Mohanlal: ವೈರಲ್​ ಆಗಿದೆ ‘ಮಲೈಕೋಟೈ ವಾಲಿಬನ್​’ ಫಸ್ಟ್​ ಲುಕ್​; 62ರ ಪ್ರಾಯದಲ್ಲೂ ಮೋಹನ್​ಲಾಲ್​ ಸಾಹಸ

Malaikottai Vaaliban First Look Poster: ‘ಮಲೈಕೋಟೈ ವಾಲಿಬನ್​​’ ಸಿನಿಮಾ ಕನ್ನಡ, ತಮಿಳು, ತೆಲುಗು, ಹಿಂದಿಗೂ ಡಬ್​ ಆಗಿ ಬಿಡುಗಡೆ ಆಗಲಿದೆ. ಇದರ ಫಸ್ಟ್​ ಲುಕ್​ ಪೋಸ್ಟರ್​ ಗಮನ ಸೆಳೆಯುತ್ತಿದೆ.

Mohanlal: ವೈರಲ್​ ಆಗಿದೆ ‘ಮಲೈಕೋಟೈ ವಾಲಿಬನ್​’ ಫಸ್ಟ್​ ಲುಕ್​; 62ರ ಪ್ರಾಯದಲ್ಲೂ ಮೋಹನ್​ಲಾಲ್​ ಸಾಹಸ
ಮೋಹನ್​ಲಾಲ್​
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on:Apr 20, 2023 | 8:10 AM

ಮಲಯಾಳಂ ಚಿತ್ರರಂಗದಲ್ಲಿ ನಟ ಮೋಹನ್​ಲಾಲ್​ (Mohanlal) ಅವರು ಈಗಲೂ ಸೂಪರ್​ ಸ್ಟಾರ್​ ಆಗಿ ಬೇಡಿಕೆ ಉಳಿಸಿಕೊಂಡಿದ್ದಾರೆ. ಈಗ ಅವರಿಗೆ 62 ವರ್ಷ ವಯಸ್ಸು. ಈ ಪ್ರಾಯದಲ್ಲಿ ಕೂಡ ಅವರು ಸಾಹಸಮಯ ಸಿನಿಮಾಗಳನ್ನು ಮಾಡುತ್ತಿದ್ದಾರೆ. ‘ಲೂಸಿಫರ್​’, ‘ದೃಶ್ಯಂ 2’, ‘ಮರಕ್ಕರ್​’ ಮುಂತಾದ ಚಿತ್ರಗಳ ಮೂಲಕ ಗಮನ ಸೆಳೆದ ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಪ್ರಸ್ತುತ ಅವರು ‘ಮಲೈಕೋಟೈ ವಾಲಿಬನ್​​’ (Malaikottai Vaaliban) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಫಸ್ಟ್​ಲುಕ್​ ಪೋಸ್ಟರ್​ (Malaikottai Vaaliban First Look) ಬಿಡುಗಡೆ ಮಾಡಲಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಈ ಪೋಸ್ಟರ್​ ವೈರಲ್​ ಆಗಿದೆ. ಮೋಹನ್​ಲಾಲ್​ ಅವರ ಲುಕ್​ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ.

ಟ್ವಿಟರ್​​ನಲ್ಲಿ ಮೋಹನ್​ಲಾಲ್​ ಅವರು ಈ ಪೋಸ್ಟರ್​ ಹಂಚಿಕೊಂಡಿದ್ದಾರೆ. ಎಂಟೂವರೆ ಸಾವಿರಕ್ಕೂ ಅಧಿಕ ಮಂದಿ ಇದನ್ನು ರೀಟ್ವೀಟ್​ ಮಾಡಿದ್ದಾರೆ. 2 ಸಾವಿರಕ್ಕೂ ಹೆಚ್ಚು ಕಮೆಂಟ್​ಗಳು ಬಂದಿವೆ. ಮರಳುಗಾಡಿನಂತಹ ಪ್ರದೇಶದಲ್ಲಿ ಮೋಹನ್​ಲಾಲ್​ ಅವರು ಹಗ್ಗ ಹಿಡಿದು ಆರ್ಭಟಿಸುತ್ತಿರುವ ರೀತಿಯಲ್ಲಿ ಪೋಸ್​ ನೀಡಿದ್ದಾರೆ. ಈ ಸಿನಿಮಾದಲ್ಲಿ ಭರ್ಜರಿ ಸಾಹಸ ದೃಶ್ಯಗಳು ಇರಲಿವೆ ಎಂಬುದಕ್ಕೆ ಈ ಪೋಸ್ಟರ್​ನಲ್ಲಿ ಸುಳಿವು ಸಿಕ್ಕಿದೆ.

