಿವೆ.

ವೈರಲ್​​ ವಿಡಿಯೋ ಇಲ್ಲಿದೆ:

ಈ ವಿಡಿಯೋದಲ್ಲಿ ಮರಾಠಿ ಸಮುದಾಯದ ಪುರುಷರು ವಿಶೇಷವಾದ ವೇಷ ಭೂಷಣ ತೊಟ್ಟು ಮನೆ ಮನೆಗೆ ಭೇಟಿ ನೀಡಿ ನೃತ್ಯ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ತುಳಜಾ ಭವಾನಿ ಇವರ ಆರಾಧ್ಯ ದೇವತೆವಾಗಿದ್ದು, ಆಕೆಗೆ ಪೂಜೆ ಸಲ್ಲಿಸಿದ ಬಳಿಕ ಕೂಡು ಕುಟುಂಬದ ಯಜಮಾನರೊಂದಿಗೆ ತಂಡ ಕಟ್ಟಿಕೊಂಡು ಇವರು ಮನೆಮನೆಗೆ ತೆರಳುತ್ತಾರೆ. ಏಕಾದಶಿಯಿಂದ ಐದು ದಿನ ಈ ಜನಪದ ಮೇಳ ಸಂಚಾರಕ್ಕೆ ಹೊರಡುತ್ತದೆ ಎಂದು ಹೋಳಿ ಹಬ್ಬದ ಆಚರಣೆಯ ಕ್ರಮವನ್ನು ಈ ಸಮುದಾಯದವರು ವಿವರಿಸಿದ್ದಾರೆ.

ಇದನ್ನೂ ಓದಿ: ತನ್ನ ತೊಡೆಯ ಚರ್ಮದಿಂದ ತಾಯಿಗೆ ಪಾದುಕೆ ಮಾಡಿದ ಕಲಿಯುಗದ ಶ್ರವಣ ಕುಮಾರ

ಈ ವಿಡಿಯೋದಲ್ಲಿ ಕುಣಿತದಾರಿಗಳು ಹಿಜಾರ, ನೆರಿ ಅಂಗಿ, ಶಲ್ಯ , ಕಾಲ್ಗೆಜ್ಜೆ, ತಲೆಗೆ ರುಮಾಲು ಸುತ್ತಿ ಅದಕ್ಕೆ ಕಿರೀಟ ಹಾಗೂ ಹೂವುಗಳನ್ನು ಸುತ್ತಿರುವುದನ್ನು ನೋಡಬಹುದಾಗಿದೆ. ಹೋಳಿ ಹಬ್ಬದ ನೃತ್ಯಕ್ಕೆ ಗುಮ್ಮಟೆಯು ಪ್ರಮುಖ ಆಕರ್ಷಣೆಯಾಗಿದ್ದು, ತಾಳ ಹಾಗೂ ಗುಮ್ಮಟೆಯನ್ನು ಬಾರಿಸುತ್ತ ಹೋಳಿ ನೃತ್ಯ ಮಾಡುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಕರಾವಳಿಯ ಮರಾಠ ಜನಾಂಗದ ಹೋಳಿ ಆಚರಣೆಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿವೆ.

Published On - 2:50 pm, Sat, 23 March 24

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