AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋಹನ್​ಲಾಲ್ ಅಸಲಿ ಮುಖ ಬಯಲು ಮಾಡ್ತೀನಿ, ಅವರ ಕುಕೃತ್ಯ ಬಯಲು ಮಾಡುವ ಪುಸ್ತಕ ಬರೀತೀನಿ: ಮಲಯಾಳಂ ನಟ

ಮಲಯಾಳಂ ಸ್ಟಾರ್ ನಟ ಮೋಹನ್​ಲಾಲ್ ಬಗ್ಗೆ ಅದೇ ಚಿತ್ರರಂಗದ ಹಿರಿಯ ನಟ ಶ್ರೀನಿವಾಸನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮೋಹನ್​ಲಾಲ್ ಒಬ್ಬ ಬೂಟಾಟಿಕೆ ವ್ಯಕ್ತಿತ್ವವುಳ್ಳ ವ್ಯಕ್ತಿ, ಪುಸ್ತಕ ಬರೆದು ಆತನ ಕುಕೃತ್ಯಗಳನ್ನು ಬಹಿರಂಗಪಡಿಸುತ್ತೇನೆ ಎಂದಿದ್ದಾರೆ.

ಮೋಹನ್​ಲಾಲ್ ಅಸಲಿ ಮುಖ ಬಯಲು ಮಾಡ್ತೀನಿ, ಅವರ ಕುಕೃತ್ಯ ಬಯಲು ಮಾಡುವ ಪುಸ್ತಕ ಬರೀತೀನಿ: ಮಲಯಾಳಂ ನಟ
ಮೋಹನ್ ಲಾಲ್
ಮಂಜುನಾಥ ಸಿ.
|

Updated on: Apr 03, 2023 | 6:58 PM

Share

ಮಲಯಾಳಂ (Malayalam) ಸ್ಟಾರ್ ನಟ ಮೋಹನ್​ಲಾಲ್​ಗೆ (Mohanlal) ದೊಡ್ಡ ಅಭಿಮಾನಿ ವರ್ಗವಿದೆ. ಮಲಯಾಳಂ ಮಾತ್ರವೇ ಅಲ್ಲದೆ ಇತರೆ ಚಿತ್ರರಂಗಗಳಲ್ಲಿಯೂ ಮೋಹನ್​ಲಾಲ್​ ಅವರಿಗೆ ಗೌರವ, ಆದರಗಳಿವೆ. ಆದರೆ ಮಲಯಾಳಂ ನಟರೊಬ್ಬರು ಮೋಹನ್​ಲಾಲ್ ದುಷ್ಟ ವ್ಯಕ್ತಿ, ಅವರ ನಿಜಬಣ್ಣ ಬಯಲು ಮಾಡುತ್ತೇನೆ. ಸಾಯುವುದರೊಳಗೆ ಪುಸ್ತಕವೊಂದನ್ನು ಬರೆದು ಅದರಲ್ಲಿ ಮೋಹನ್​ಲಾಲ್ ಮಾಡಿರುವ ಕುಕೃತ್ಯಗಳನ್ನೆಲ್ಲ ಬಯಲು ಮಾಡುತ್ತೇನೆ ಎಂದಿದ್ದಾರೆ.

ಮಲಯಾಳಂ ಚಿತ್ರರಂಗದ ನಟ ಶ್ರೀನಿವಾಸನ್ (Sreenivasan) ಆಗಾಗ್ಗೆ ಮೋಹನ್​ಲಾಲ್​ ಬಗ್ಗೆ ಕಿಡಿ ಕಾರುತ್ತಲೇ ಇರುತ್ತಾರೆ. ಹಲವು ಸಿನಿಮಾಗಳಲ್ಲಿ ಈ ಇಬ್ಬರೂ ಒಟ್ಟಿಗೆ ನಟಿಸಿದ್ದಾರಾದರೂ ಇಬ್ಬರೂ ದೂರ-ದೂರ. ಇತ್ತೀಚೆಗೆ ಮಾಧ್ಯಮಗಳೊಟ್ಟಿಗೆ ಮಾತನಾಡುತ್ತಾ, ಮೋಹನ್​ಲಾಲ್ ಬೂಟಾಟಿಕೆಯುಳ್ಳ ವ್ಯಕ್ತಿ. ಆತನದ್ದು ಒಳಗೊಂಡು-ಹೊರಗೊಂದು ವ್ಯಕ್ತಿತ್ವ. ಸಾಯುವುದರ ಒಳಗೆ ಪುಸ್ತಕ ಬರೆದು ಆತನ ಕುಕೃತ್ಯಗಳನ್ನು ಬಯಲು ಮಾಡುತ್ತೇನೆ ಎಂದಿದ್ದಾರೆ.

”ಪ್ರೇಮ್ ನಜೀರ್, ತಾವು ನಿರ್ದೇಶನ ಮಾಡುವ ಸಿನಿಮಾದಲ್ಲಿ ನಟಿಸುವಂತೆ ಮೋಹನ್​ಲಾಲ್ ಅನ್ನು ಕೇಳಿದ್ದರು. ಕಡತ್ತನಂದನ್ ಅಂಬಾಡಿ ಸಿನಿಮಾ ಚಿತ್ರೀಕರಣದ ವೇಳೆ ಪ್ರೇಮ್ ನಜೀರ್, ಮೋಹನ್​ಲಾಲ್​ಗೆ ಕತೆ ಹೇಳಿದ್ದರು. ಆದರೆ ಮೋಹನ್​ಲಾಲ್ ಅದರಲ್ಲಿ ಆಸಕ್ತಿ ತೋರಿಸಿರಲಿಲ್ಲ. ಬಳಿಕ ನಾನು ನಟರಾಜನ್ ಹೆಸರಿನ ಮಧ್ಯವರ್ತಿ ಮೂಲಕ ಮೋಹನ್​ಲಾಲ್​ಗೆ ಕತೆ ಹೇಳಿಸಿದೆ. ಕತೆ ಕೇಳಿ ಮೋಹನ್​ಲಾಲ್ ಆತನನ್ನು ಬೈದು ಬಿಟ್ಟ ಆ ನಂತರ ಅದೇ ಕತೆಯನ್ನು ಸಂದೇಸಮ್ ಹೆಸರಿನ ಸಿನಿಮಾ ಮಾಡಿದೆವು ಅದೂ ಸೂಪರ್ ಹಿಟ್ ಆಯಿತು” ಎಂದಿದ್ದಾರೆ ಶ್ರೀನಿವಾಸನ್.

ಪ್ರೇಮ್ ನಜೀರ್ ಸಾಯುವ ಮುನ್ನ ಮೋಹನ್​ಲಾಲ್​ಗೆ ಅಡ್ವಾನ್ಸ್ ಕೊಟ್ಟಿದ್ದರು. ಆದರೆ ಕೆಲವು ದಿನಗಳ ಬಳಿಕ ಅವರು ನಿಧನ ಹೊಂದಿದರು. ಆಗ ಮೋಹನ್​ಲಾಲ್, ಪ್ರೇಮ್ ನಜೀರ್ ಅವರ ಸಿನಿಮಾದಲ್ಲಿ ನಟಿಸುವ ಆಸೆ ನನಗಿತ್ತು ಎಂದು ಮಾಧ್ಯಮಗಳ ಮುಂದೆ ಹೇಳಿದ್ದು ಕೇಳಿ ನನಗೆ ರೇಜಿಗೆ ಹುಟ್ಟಿತು ಎಂದಿದ್ದಾರೆ ಶ್ರೀನಿವಾಸನ್.

ಪ್ರೇಮ್ ನಜೀರ್ ಶಾನವಾಜ್ ಸಹ ಈ ಬಗ್ಗೆ ಮಾತನಾಡಿದ್ದು, ‘ಪ್ರೇಮ್ ನಜೀರ್ ಅವರಿಗೆ ಮೋಹನ್​ಲಾಲ್ ಜೊತೆ ಸಿನಿಮಾ ಮಾಡುವ ಆಸೆಯಿತ್ತು. ಆದರೆ ಯಾವ ಸಮಸ್ಯೆಗಳಿಂದ ಅದು ಸೆಟ್ಟೇರಲಿಲ್ಲ ಎಂಬುದು ಗೊತ್ತಿಲ್ಲ. ಮೋಹನ್​ಲಾಲ್ ಆಗೆಲ್ಲ ಪ್ರಿಯದರ್ಶನ್ ಜೊತೆಗೆ ಚಿತ್ರಕತೆ ಚರ್ಚೆಗೆ ಬರುತ್ತಿದ್ದರು, ಆದರೆ ಆ ಸಿನಿಮಾ ಯಾಕೆ ಪ್ರಾರಂಭವಾಗಲಿಲ್ಲ ಎಂಬುದು ಗೊತ್ತಿಲ್ಲ” ಎಂದಿದ್ದಾರೆ. ಶ್ರೀನಿವಾಸನ್ ಮಾಡುತ್ತಿರುವ ಆರೋಪಗಳು ನಿಜವೇ ಎಂಬ ಪ್ರಶ್ನೆಗೆ, ಸತ್ಯ ಏನೆಂಬುದು ನನಗೆ ಗೊತ್ತಿಲ್ಲ ಆದರೆ ಶ್ರೀನಿವಾಸನ್ ಅವರು ಹೇಳಿದ ಮೇಲೆ ನಂಬದೇ ಇರಲಾಗುತ್ತಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Mohanlal Birthday: ಕುಸ್ತಿಯಲ್ಲಿ ಸ್ಟೇಟ್​ ಚಾಂಪಿಯನ್​ ಆಗಿದ್ದ ಮೋಹನ್​ಲಾಲ್​ ನಂತರ ನಟನಾಗಿದ್ದು ಹೇಗೆ?

ಮೋಹನ್​ಲಾಲ್ ಬ್ಯುಸಿ ಸ್ಟಾರ್ ನಟರಲ್ಲಿ ಒಬ್ಬರು. ಮಲಯಾಳಂ ಮಾತ್ರವೇ ಅಲ್ಲದೆ ಹಲವು ಭಾಷೆಗಳಲ್ಲಿ ನಟಿಸುತ್ತಿದ್ದಾರೆ. ರಜನೀಕಾಂತ್ ನಟನೆಯ ಜೈಲರ್ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿರುವ ಮೋಹನ್​ಲಾಲ್, ಲಿಜೊ ಜೋಸ್ ನಿರ್ದೇಶನದ ಮಲೈಕೋಟ್ಟೈ ವಾಲಿಬಾನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ದೃಶ್ಯಂ ನಿರ್ದೇಶಕ ಜೀತು ಜೋಸೆಫ್ ನಿರ್ದೇಶನದ ರಾಮ್ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಸೂಪರ್ ಹಿಟ್ ಸಿನಿಮಾ ಲುಸಿಫರ್​ನ ಎರಡನೇ ಭಾಗದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಇದರ ಜೊತೆಗೆ ಮೋಹನ್​ಲಾಲ್ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಬಾರೋಜ್ ಸಿನಿಮಾ ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್