ಮಲಯಾಳಂನ ‘ಮಲೈಕೋಟೈ ವಾಲಿಬನ್​​’ ಸಿನಿಮಾ ಕನ್ನಡ, ತಮಿಳು, ತೆಲುಗು, ಹಿಂದಿಗೂ ಡಬ್​ ಆಗಿ ಬಿಡುಗಡೆ ಆಗಲಿದೆ. ಲಿಜೋ ಜೋಸ್​ ಪೆಲ್ಲಿಸೆರಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ‘ಜಾನ್ ಆ್ಯಂಡ್​ ಮೇರಿ ಕ್ರಿಯೇಟೀವ್’ ಬ್ಯಾನರ್ ಮೂಲಕ ಶಿಬು ಬೇಬಿ ಜಾನ್ ಅವರು ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ‘ಸೆಂಚುರಿ ಫಿಲ್ಮ್ಸ್​’ ಸಂಸ್ಥೆಯ ಕೋಚುಮನ್ ಮತ್ತು ‘ಮ್ಯಾಕ್ಸ್ ಲ್ಯಾಬ್‌’ ಬ್ಯಾನರ್​ನ ಅನೂಪ್ ಕೂಡ ನಿರ್ಮಾಣದಲ್ಲಿ ಪಾಲುದಾರಿಕೆ ಹೊಂದಿದ್ದಾರೆ.

ಇದನ್ನೂ ಓದಿ: Mohanlal Birthday: ಕುಸ್ತಿಯಲ್ಲಿ ಸ್ಟೇಟ್​ ಚಾಂಪಿಯನ್​ ಆಗಿದ್ದ ಮೋಹನ್​ಲಾಲ್​ ನಂತರ ನಟನಾಗಿದ್ದು ಹೇಗೆ?

‘ಮಲೈಕೋಟೈ ವಾಲಿಬನ್​​’ ಸಿನಿಮಾದ ಕಥೆ ಬಗ್ಗೆ ಚಿತ್ರತಂಡ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ. ಇದು ಯಾವ ಪ್ರಕಾರಕ್ಕೆ ಸೇರುವ ಸಿನಿಮಾ ಎಂಬುದು ಕೂಡ ಬಹಿರಂಗ ಆಗಿಲ್ಲ. ಪೋಸ್ಟರ್​ ನೋಡಿದರೆ ಇದು ಐತಿಹಾಸಿಕ ಅಥವಾ ಫ್ಯಾಂಟಸಿ ಸಿನಿಮಾ ಆಗಿರಬಹುದು ಎಂದು ಪ್ರೇಕ್ಷಕರು ಊಹಿಸುತ್ತಿದ್ದಾರೆ.

ಇದನ್ನೂ ಓದಿ: Mohanlal: ಡೈರೆಕ್ಷನ್‌ ಕ್ಯಾಪ್ ತೊಟ್ಟ ಮೊದಲ ಸಿನಿಮಾದಲ್ಲೇ‌ ಗುರುತು ಸಿಗದಷ್ಟು ಬದಲಾದ ಮೋಹನ್‌ಲಾಲ್; ಏನಿದರ ವಿಶೇಷ?

ಜನವರಿ 18ರಿಂದ ‘ಮಲೈಕೋಟೈ ವಾಲಿಬನ್​​’ ಚಿತ್ರಕ್ಕೆ ಜೈಸಲ್ಮರ್, ರಾಜಸ್ತಾನ್ ಮುಂತಾದ ಲೊಕೇಷನ್​ಗಳಲ್ಲಿ  ಚಿತ್ರೀಕರಣ ನಡೆಯುತ್ತಿದೆ. ಪಿ.ಎಸ್​. ರಫೀಕ್​ ಅವರು ಚಿತ್ರಕಥೆ ಬರೆದಿದ್ದಾರೆ. ಮಧು ನೀಲಕಂದನ್​ ಛಾಯಾಗ್ರಹಣ, ಪ್ರಶಾಂತ್​ ಪಿಳ್ಳೈ ಸಂಗೀತ ನಿರ್ದೇಶನ, ದೀಪು ಜೋಸೆಫ್​ ಅವರು ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:15 am, Thu, 20 April 23

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್