ಮಕ್ಕಳು ಬಾಲ್ಯದಿಂದ ಯೌವನಕ್ಕೆ ಕಾಲಿಡುತ್ತಿದ್ದಂತೆ ಅವರ ಮೇಲೆ ಯಾವುದೇ ಕೆಟ್ಟ ಶಕ್ತಿಗಳು ಬೀಳಬಾರದು ಎಂಬ ಕಾರಣಕ್ಕೆ ಶ್ವಾನಗಳೊಂದಿಗೆ ವಿವಾಹ ಮಾಡಿಸುವುದು ಹಿಂದಿನಿಂದಲೂ ನಡೆದುಕೊಂಡ ಬಂದ ಪದ್ಧತಿ ಎಂದು ಹೇಳುತ್ತಾರೆ ಒಡಿಶಾದ ಬಾಲಸೋರ್ ಜಿಲ್ಲೆಯ ಸಿಂಗ್ ಬುಡಕಟ್ಟು ಸಮುದಾಯದ ಜನ. ಹೌದು ಇತ್ತೀಚೆಗಷ್ಟೇ ಇಂತಹ ಘಟನೆ ಒಡಿಶಾದಲ್ಲಿ ನಡೆದಿದೆ.
ಒಡಿಶಾದ ಬಾಲಸೋರ್ ಜಿಲ್ಲೆಯ ಬಂಧ್‌ಸಾಹಿ ಗ್ರಾಮದ ಸಿಂಗ್ ಬುಡಕಟ್ಟು ಜನಾಂಗವು ಪೂರ್ವಜರ ಕಾಲದಿಂದಲೂ ಶ್ವಾನದೊಂದಿಗೆ ವಿವಾಹ ಮಾಡುವ ಸಂಪ್ರದಾಯವನ್ನು ನಡೆಸಿಕೊಂಡು ಬಂದಿದ್ದಾರೆ. ಇತ್ತೀಚೆಗಷ್ಟೇ 11 ವರ್ಷದ ತಪನ್ ಸಿಂಗ್ ಎಂಬ ಬಾಲಕನಿಗೆ ಹೆಣ್ಣು ಶ್ವಾನದೊಂದಿಗೆ ಹಾಗೂ 7 ವರ್ಷದ ಲಕ್ಷ್ಮಿ ಎಂಬ ಬಾಲಕಿಗೆ ಗಂಡು ಶ್ವಾನದೊಂದಿಗೆ ವಿವಾಹ ನಡೆದಿದೆ.
ಇದನ್ನೂ ಓದಿ: ಸಾವಯವ ರೆಸ್ಟೋರೆಂಟ್ ಉದ್ಘಾಟನೆಗೆ ಮುಖ್ಯ ಅತಿಥಿಯಾಗಿ ಆಗಮಿಸಿದ ಗೋಮಾತೆ
ಮಕ್ಕಳನ್ನು ದುಷ್ಟ ಶಕ್ತಿಯಿಂದ ದೂರಮಾಡಲು ಶ್ವಾನಗಳೊಂದಿಗೆ ವಿವಾಹ ಮಾಡಲಾಗುತ್ತದೆ. ಈ ರೀತಿ ಮದುವೆ ಮಾಡಿಸುವುದರಿಂದ ಮಕ್ಕಳ ಮೇಲೆ ಬೀಳುವ ದುಷ್ಟ ಶಕ್ತಿಗಳು ಪ್ರಾಣಿಯ ಮೇಲೆ ಬೀಳುತ್ತದೆ ಎಂದು ನಂಬುತ್ತಾರೆ ಈ ಬುಡಕಟ್ಟು ಜನಾಂಗದ ಜನರು. ಸಮುದಾಯದ ಸಂಪ್ರದಾಯಗಳ ಪ್ರಕಾರ, ಎರಡು ಮದುವೆಗಳನ್ನು ನಡೆಸಲಾಯಿತು ಮತ್ತು ಸಮುದಾಯದ ಹಬ್ಬದ ಜೊತೆಗೆ ಆಚರಣೆಗಳು ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ರವರೆಗೆ ಮುಂದುವರೆಯಿತು” ಎಂದು ಗ್ರಾಮಸ್ಥ ಸಾಗರ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: